‘ಶಿವಾಜಿ ಸುರತ್ಕಲ್​ 2’ ಚಿತ್ರದಲ್ಲಿ ಏನಿದೆ? ​‘ಉಂಡೆನಾಮ’ ಹಾಕೋದು ಯಾರಿಗೆ? ಚಿತ್ರಮಂದಿರದಲ್ಲಿ ಸಿಗುತ್ತೆ ಉತ್ತರ

Shaakuntalam | Shivaji Surathkal 2: ಕಾಮಿಡಿ ಇಷ್ಟಪಡುವವರಿಗೆ ‘ಉಂಡೆನಾಮ’ ಹಾಗೂ ಸ್ಪಸೆನ್ಸ್​ ಪ್ರಿಯರಿಗಾಗಿ ‘ಶಿವಾಜಿ ಸುರತ್ಕಲ್​ 2’ ರಿಲೀಸ್​ ಆಗುತ್ತಿದೆ. ಪೌರಾಣಿಕ ಸಿನಿಮಾ ಬೇಕು ಎನ್ನುವವರಿಗಾಗಿ ‘ಶಾಕುಂತಲಂ’ ತೆರೆಕಾಣುತ್ತಿದೆ.

‘ಶಿವಾಜಿ ಸುರತ್ಕಲ್​ 2’ ಚಿತ್ರದಲ್ಲಿ ಏನಿದೆ? ​‘ಉಂಡೆನಾಮ’ ಹಾಕೋದು ಯಾರಿಗೆ? ಚಿತ್ರಮಂದಿರದಲ್ಲಿ ಸಿಗುತ್ತೆ ಉತ್ತರ
ಶಿವಾಜಿ ಸುರತ್ಕಲ್ 2, ಶಾಕುಂತಲಂ, ಉಂಡೆನಾಮ

Updated on: Apr 13, 2023 | 11:06 AM

ಮುಖ್ಯಾಂಶಗಳು

  • ಶಕುಂತಲೆಯ ಪಾತ್ರದಲ್ಲಿ ಮನರಂಜನೆ ನೀಡಲಿದ್ದಾರೆ ನಟಿ ಸಮಂತಾ ರುತ್​ ಪ್ರಭು
  • ‘ಶಿವಾಜಿ ಸುರತ್ಕಲ್​ 2’ ಚಿತ್ರದಲ್ಲಿ ಹೊಸ ಕೇಸ್​ ಹಿಡಿದು ಬಂದ ರಮೇಶ್​ ಅರವಿಂದ್​
  • ಬಹುದಿನಗಳ ಬಳಿಕ ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಕೋಮಲ್​ ಕುಮಾರ್​

ಒಂದೆಡೆ ಚುನಾವಣೆಯ ರಂಗು ಜೋರಾಗಿದೆ. ಮತ್ತೊಂದೆಡೆ ಐಪಿಎಲ್​ ಪಂದ್ಯಗಳ ಸಂಭ್ರಮ ಮನೆ ಮಾಡಿದೆ. ಈ ನಡುವೆ ಚಿತ್ರರಂಗದವರು ಸುಮ್ಮನೆ ಕೂತಿಲ್ಲ. ಪ್ರತಿ ವಾರದಂತೆ ಈ ವಾರ ಕೂಡ ಹೊಸ ಸಿನಿಮಾಗಳನ್ನು (New Movies) ಬಿಡುಗಡೆ ಮಾಡುವ ಪದ್ಧತಿ ಮುಂದುವರಿದಿದೆ. ಏಪ್ರಿಲ್​ 14ರಂದು ಯಾವೆಲ್ಲ ಹೊಸ ಸಿನಿಮಾಗಳು ರಿಲೀಸ್​ ಆಗುತ್ತಿವೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ರಮೇಶ್​ ಅರವಿಂದ್​ (Ramesh Aravind) ಅವರು ‘ಶಿವಾಜಿ ಸುರತ್ಕಲ್​ 2’ ಚಿತ್ರದ ಮೂಲಕ ಮನರಂಜನೆ ನೀಡಲು ಬರುತ್ತಿದ್ದಾರೆ. ಹಾಸ್ಯ ನಟ ಕೋಮಲ್​ ಅವರು ‘ಉಂಡೇನಾಮ’ ಮೂಲಕ ನಗುವಿನ ಕಚಗುಳಿ ಇಡಲಿದ್ದಾರೆ. ಅಷ್ಟೇ ಅಲ್ಲದೇ, ಇನ್ನೂ ಕೆಲವು ಹೊಸ ಸಿನಿಮಾಗಳು ರಿಲೀಸ್​ ಆಗುತ್ತಿವೆ. ಟಾಲಿವುಡ್​ನಲ್ಲಿ ‘ಶಾಕುಂತಲಂ’ (Shaakuntalam) ಸಿನಿಮಾ ತೆರೆಗೆ ಬರುತ್ತಿದೆ. ಸಸ್ಪೆನ್ಸ್​ ಥ್ರಿಲ್ಲರ್​, ಕಾಮಿಡಿ, ಪೌರಾಣಿಕ.. ಹೀಗೆ ಹಲವು ಪ್ರಕಾರದ ಸಿನಿಮಾಗಳು ಈ ವಾರ ಚಿತ್ರಮಂದಿರದಲ್ಲಿ ಸದ್ದು ಮಾಡಲಿವೆ.

