AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಟಾಪ್ 10 ಶ್ರೀಮಂತ ಹೀರೋಗಳು ಇವರೇ ನೋಡಿ.. ಯಾರಿಗೆಲ್ಲ ಇದೆ ಸ್ಥಾನ?

ಪ್ರತಿ ಚಿತ್ರಕ್ಕೆ ನೂರಾರು ಕೋಟಿ ಸಂಭಾವನೆ ಪಡೆಯುವ ಸ್ಟಾರ್​ಗಳು ಭಾರತದಲ್ಲಿ ಇದ್ದಾರೆ. ಸಿನಿಮಾದಲ್ಲಿ ಫೇಮಸ್ ಆದ ಬಳಿಕ ಸಾಕಷ್ಟು ಬ್ರ್ಯಾಂಡ್​ಗಳಿಗೆ ಪ್ರಚಾರ ಮಾಡುವ ಅವಕಾಶ ಸಿಗುತ್ತದೆ. ಇದರಿಂದಲೂ ಹಣ ಹರಿದು ಬರುತ್ತದೆ. ಭಾರತದ ಟಾಪ್ 10 ಶ್ರೀಮಂತ ನಟರ ಪಟ್ಟಿ ಇಲ್ಲಿದೆ.

ಭಾರತದ ಟಾಪ್ 10 ಶ್ರೀಮಂತ ಹೀರೋಗಳು ಇವರೇ ನೋಡಿ.. ಯಾರಿಗೆಲ್ಲ ಇದೆ ಸ್ಥಾನ?
ಭಾರತದ ಶ್ರೀಮಂತ ನಟರು
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Aug 12, 2023 | 8:05 AM

Share

ಭಾರತದ ಚಿತ್ರರಂಗ ಸಾಕಷ್ಟು ಶ್ರೀಮಂತವಾಗಿದೆ. ಬಾಲಿವುಡ್ (Bollywood) ಮಾತ್ರವಲ್ಲದೆ, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ದೊಡ್ಡ ಬಜೆಟ್​ನ ಚಿತ್ರಗಳು ನಿರ್ಮಾಣ ಆಗುತ್ತವೆ. ಅದೇ ರೀತಿ ಸ್ಟಾರ್ ನಟರು ದೊಡ್ಡ ಮೊತ್ತದ ಸಂಭಾವನೆ ಪಡೆದುಕೊಳ್ಳುತ್ತಾರೆ. ಪ್ರತಿ ಚಿತ್ರಕ್ಕೆ ನೂರಾರು ಕೋಟಿ ಸಂಭಾವನೆ ಪಡೆಯುವ ಸ್ಟಾರ್​ಗಳು ಭಾರತದಲ್ಲಿ ಇದ್ದಾರೆ. ಸಿನಿಮಾದಲ್ಲಿ ಫೇಮಸ್ ಆದ ಬಳಿಕ ಸಾಕಷ್ಟು ಬ್ರ್ಯಾಂಡ್​ಗಳಿಗೆ ಪ್ರಚಾರ ಮಾಡುವ ಅವಕಾಶ ಸಿಗುತ್ತದೆ. ಇದರಿಂದಲೂ ಹಣ ಹರಿದು ಬರುತ್ತದೆ. ಇದರ ಜೊತೆಗೆ ಉದ್ಯಮ ಆರಂಭಿಸಿ ಅದು ಕೈ ಹಿಡಿದರಂತೂ ಕೇಳುವ ಮಾತೇ ಇಲ್ಲ. ಭಾರತದ ಟಾಪ್ 10 ಶ್ರೀಮಂತ (Top 10 Rich Actors) ನಟರ ಪಟ್ಟಿ ಇಲ್ಲಿದೆ.

ಶಾರುಖ್ ಖಾನ್

ಭಾರತದ ಶ್ರೀಮಂತ ನಟರ ಪೈಕಿ ಶಾರುಖ್ ಖಾನ್​ಗೆ ಮೊದಲ ಸ್ಥಾನ ಇದೆ. ಪ್ರತಿ ಚಿತ್ರಕ್ಕೆ ಇವರು ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಐಪಿಎಲ್​ನಲ್ಲಿ ತಮ್ಮದೇ ತಂಡ ಹೊಂದಿದ್ದಾರೆ. ನಿರ್ಮಾಣ ಸಂಸ್ಥೆ ಇದೆ. ಹಲವು ಬ್ರ್ಯಾಂಡ್​​ಗಳಿಗೆ ಪ್ರಚಾರ ಮಾಡುತ್ತಾರೆ. ಇವರ ಒಟ್ಟೂ ಆಸ್ತಿ 6300 ಕೋಟಿ ರೂಪಾಯಿ.

