ಜನಸಾಮಾನ್ಯರು ಮಾತ್ರವಲ್ಲ ಶ್ರೇಯಾ ಘೋಷಾಲ್​ ಕೂಡ ಅದೆಷ್ಟು ತಪ್ಪು ಲಿರಿಕ್ಸ್ ಹೇಳ್ತಾರೆ ನೋಡಿ

| Updated By: ರಾಜೇಶ್ ದುಗ್ಗುಮನೆ

Updated on: Dec 19, 2024 | 7:41 AM

ಶ್ರೇಯಾ ಘೋಷಾಲ್ ಭಾರತದ ಗಾಯಕಿಯರಲ್ಲಿ ಒಬ್ಬರು. ಅವರ ಧ್ವನಿಗೆ ಮರುಳಾಗದವರೇ ಇಲ್ಲ. ಅನೇಕ ಸೂಪರ್ ಹಿಟ್ ಹಾಡುಗಳನ್ನು ಅವರು ನೀಡಿದ್ದಾರೆ. ಅವರ ಗಾಯನಕ್ಕೆ ಎಲ್ಲರೂ ಫಿದಾ ಆಗುತ್ತಾರೆ. ಅವರು ಅನೇಕ ಶೋಗಳಿಗೆ ಜಡ್ಜ್ ಕೂಡ ಆಗಿದ್ದಾರೆ. ಸಾಕಷ್ಟು ಕಾನ್ಸರ್ಟ್​ಗಳನ್ನು ಶ್ರೇಯಾ ಮಾಡುತ್ತಾರೆ. ಈ ವೇಳೆ ಅವರು ಸಾಕಷ್ಟು ತಪ್ಪು ತಪ್ಪು ಲಿರಿಕ್ಸ್ ಹೇಳಿದ್ದು ಇದೆ.

ಜನಸಾಮಾನ್ಯರು ಮಾತ್ರವಲ್ಲ ಶ್ರೇಯಾ ಘೋಷಾಲ್​ ಕೂಡ ಅದೆಷ್ಟು ತಪ್ಪು ಲಿರಿಕ್ಸ್ ಹೇಳ್ತಾರೆ ನೋಡಿ
ಶ್ರೇಯಾ ಘೋಷಾಲ್
Follow us on

ಜನಸಾಮಾನ್ಯರು ಹಾಡುವಾಗ ತಪ್ಪು ತಪ್ಪು ಸಾಲುಗಳನ್ನು ಹೇಳಿ ಟೀಕೆಗೆ ಒಳಗಾದ ಉದಾಹರಣೆ ಸಾಕಷ್ಟು ಇದೆ. ಅನೇಕರು ಈ ತಪ್ಪನ್ನು ಮಾಡುತ್ತಾರೆ. ಸಾಮಾನ್ಯರು ಈ ರೀತಿಯ ಶಬ್ದಗಳನ್ನು ಹೇಳಿದಾಗ ಯಾವುದೇ ಸಮಸ್ಯೆ ಆಗೋದಿಲ್ಲ. ಅದೇ ಯಾವುದಾದರೂ ಸೆಲೆಬ್ರಿಟಿಗಳು ತಪ್ಪು ತಪ್ಪಾಗಿ ಲಿರಿಕ್ಸ್ ಹೇಳಿದರೆ ಟೀಕೆಗೆ ಒಳಗಾಗಬೇಕಾಗುತ್ತದೆ. ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಕೂಡ ತಪ್ಪು ಸಾಲುಗಳನ್ನು ಹೇಳುವುದರಲ್ಲಿ ಎತ್ತಿದ ಕೈ. ಅವರು ಅನೇಕ ಬಾರಿ ಈ ತಪ್ಪನ್ನು ಮಾಡಿದ್ದಾರೆ.

ಶ್ರೇಯಾ ಘೋಷಾಲ್ ಭಾರತದ ಗಾಯಕಿಯರಲ್ಲಿ ಒಬ್ಬರು. ಅವರ ಧ್ವನಿಗೆ ಮರುಳಾಗದವರೇ ಇಲ್ಲ. ಅನೇಕ ಸೂಪರ್ ಹಿಟ್ ಹಾಡುಗಳನ್ನು ಅವರು ನೀಡಿದ್ದಾರೆ. ಅವರ ಗಾಯನಕ್ಕೆ ಎಲ್ಲರೂ ಫಿದಾ ಆಗುತ್ತಾರೆ. ಅವರು ಅನೇಕ ಶೋಗಳಿಗೆ ಜಡ್ಜ್ ಕೂಡ ಆಗಿದ್ದಾರೆ. ಸಾಕಷ್ಟು ಕಾನ್ಸರ್ಟ್​ಗಳನ್ನು ಶ್ರೇಯಾ ಮಾಡುತ್ತಾರೆ. ಈ ವೇಳೆ ಅವರು ಸಾಕಷ್ಟು ತಪ್ಪು ತಪ್ಪು ಲಿರಿಕ್ಸ್ ಹೇಳಿದ್ದು ಇದೆ.

