Shreya Ghoshal: ಕೊವಿಡ್​ 2ನೇ ಅಲೆ ನಡುವೆಯೂ ಶ್ರೇಯಾ ಘೋಷಾಲ್​ಗೆ ಬೇಬಿ ಶವರ್​ ಸಂಭ್ರಮ! ಆದರೆ ಇದು ಫುಲ್​ ಸೇಫ್​

| Updated By: Digi Tech Desk

Updated on: Apr 12, 2021 | 11:07 AM

Shreya Ghoshal Baby Shower: ಕೊರೊನಾ ವೈರಸ್​ ಬಂದ ಬಳಿಕ ಎಲ್ಲವೂ ಬದಲಾಗಿದೆ. ಜನರ ಜೀವನಕ್ರಮದಲ್ಲಿ ಅನೇಕ ಬದಲಾವಣೆಗಳಾಗಿವೆ. ಶ್ರೇಯಾ ಘೋಷಾಲ್​ ಅವರ ಬೇಬಿ ಶವರ್​ ಕಾರ್ಯಕ್ರಮದಲ್ಲೂ ಅವರ ಸ್ನೇಹಿತರು ಅದೇ ಹಾದಿಯನ್ನು ಅನುಸರಿಸಿದ್ದಾರೆ.

Shreya Ghoshal: ಕೊವಿಡ್​ 2ನೇ ಅಲೆ ನಡುವೆಯೂ ಶ್ರೇಯಾ ಘೋಷಾಲ್​ಗೆ ಬೇಬಿ ಶವರ್​ ಸಂಭ್ರಮ! ಆದರೆ ಇದು ಫುಲ್​ ಸೇಫ್​
ಶ್ರೇಯಾ ಘೋಷಾಲ್​
Follow us on

ಸುಮಧುರ ಕಂಠದಿಂದ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಗಾಯಕಿ ಶ್ರೇಯಾ ಘೋಷಾಲ್​ ಬದುಕಿನಲ್ಲೀಗ ವಿಶೇಷ ಕಾಲಘಟ್ಟ. ಸದ್ಯ ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ತುಂಬು ಗರ್ಭಿಣಿ ಆಗಿರುವ ಶ್ರೇಯಾಗೆ ಸ್ನೇಹಿತರೆಲ್ಲ ಸೇರಿ ಬೇಬಿ ಶವರ್​ ಕಾರ್ಯಕ್ರಮ ಮಾಡಿದ್ದಾರೆ. ಇದರಿಂದ ಖುಷಿ ಆಗಿರುವ ಅವರು ಆ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಸದ್ಯಕ್ಕಂತೂ ಎಲ್ಲೆಲ್ಲೂ ಕೊರೊನಾ ವೈರಸ್​ ರಣಕೇಕೆ ಹಾಕುತ್ತಿದೆ. ಕೊವಿಡ್​-19 ಎರಡನೇ ಅಲೆ ಕಾರಣದಿಂದ ಎಲ್ಲರೂ ಭಯಭೀತರಾಗಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಸಮಾರಂಭಗಳನ್ನು ಮಾಡಲು ಹಿಂದೇಟು ಹಾಕಲಾಗುತ್ತಿದೆ. ಅದರಲ್ಲೂ ಮಕ್ಕಳು ಮತ್ತು ಗರ್ಭಿಣಿಯರ ವಿಚಾರದಲ್ಲಿ ಹೆಚ್ಚು ಜಾಗರೂಕತೆ ವಹಿಸಬೇಕಾಗುತ್ತದೆ. ಆದರೆ ಸ್ನೇಹಿತರೆಲ್ಲ ಸೇರಿಕೊಂಡು ಶ್ರೇಯಾ ಘೋಷಾಲ್​ ಅವರ ಬೇಬಿ ಶವರ್​ ಕಾರ್ಯಕ್ರಮವನ್ನು ಹೇಗೆ ನೆರವೇರಿಸಿದರು? ಇಲ್ಲಿದೆ ಹೊಸ ವಿಷಯ.

