ಕೊರೊನಾ ಮಧ್ಯೆಯೂ ಹೊಸ ಪ್ರಯೋಗಕ್ಕೆ ಮುಂದಾದ ಶಾಹಿದ್ ಕಪೂರ್

ಈಗಾಗಲೇ ಬಾಲಿವುಡ್​ನಲ್ಲಿ ಸಾಕಷ್ಟು ನಟ-ನಟಿಯರು ತಮ್ಮದೇ ಆದ ಪ್ರೊಡಕ್ಷನ್​ ಹೌಸ್​ ಸ್ಥಾಪಿಸಿ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿವೆ. ಈಗ ಶಾಹಿದ್​ ಕೂಡ ಅದೇ ಆಲೋಚನೆಯಲ್ಲಿದ್ದಾರೆ. ತ

ಕೊರೊನಾ ಮಧ್ಯೆಯೂ ಹೊಸ ಪ್ರಯೋಗಕ್ಕೆ ಮುಂದಾದ ಶಾಹಿದ್ ಕಪೂರ್
ಶಾಹಿದ್​ ಕಪೂರ್​

Updated on: Apr 29, 2021 | 9:30 PM

ಕೊರೊನಾ ವೈರಸ್​ ಎರಡನೇ ಅಲೆಯ ಪ್ರಭಾವ ಜೋರಾಗಿದೆ. ಎಲ್ಲ ಕಡೆಗಳಲ್ಲೂ ಸಾವಿನ ಸುದ್ದಿ ಕೇಳಿಬರುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಹಲವು ರಾಜ್ಯಗಳಲ್ಲಿ ಲಾಕ್​ಡೌನ್ ಹೇರಲಾಗಿದೆ. ಇದರಿಂದ ಚಿತ್ರಮಂದಿರಗಳು ಮತ್ತೆ ಮುಚ್ಚಿವೆ. ಅನೇಕ ಚಿತ್ರಗಳು ನೇರವಾಗಿ ಒಟಿಟಿಯಲ್ಲಿ ರಿಲೀಸ್​ ಆಗುತ್ತಿವೆ. ಒಟಿಟಿ ವ್ಯಾಪ್ತಿ ದೊಡ್ಡದಾಗುತ್ತಿರುವುದನ್ನು ಮನಗಂಡ ಶಾಹಿದ್​ ಕಪೂರ್​ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಇದೇ ಮೊದಲ ಬಾರಿಗೆ ಅವರು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.  ಅದೂ, ಒಟಿಟಿ ಸಿನಿಮಾ ಅನ್ನೋದು ವಿಶೇಷ.

ಈಗಾಗಲೇ ಬಾಲಿವುಡ್​ನಲ್ಲಿ ಸಾಕಷ್ಟು ನಟ-ನಟಿಯರು ತಮ್ಮದೇ ಆದ ಪ್ರೊಡಕ್ಷನ್​ ಹೌಸ್​ ಸ್ಥಾಪಿಸಿ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿವೆ. ಈಗ ಶಾಹಿದ್​ ಕೂಡ ಅದೇ ಮಾರ್ಗ ತುಳಿಯುತ್ತಿದ್ದಾರೆ. ತಮ್ಮದೆ ಪ್ರೊಡಕ್ಷನ್​ ಹೌಸ್​ ಸ್ಥಾಪಿಸಬೇಕು ಎನ್ನುವ ಆಲೋಚನೆ ಶಾಹಿದ್ ಕಪೂರ್​ ಅವರದ್ದು. ಅವರ ಪ್ರೊಡಕ್ಷನ್​ ಹೌಸ್​​ನಿಂದಲೇ ಹೊಸ ಸಿನಿಮಾ ಮೂಡಿ ಬರಲಿದ್ದು, ನೆಟ್​ಫ್ಲಿಕ್ಸ್​​ನಲ್ಲಿ ರಿಲೀಸ್​ ಆಗುತ್ತಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಶೀಘ್ರವೇ ಶಾಹಿದ್​ ಹೊಸ ಅಪ್​ಡೇಟ್​ ನೀಡಲಿದ್ದಾರಂತೆ.

ಟಾಲಿವುಡ್​ನಲ್ಲಿ ತೆರೆಕಂಡ ಅರ್ಜುನ್​ ರೆಡ್ಡಿ ಸಿನಿಮಾ ಬಾಲಿವುಡ್​ನಲ್ಲಿ ಕಬೀರ್​ ಸಿಂಗ್​ ಆಗಿ ತೆರೆಗೆ ಬಂದಿತ್ತು. ಈ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಹೀಗಾಗಿ ತೆಲುಗಿನ ಜೆರ್ಸಿ ಸಿನಿಮಾವನ್ನು ಬಾಲಿವುಡ್​ಗೆ ರಿಮೇಕ್​ ಮಾಡಲಾಗುತ್ತಿದ್ದು, ಇದಕ್ಕೆ ಶಾಹಿದ್​ ಕಪೂರ್ ಹೀರೋ. ಶಶಾಂಕ್​ ಖೈತಾನ್​ ಮುಂದಿನ ಚಿತ್ರ ಯೋಧ ಸಿನಿಮಾದಲ್ಲಿ ಶಾಹಿದ್​ ನಟಿಸಬೇಕಿತ್ತು. ಆದರೆ, ಕೊನೆ ಕ್ಷಣದಲ್ಲಿ ಅವರು ಸಿನಿಮಾದಿಂದ ಹೊರ ಬಿದ್ದಿದ್ದರು.

ಇದನ್ನೂ ಓದಿ: ಕೊರೊನಾ ಸಂದರ್ಭದಲ್ಲಿ ಸಹಾಯ ಮಾಡದೆ ಸುಮ್ಮನಿರುವ ಕಂಗನಾಗೆ ಕ್ಲಾಸ್​

ಸೈಲೆಂಟಾಗಿ ಕೆಜಿಎಫ್​-2 ಚಿತ್ರ ತಂಡ ಸೇರಿಕೊಂಡ ಮತ್ತೋರ್ವ ಬಾಲಿವುಡ್​ ನಟಿ

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us