ಹೃತಿಕ್ ರೋಷನ್

ಬಾಲಿವುಡ್​ನ ಟ್ಯಾಲೆಂಟೆಡ್​ ಹೀರೋಗಳ ಸಾಲಿನಲ್ಲಿ ಹೃತಿಕ್ ರೋಷನ್ ಇದ್ದಾರೆ. ಇವರು ಪ್ರತಿ ಸಿನಿಮಾಗೆ 50-60 ಕೋಟಿ ರೂಪಾಯಿ ಪಡೆದುಕೊಳ್ಳುತ್ತಾರೆ. ಇವರು ಬ್ರ್ಯಾಂಡ್ ಪ್ರಚಾರಕ್ಕೆ 10 ಕೋಟಿ ರೂಪಾಯಿ ಪಡೆಯುತ್ತಾರೆ. ಇವರು ತಮ್ಮದೇ ಬಟ್ಟೆ-ಶ್ಯೂ ಬ್ರ್ಯಾಂಡ್ ಹೊಂದಿದ್ದಾರೆ. ಇವರ ಆಸ್ತಿ 3100 ಕೋಟಿ ರೂಪಾಯಿ.

ಅಮಿತಾಭ್ ಬಚ್ಚನ್

ಬಾಲಿವುಡ್​ನ ಹಿರಿಯ ನಟ  ಅಮಿತಾಭ್ ಬಚ್ಚನ್ ಚಿತ್ರರಂಗದಲ್ಲಿ ಹಲವು ದಶಕಗಳಿಂದ ಆ್ಯಕ್ಟೀವ್ ಆಗಿದ್ದಾರೆ. ಇವರ ಅನುಭವ ಅಪಾರ. ಸಿನಿಮಾ ಮಾತ್ರವಲ್ಲದೆ, ಕಿರುತೆರೆ ಶೋ ‘ಕೌನ್ ಬನೇಗಾ ಕರೋಡ್ಪತಿ’ ನಡೆಸಿಕೊಡುತ್ತಾರೆ. ಇವರು ಪ್ರತಿ ಚಿತ್ರಕ್ಕೆ 10 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇವರ ಆಸ್ತಿ 3000 ಕೋಟಿ ರೂಪಾಯಿ. ಪ್ರಭಾಸ್ ಜೊತೆ ಇವರು ನಟಿಸುತ್ತಿರುವ ‘ಕಲ್ಕಿ 2898 ಎಡಿ’ ಮೊದಲ ಗ್ಲಿಂಪ್ಸ್ ಇತ್ತೀಚೆಗೆ ರಿಲೀಸ್ ಆಗಿ ಗಮನ ಸೆಳೆಯಿತು.

ಸಲ್ಮಾನ್ ಖಾನ್

ಬಾಲಿವುಡ್​ನಲ್ಲಿ ಸಲ್ಮಾನ್ ಖಾನ್ ಅವರದ್ದು ದೊಡ್ಡ ಹೆಸರು. ಇವರು ತಮ್ಮದೇ ಬಟ್ಟೆ ಬ್ರ್ಯಾಂಡ್ ಹಾಗೂ ಚಾರಿಟಿ ಹೊಂದಿದ್ದಾರೆ. ವಯಸ್ಸು 57 ದಾಟಿದರೂ ಮದುವೆ ಆಗುವ ಆಲೋಚನೆ ಮಾಡಿಲ್ಲ. ಇವರ ಆಸ್ತಿ 2850 ಕೋಟಿ ರೂಪಾಯಿ ಎನ್ನಲಾಗಿದೆ. ಇವರು ಸಾಕಷ್ಟು ಕಡೆಗಳಲ್ಲಿ ಪ್ರಾಪರ್ಟಿ ಹೊಂದಿದ್ದಾರೆ.