ಕೊರೊನಾ ವೈರಸ್​ ಬಂದ ಬಳಿಕ ಎಲ್ಲವೂ ಬದಲಾಗಿದೆ. ಜನರ ಜೀವನಕ್ರಮದಲ್ಲಿ ಅನೇಕ ಬದಲಾವಣೆಗಳಾಗಿವೆ. ಎಲ್ಲದಕ್ಕೂ ಆನ್​ಲೈನ್​ ಮೊರೆಹೋಗಲಾಗುತ್ತಿದೆ. ಶ್ರೇಯಾ ಘೋಷಾಲ್​ ಅವರ ಬೇಬಿ ಶವರ್​ ಕಾರ್ಯಕ್ರಮದಲ್ಲೂ ಅವರ ಸ್ನೇಹಿತರು ಅದೇ ಹಾದಿಯನ್ನು ಅನುಸರಿಸಿದ್ದಾರೆ. ಬಗೆಬಗೆಯ ಅಡುಗೆಗಳನ್ನು ಮಾಡಿ ಶ್ರೇಯಾಗೆ ಕಳಿಸಲಾಗಿದೆ. ಆನ್​ಲೈನ್​ ಮೂಲಕ ವರ್ಚುವಲ್​ ಆಗಿಯೇ ಬೇಬಿ ಶವರ್​ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಶ್ರೇಯಾ ಘೋಷಾಲ್​ ಈ ವಿಚಾರವನ್ನು ಇನ್​ಸ್ಟಾಗ್ರಾಮ್​ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ವಿಡಿಯೋ ಕಾಲ್​ ಮೂಲಕ ಎಲ್ಲರೂ ಸೇರಿಕೊಂಡು ಈ ಸಮಾರಂಭ ನಡೆಸಿಕೊಟ್ಟಿದ್ದಾರೆ. ಕೊವಿಡ್​ ಭೀತಿ ಇರುವುದರಿಂದ ಶ್ರೇಯಾ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಲಾಗಿದೆ. ಸದ್ಯ ಶ್ರೇಯಾ ಹಂಚಿಕೊಂಡಿರುವ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ‘ನಿಮ್ಮ ಸ್ನೇಹಿತರು ದೂರದಿಂದಲೇ ನಿಮ್ಮನ್ನು ಮುದ್ದಿಸಲು ನಿರ್ಧರಿಸಿದಾಗ…’ ಎಂದು ಈ ಪೋಸ್ಟ್​ಗೆ ಶ್ರೇಯಾ ಕ್ಯಾಪ್ಷನ್​ ನೀಡಿದ್ದಾರೆ.

ಬಹುಭಾಷೆಯಲ್ಲಿ ಫೇಮಸ್​ ಆಗಿರುವ ಶ್ರೇಯಾ ಘೋಷಾಲ್​ ಅವರಿಗೆ ಸಂಗೀತಲೋಕದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್​ ಇದೆ. 2015ರಲ್ಲಿ ಅವರು ಬಾಲ್ಯದ ಗೆಳಯ ಶಿಲಾದಿತ್ಯ ಮುಖ್ಯೋಪಧ್ಯಾಯ್​ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಗೂ ಮುನ್ನ ಶಿಲಾದಿತ್ಯ ಜೊತೆ ಶ್ರೇಯಾ 10 ವರ್ಷಗಳಿಂದ ಡೇಟಿಂಗ್​ ನಡೆಸುತ್ತಿದ್ದರು. ಈಗ ಈ ದಂಪತಿ ಮೊದಲ ಮಗುವಿನ ಆಗಮನವನ್ನು ಎದುರು ನೋಡುತ್ತಿದ್ದಾರೆ.

ಇದನ್ನೂ ಓದಿ: ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕ ಶೈಲಿಯಲ್ಲಿ ಹಾಡನ್ನು ಹಾಡಿದ್ದೇನೆ : ಗಾಯಕಿ ಶ್ರೇಯಾ ಘೋಷಾಲ್

Published On - 10:47 am, Mon, 12 April 21