Shreya Ghoshal: ಗಂಡು ಮಗುವಿಗೆ ತಾಯಿ ಆದ ಗಾಯಕಿ ಶ್ರೇಯಾ ಘೋಶಾಲ್​

ಶ್ರೇಯಾ ಘೋಶಾಲ್​ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಒಂದನ್ನು ಹಾಕಿದ್ದಾರೆ. ಇಂದು ಮಧ್ಯಾಹ್ನ ನನಗೆ ಗಂಡು ಮಗುವಾಗಿದೆ. ಈ ಭಾವನೆಯನ್ನು ಹಿಂದೆಂದೂ ಹೊಂದಿರಲಿಲ್ಲ ಎಂದಿದ್ದಾರೆ ಶ್ರೇಯಾ.

Shreya Ghoshal: ಗಂಡು ಮಗುವಿಗೆ ತಾಯಿ ಆದ ಗಾಯಕಿ ಶ್ರೇಯಾ ಘೋಶಾಲ್​
ಶ್ರೇಯಾ ಘೋಶಾಲ್

Updated on: May 22, 2021 | 6:42 PM

ಮಧುರ ಕಂಠದ ಮೂಲಕ ಗಮನ ಸೆಳೆದಿರುವ ಗಾಯಕಿ ಶ್ರೇಯಾ ಘೋಶಾಲ್ ಕುಟುಂಬಕ್ಕೆ ಗಂಡು ಮಗುವಿನ ಆಗಮನವಾಗಿದೆ. ಈ ವಿಚಾರವನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಖುಷಿಯಾಗಿದ್ದು, ಅಭಿನಂದನೆ ತಿಳಿಸಿದ್ದಾರೆ.

ಶ್ರೇಯಾ ಘೋಶಾಲ್​ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಒಂದನ್ನು ಹಾಕಿದ್ದಾರೆ. ಇಂದು ಮಧ್ಯಾಹ್ನ ನನಗೆ ಗಂಡು ಮಗುವಾಗಿದೆ. ಈ ಭಾವನೆಯನ್ನು ಹಿಂದೆಂದೂ ಹೊಂದಿರಲಿಲ್ಲ. ಶೀಲಾದಿತ್ಯ, ನಾನು ಹಾಗೂ ನನ್ನ ಕುಟುಂಬಕ್ಕೆ ಖುಷಿ ಆಗಿದೆ. ನಿಮ್ಮ ಅಪರಿಮಿತ ಹಾರೈಕೆಗೆ ಧನ್ಯವಾದಗಳು ಎಂದು ಅವರು ಬರೆದುಕೊಂಡಿದ್ದಾರೆ.

ತಾವು ಗರ್ಭ ಧರಿಸಿರುವ ಬಗ್ಗೆ ಮಾರ್ಚ್​ ತಿಂಗಳಲ್ಲಿ ಶ್ರೇಯಾ ಘೋಷಾಲ್​ ಟ್ವೀಟ್​ ಒಂದನ್ನು ಮಾಡಿದ್ದರು. ಇದಕ್ಕೆ ಅಡಿಬರಹ ನೀಡಿದ್ದ ಅವರು, ಬೇಬಿ ಶ್ರೇಯಾದಿತ್ಯ ಶೀಘ್ರವೇ ಬರಲಿದ್ದಾರೆ ಎಂದಿದ್ದರು. ಈಗ ಮಗುವಾಗಿರುವ ವಿಚಾರವನ್ನು ಅವರು ಅಧಿಕೃತಗೊಳಿಸಿದ್ದಾರೆ. ಈ ಫೋಟೋವನ್ನು ನೋಡಿದ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಶ್ರೇಯಾಗೆ ಅಭಿನಂದನೆಗಳ ಸುರಿಮಳೆಗೈದಿದ್ದಾರೆ.

ಹಿನ್ನೆಲೆ ಗಾಯಕಿ ಶ್ರೇಯಾ , ಶಿಲಾದಿತ್ಯ ಅವರನ್ನು 2015 ಫೆಬ್ರವರಿ 5ರಂದು ಮದುವೆ ಆಗಿದ್ದರು. ಈ ಮೂಲಕ ಹಲವು ವರ್ಷಗಳ ಪ್ರೀತಿಗೆ ಹೊಸ ಅರ್ಥ ನೀಡಿದ್ದರು. ಶ್ರೇಯಾ ಹಿಂದಿ ಮಾತ್ರವಲ್ಲದೆ, ಕನ್ನಡದಲ್ಲೂ ಸಾಕಷ್ಟು ಹಾಡುಗಳನ್ನು ಹಾಡಿದ್ದಾರೆ. ‘ಮೊಗ್ಗಿನ ಮನಸಲಿ…’, ‘ಉಲ್ಲಾಸದ ಹೂಮಳೆ…’, ‘ಮಳೆ ಬರುವ ಹಾಗಿದೆ…’ ‘ಪೋಲಿ ಇವನು..’ ಸೇರಿ ಸಾಕಷ್ಟು ಹಾಡುಗಳು ಶ್ರೇಯಾ ಕಂಠದಿಂದ ಮೂಡಿ ಬಂದಿವೆ.

ಇದನ್ನೂ ಓದಿ:Radhika Apte: ಕೊವಿಡ್​ ಲಸಿಕೆ ಪಡೆದ ನಟಿ ರಾಧಿಕಾ ಆಪ್ಟೆ; ಸುತ್ತಿಬಳಸಿ ಕಾಲೆಳೆದ ನಟ ವಿಜಯ್​ ವರ್ಮಾ 

ಆಗಸ್ಟ್​​ನಿಂದ ಆರಂಭವಾಗಲಿದೆ ಬಿಗ್​ ಬಾಸ್​​; ಸಂಭಾವ್ಯ ಪಟ್ಟಿಯಲ್ಲಿ ‘ರಾಬರ್ಟ್’​ ಗಾಯಕಿ ಮಂಗ್ಲಿ, ಅಧ್ಯಕ್ಷ ಸಿನಿಮಾ ನಾಯಕಿ