ಅಕ್ಷಯ್ ಕುಮಾರ್

ಬಾಲಿವುಡ್​ನಲ್ಲಿ ಅತಿ ವೇಗವಾಗಿ ಸಿನಿಮಾ ಕೆಲಸ ಮುಗಿಸುತ್ತಾರೆ ಅಕ್ಷಯ್ ಕುಮಾರ್. ಈ ಕಾರಣಕ್ಕೆ ವರ್ಷಕ್ಕೆ ಅವರ ನಟನೆಯ ಮೂರು-ನಾಲ್ಕು ಚಿತ್ರಗಳು ರಿಲೀಸ್ ಆಗುತ್ತವೆ. ಇವರ ಆಸ್ತಿ 2,660 ಕೋಟಿ ರೂಪಾಯಿ ಇದೆ ಎನ್ನಲಾಗಿದೆ. ಅತಿ ಹೆಚ್ಚು ಟ್ಯಾಕ್ಸ್ ಕಟ್ಟುವ ಭಾರತದ ಹೀರೋ ಎನ್ನುವ ಹೆಗ್ಗಳಿಕೆಗೆ ಇವರಿಗೆ ಇದೆ.

ಆಮಿರ್ ಖಾನ್

ನಟ ಆಮಿರ್ ಖಾನ್ ಅವರು ನಟನೆಯಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಹಾಗಂತ ಅವರಿಗೆ ಬೇಡಿಕೆ ಕಡಿಮೆ ಆಗಿಲ್ಲ. ಸಾಕಷ್ಟು ಉದ್ಯಮಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಇವರ ಆಸ್ತಿ 1862 ಕೋಟಿ ರೂಪಾಯಿ.

ರಾಮ್ ಚರಣ್

ದಕ್ಷಿಣದ ಖ್ಯಾತ ನಟ ರಾಮ್ ಚರಣ್ ಅವರು ‘ಆರ್​ಆರ್​ಆರ್’ ಚಿತ್ರದ ಮೂಲಕ ಗೆದ್ದು ಬೀಗಿದ್ದಾರೆ. ಈ ಚಿತ್ರದ ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದಿದೆ. ಈ ಸ್ಟಾರ್​ ನಟನಿಗೆ ಸಾಕಷ್ಟು ಬೇಡಿಕೆ ಇದೆ. ಇವರ ಆಸ್ತಿ 1370 ಕೋಟಿ ರೂಪಾಯಿ. ಇವರು ಖಾಸಗಿ ಜೆಟ್ ಕೂಡ ಹೊಂದಿದ್ದಾರೆ.

ಇದನ್ನೂ ಓದಿ: ಶಾರುಖ್ ಖಾನ್ ಅವರ ಒಟ್ಟೂ ಆಸ್ತಿ ಎಷ್ಟು ಗೊತ್ತಾ? ಭಾರತದ ಶ್ರೀಮಂತ ನಟನ ಬಳಿ ಇದೆ ಸಾವಿರಾರು ಕೋಟಿ ರೂಪಾಯಿ ಆಸ್ತಿ

ಅಕ್ಕಿನೇನಿ ನಾಗಾರ್ಜುನ

ನಟ ಹಾಗೂ ನಿರೂಪಕ ಅಕ್ಕಿನೇನಿ ನಾಗಾರ್ಜುನ ಅವರಿಗೆ ಸಖತ್ ಬೇಡಿಕೆ ಇದೆ. ಸ್ವಂತ ಜೆಟ್ ಹೊಂದಿರುವ ಇವರ ಆಸ್ತಿ 950 ಕೋಟಿ ರೂಪಾಯಿ. ಇವರು ಪ್ರತಿ ಸಿನಿಮಾಗೆ 10 ಕೋಟಿ ರೂಪಾಯಿ ಪಡೆಯುತ್ತಾರೆ. ಬಿಗ್ ಬಾಸ್ ನಿರೂಪಣೆಗೆ  15 ಕೋಟಿ ರೂ ಪಡೆಯುತ್ತಾರೆ ಎನ್ನಲಾಗಿದೆ.

ರಜನಿಕಾಂತ್

ಕಾಲಿವುಡ್ ಸ್ಟಾರ್ ನಟ ರಜನಿಕಾಂತ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಅವರ ನಟನೆಯ ‘ಜೈಲರ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದಿಂದ ಅವರಿಗೆ ಗೆಲುವು ಸಿಕ್ಕಿದೆ. ಇವರ ಆಸ್ತಿ 450 ಕೋಟಿ ರೂಪಾಯಿಗೂ ಮೀರಿದೆ.

ಅಲ್ಲು ಅರ್ಜುನ್

ಅಲ್ಲು ಅರ್ಜುನ್ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ. ಇವರ ಆಸ್ತಿ 380 ಕೋಟಿ ರೂಪಾಯಿ ಇದೆ. ಇವರು ತಮ್ಮದೇ ಮಲ್ಟಿಪ್ಲೆಕ್ಸ್ ಹೊಂದಿದ್ದಾರೆ. ಸದ್ಯ ‘ಪುಷ್ಪ 2’ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