‘ಶಿವಾಜಿ ಸುರತ್ಕಲ್​ 2’:

ರಮೇಶ್ ಅರವಿಂದ್ ಮುಖ್ಯ ಭೂಮಿಕೆ ನಿಭಾಯಿಸಿರುವ ‘ಶಿವಾಜಿ ಸುರತ್ಕಲ್ 2’ ಸಿನಿಮಾದಲ್ಲಿ ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ಸಂಗೀತ ಶೃಂಗೇರಿ, ರಮೇಶ್ ಭಟ್, ವೀಣಾ ಸುಂದರ್, ವಿನಾಯಕ್ ಜೋಶಿ, ಶೋಭರಾಜ್ ಮುಂತಾದದವರು ನಟಿಸಿದ್ದಾರೆ. ರೇಖಾ ಕೆ.ಎನ್. ಮತ್ತು ಅನೂಪ್ ಗೌಡ ಅವರು ಈ ಸಿನಿಮಾವನ್ನು ನಿರ್ಮಿಸಿದ್ದು, ಆಕಾಶ್ ಶ್ರೀವತ್ಸ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: Shivaji Surathkal 2: ‘ಟ್ವಿಂಕಲ್​’ ಹಾಡಿನಲ್ಲಿ ಸಸ್ಪೆನ್ಸ್​ ಕಾಯ್ಡುಕೊಂಡ ‘ಶಿವಾಜಿ ಸುರತ್ಕಲ್​ 2’; ಸಂಗೀತಾ ಶೃಂಗೇರಿ ಸೂಪರ್​ ಡ್ಯಾನ್ಸ್​

ಇದನ್ನೂ ಓದಿ
Samantha Ruth Prabhu: ಮತ್ತೆ ಕೈ ಕೊಟ್ಟಿದೆ ಸಮಂತಾ ರುತ್​ ಪ್ರಭು ಆರೋಗ್ಯ; ಅಭಿಮಾನಿಗಳಿಗೆ ಆತಂಕ
Samantha: ಶಾಕುಂತಲಂ ಸಿನಿಮಾ ಚಿತ್ರೀಕರಣದ ಐದು ಕೆಟ್ಟ ಅನುಭವಗಳ ನೆನೆದ ಸಮಂತಾ
ಮಾಜಿ ಗಂಡನ ಕುಟುಂಬದ ಮೇಲೆ ಸಮಂತಾಗೆ ಇನ್ನೂ ಕಡಿಮೆ ಆಗಿಲ್ಲ ಪ್ರೀತಿ; ಇಲ್ಲಿದೆ ಹೊಸ ಸಾಕ್ಷಿ
Samantha: ‘ನಾನು ಇದನ್ನು ಹೇಳಲೇ ಇಲ್ಲ’: ಮಾಜಿ ಗಂಡನ ವಿಷಯಕ್ಕೆ ಸ್ಪಷ್ಟನೆ ನೀಡಿದ ಸಮಂತಾ

‘ಉಂಡೆನಾಮ’:

ಬಹಳ ದಿನಗಳ ನಂತರ ನಟ ಕೋಮಲ್ ಕುಮಾರ್ ಹೀರೋ ಆಗಿ ನಟಿಸಿರುವ ‘ಉಂಡೆನಾಮ’ ಚಿತ್ರ ಏ.14ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಟಿ.ಆರ್. ಚಂದ್ರಶೇಖರ್ ಅರ್ಪಿಸುವ ಈ ಚಿತ್ರವನ್ನು ಎನ್.ಕೆ. ಸ್ಟುಡಿಯೋಸ್ ಮೂಲಕ ನಂದಕಿಶೋರ್ ಸಿ. ನಿರ್ಮಿಸಿದ್ದಾರೆ. ಕೆ.ಎಲ್. ರಾಜಶೇಖರ್ ನಿರ್ದೇಶನ ಮಾಡಿದ್ದಾರೆ. ಕೋಮಲ್ ಜೊತೆ ಧನ್ಯಾ ಬಾಲಕೃಷ್ಣ, ಹರೀಶ್ ರಾಜ್, ತಬಲ ನಾಣಿ, ಕೆಜಿಎಫ್ ಸಂಪತ್, ತನಿಷಾ, ವೈಷ್ಣವಿ, ಅಪೂರ್ವಾ ಮುಂತಾದವರು ನಟಿಸಿದ್ದಾರೆ.

ಇದನ್ನೂ ಓದಿ: Komal: ಆರು ವರ್ಷ ಸಿನಿಮಾದಿಂದ ದೂರವಿದ್ದ ಕೋಮಲ್ ಇಷ್ಟು ಸಮಯ ಏನು ಮಾಡಿದರು?

ಇವುಗಳ ಜೊತೆ ಕನ್ನಡದಲ್ಲಿ ‘ಮಾರಿಗುಡ್ಡದ ಗಡ್ಡದಾರಿಗಳು’ ಸಿನಿಮಾ ಕೂಡ ರಿಲೀಸ್​ ಆಗುತ್ತಿದೆ. ಈ ಚಿತ್ರದಲ್ಲಿ ದಿನೇಶ್​ ಕುಮಾರ್​, ಪ್ರವೀಣ್​ ರಾಜ್​, ನಮೃತಾ ಮುಂತಾದವರು ನಟಿಸಿದ್ದಾರೆ. ವಿಶಾಲ್​ ಅಜಯ್​ ನಿರ್ದೇಶನದ ‘ಸುರಾರಿ’ ಸಿನಿಮಾ ಸಹ ಏಪ್ರಿಲ್​ 14ರಂದು ತೆರೆಗೆ ಬರುತ್ತಿದೆ.

‘ಶಾಕುಂತಲಂ’:

ನಟಿ ಸಮಂತಾ ರುತ್​ ಪ್ರಭು ಪಾಲಿಗೆ ‘ಶಾಕುಂತಲಂ’ ಚಿತ್ರ ಬಹಳ ಮಹತ್ವದ್ದಾಗಿದೆ. ಪೌರಾಣಿಕ ಕಥಾಹಂದರ ಇರುವ ಈ ಸಿನಿಮಾದಲ್ಲಿ ಅವರು ಶಕುಂತಲೆಯ ಪಾತ್ರ ಮಾಡಿದ್ದಾರೆ. ಬಹುಕೋಟಿ ರೂಪಾಯಿ ವೆಚ್ಚದಲ್ಲಿ ಈ ಚಿತ್ರ ತಯಾರಾಗಿದೆ. ಬೃಹತ್​ ಸೆಟ್​ಗಳನ್ನು ಹಾಕಿ ಶೂಟಿಂಗ್​ ಮಾಡಲಾಗಿದೆ. ಅತ್ಯಾಧುನಿಕ ಗ್ರಾಫಿಕ್ಸ್​ ತಂತ್ರಜ್ಞಾನ ಬಳಸಿ ದೃಶ್ಯಗಳನ್ನು ಕಟ್ಟಿಕೊಡಲಾಗಿದೆ. ಹಾಗಾಗಿ ಹೈಪ್​ ಹೆಚ್ಚಿದೆ. ಈ ಚಿತ್ರಕ್ಕೆ ಗುಣಶೇಖರ್​ ನಿರ್ದೇಶನ ಮಾಡಿದ್ದಾರೆ. ಅಲ್ಲು ಅರ್ಜುನ್​ ಪುತ್ರಿ ಅಲ್ಲು ಅರ್ಹಾ ಕೂಡ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾಳೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us