ಶ್ರೇಯಾ ಘೋಷಾಲ್ ಅವರು ಕಾನ್ಸರ್ಟ್​ಗಳಲ್ಲಿ ಹಾಡುವಾಗ ತಪ್ಪು ಸಾಲುಗಳನ್ನು ಹೇಳುತ್ತಾರಂತೆ. ಈ ವಿಚಾರವನ್ನು ಅವರೇ ಒಪ್ಪಿಕೊಂಡಿದ್ದಾರೆ. ‘ನನ್ನ ಕಾನ್ಸರ್ಟ್​ಗಳಲ್ಲಿ ಸಾಕಷ್ಟು ಹಾಡುಗಳ ಸಾಲುಗಳನ್ನು ಮರೆಯುತ್ತೇನೆ. ಸಾಕಷ್ಟು ವಿಡಿಯೋಗಳು ವೈರಲ್ ಆಗಿವೆ. ಅಭಿಮಾನಿಗಳು ಸರಿಯಾದ ಲಿರಿಕ್ಸ್ ಹಾಡಿದರೆ, ನಾನು ತಪ್ಪಾದ ಲಿರಿಕ್ಸ್ ಹೇಳುತ್ತಾ ಇರುತ್ತೇನೆ. ಆಗ ಜನರು ನನ್ನ ಹಾಡುಗಳನ್ನು ಕೇಳಿ ಕನ್​ಫ್ಯೂಸ್ ಆಗುತ್ತಾರೆ. ಇವರು ದೊಡ್ಡ ಗಾಯಕಿ. ಅವರು ಹೇಳಿದ್ದೇ ಸರಿ ಇರಬಹುದು ಎಂದು ಅನೇಕರು ಅಂದುಕೊಳ್ಳುತ್ತಾರೆ’ ಎಂದಿದ್ದಾರೆ ಶ್ರೇಯಾ ಘೋಷಾಲ್.

ಇದನ್ನೂ ಓದಿ: ‘ಪುಷ್ಪ 2’ ಕಪಲ್​ ಸಾಂಗ್​; ಆರು ಭಾಷೆಯಲ್ಲಿ ಮೋಡಿ ಮಾಡಿದ ಶ್ರೇಯಾ ಘೋಷಾಲ್​

ಶ್ರೇಯಾ ಘೋಷಾಲ್ ಅವರು ಕೇವಲ ಬಾಲಿವುಡ್​ಗೆ ಮಾತ್ರ ಸೀಮಿತವಾಗಿಲ್ಲ. ಕನ್ನಡದಲ್ಲೂ ಹಲವು ಸೂಪರ್ ಹಿಟ್ ಗೀತೆಗಳನ್ನು ನೀಡಿದ್ದಾರೆ. 2003ರಲ್ಲಿ ಅವರು ಕನ್ನಡದ ಹಾಡನ್ನು ಹಾಡಿದರು. ‘ಪ್ಯಾರಿಸ್ ಪ್ರಣಯ’ ಚಿತ್ರದ ‘ಕೃಷ್ಣ ನೀ ಬೇಗನೆ ಬಾರೋ..’ ಅವರು ಹಾಡಿದ ಮೊದಲ ಸಾಲುಗಳು. ಆ ಬಳಿಕ ಅವರು ನಿರಂತರವಾಗಿ ಕನ್ನಡದಲ್ಲಿ ಹಾಡು ಹಾಡಿದ್ದಾರೆ. ನೂರಾರು ಹಾಡುಗಳು ಅವರ ಕಂಠದಲ್ಲಿ ಮೂಡಿ ಬಂದಿವೆ. ‘ಪುಷ್ಪ 2’ ಚಿತ್ರದ ‘ನೋಡೋಕ..’ (ಕನ್ನಡ ವರ್ಷನ್) ