ಮೋಹನ್​ಲಾಲ್​​ಗೆ ಹೀಗೊಂದು ಮುಖವಿದೆಯೇ? ಮಾಡಿದ ಮೋಸ ತೆರೆದಿಟ್ಟ ಹಿರಿಯ ನಟಿ

‘ನಮ್ಮ ಮನೆ ಸಮೀಪ ಮಲಯಾಳಂ ಸಿನಿಮಾ ಶೂಟಿಂಗ್ ಇದ್ದಾಗ ಮೋಹನ್​ಲಾಲ್ ನೇರವಾಗಿ ನಮ್ಮ ಮನೆಗೆ ಬರುತ್ತಿದ್ದರು. ನಮ್ಮ ಮನೆಯಲ್ಲಿ ಮಾಡಿದ ಊಟವನ್ನು ತೆಗೆದುಕೊಂಡು ಹೋಗಲು ಲಂಚ್ ಬಾಕ್ಸ್ ಕೂಡ ಇರುತ್ತಿತ್ತು. ಇದೇ ಮೋಹನ್​ಲಾಲ್ ನನ್ನ ಪತಿ ಸತ್ತಾಗ ಬರಲೇ ಇಲ್ಲ’ ಬೇಸರ ಹೊರಹಾಕಿದ್ದಾರೆ ಶಾಂತಿ.

ಮೋಹನ್​ಲಾಲ್​​ಗೆ ಹೀಗೊಂದು ಮುಖವಿದೆಯೇ? ಮಾಡಿದ ಮೋಸ ತೆರೆದಿಟ್ಟ ಹಿರಿಯ ನಟಿ
ಶಾಂತಿ-ಮೋಹನ್​ಲಾಲ್

Updated on: May 18, 2024 | 1:20 PM

ಶಾಂತಿ ವಿಲಿಯಮ್ಸ್ (Shanthi Williams)​ ಅವರು ಮಲಯಾಳಂನ ಹಿರಿಯ ನಟಿ. 1979ರಿಂದ 2005ರವರೆಗೆ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದರು. ಆ ಬಳಿಕ ಅವರು ಸಿನಿಮಾ ರಂಗವನ್ನು ಸಂಪೂರ್ಣವಾಗಿ ತೊರೆದರು. ಅವರ ಪತಿ ಜೆ ವಿಲಿಯಮ್ಸ್ ಅವರು ಖ್ಯಾತ ಸಿನಿಮಾಟೋಗ್ರಾಫರ್ ಆಗಿದ್ದರು. ಮೋಹನ್​ಲಾಲ್ ಜೊತೆ ಜೆ ವಿಲಿಯಮ್ಸ್ ಕೆಲಸ ಮಾಡಿದ್ದರು. ಮೋಹನ್​ಲಾಲ್​ಗೆ ತಾವು ಸಾಕಷ್ಟು ಸಹಾಯ ಮಾಡಿದ್ದಾಗಿ ಶಾಂತಿ ಅವರು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮೋಹನ್​ಲಾಲ್​ಗೆ ಯಾವುದೇ ಕೃತಜ್ಞತೆ ಇಲ್ಲ ಎಂದು ಆರೋಪಿಸಿದ್ದಾರೆ.

‘ನನ್ನ ಪತಿ ವಿಲ್ಲಿಯಮ್ಸ್ ಓರ್ವ ಖ್ಯಾತ ಛಾಯಾಗ್ರಾಹಕ.  ಅವರು ಸಾಕಷ್ಟು ಅಡ್ವೆಂಚರಸ್ ಆಗಿದ್ದರು. ಕ್ಯಾಮೆರಾ ಹಿಡಿದು ಎಷ್ಟು ಎತ್ತರಕ್ಕೆ ಬೇಕಿದ್ದರೂ ತೆರಳುತ್ತಿದ್ದರು. ಈಗಿನವರು ಆ ಬಗ್ಗೆ ಯೋಚಿಸಲೂ ಸಾಧ್ಯವಿಲ್ಲ. ಕೆಲವೊಮ್ಮೆ ಅವರು ಟೆಂಪರ್ ಕಳೆದುಕೊಳ್ಳುತ್ತಿದ್ದರು. ಆದರೆ, ಎಲ್ಲಾ ವಿಚಾರದಲ್ಲಿ ಅವರು ವೃತ್ತಿಪರರಾಗಿದ್ದರು’ ಎಂದು ಪತಿಯ ಬಗ್ಗೆ ಹೇಳಿಕೊಂಡಿದ್ದಾರೆ ಶಾಂತಿ.

‘ಮೋಹನ್​ಲಾಲ್ ಅವರು ಹೆಲ್ಲೋ ಮದ್ರಾಸ್ ಗರ್ಲ್ ಸಿನಿಮಾದಲ್ಲಿ ನಟಿಸುತ್ತಿದ್ದರು. ಇದಕ್ಕೆ ವಿಲಿಯಮ್ಸ್ ನಿರ್ದೇಶನ ಇತ್ತು. ಅವರು ನಮ್ಮ ಮನೆಗೆ ಭೇಟಿ ನೀಡಿದಾಗ ನನ್ನ ತಾಯಿಯನ್ನು ಮೀಟ್ ಮಾಡುತ್ತಿದ್ದರು. ಅವರು ಶ್ರಿಂಪ್ ಮೀನಿನ ಕರಿ ಮಾಡುವಂತೆ ತಾಯಿ ಬಳಿ ಕೇಳುತ್ತಿದ್ದರು. ಅದು ನಿಜಕ್ಕೂ ಉತ್ತಮ ದಿನಗಳಾಗಿದ್ದವು’ ಎಂದಿದ್ದಾರೆ ಅವರು.

‘ನಮ್ಮ ಮನೆ ಸಮೀಪ ಮಲಯಾಳಂ ಸಿನಿಮಾ ಶೂಟಿಂಗ್ ಇದ್ದಾಗ ಮೋಹನ್​ಲಾಲ್ ನೇರವಾಗಿ ನಮ್ಮ ಮನೆಗೆ ಬರುತ್ತಿದ್ದರು. ನಮ್ಮ ಮನೆಯಲ್ಲಿ ಮಾಡಿದ ಊಟವನ್ನು ತೆಗೆದುಕೊಂಡು ಹೋಗಲು ಲಂಚ್ ಬಾಕ್ಸ್ ಕೂಡ ಇರುತ್ತಿತ್ತು. ಇದೇ ಮೋಹನ್​ಲಾಲ್ ನನ್ನ ಪತಿ ಸತ್ತಾಗ ಬರಲೇ ಇಲ್ಲ. ಮೋಹನ್​ಲಾಲ್ ಜೊತೆ ವಿಲ್ಲಿಯಮ್ಸ್ ನಾಲ್ಕು ಸಿನಿಮಾ ಮಾಡಿದ್ದಾರೆ. ಆದರೆ, ಮೋಹನ್​ಲಾಲ್​ಗೆ ನಮ್ಮ ಮನೆಗೆ ಬರೋಕೆ ಸಮಯವೇ ಸಿಗಲಿಲ್ಲ’ ಎಂದಿದ್ದಾರೆ ಶಾಂತಿ.

ಇದನ್ನೂ ಓದಿ: ‘ಕಾಂತಾರ 2’ ಚಿತ್ರದಲ್ಲಿ ಮೋಹನ್​ಲಾಲ್? ಭೇಟಿಯಿಂದ ಮೂಡಿತು ಅನುಮಾನ

‘ದಯವಿಟ್ಟು ತಪ್ಪು ತಿಳಿಯಬೇಡಿ. ಎಲ್ಲರೂ ಮೋಹನ್​ಲಾಲ್ ಅವರಂತೆ ಇರಬಹುದು. ಆದರೆ, ನಾನು ಹಾಗಲ್ಲ. ಸಿನಿಮಾವೊಂದಕ್ಕೆ ಮೋಹನ್​ ಲಾಲ್‌ಗೆ ಹಣ ಬೇಕಿತ್ತು. ಆಗ ನಾನು 60,000 ರೂಪಾಯಿ ಹೊಂದಿಸಲು ನನ್ನ ಚಿನ್ನವನ್ನೂ ಅಡವಿಟ್ಟಿದ್ದೆ. ಆ ಸಮಯದಲ್ಲಿ ನಾನು ಗರ್ಭಿಣಿಯಾಗಿದ್ದೆ. ಇದೇ ಮೋಹನ್​ಲಾಲ್ ಅವರು ವಿಮಾನ ನಿಲ್ದಾಣದಲ್ಲಿ ನನ್ನನ್ನು ನೋಡಿಯೂ ನೋಡದಂತೆ ಹೋದರು’ ಎಂದು ಬೇಸರ ಹೊರಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.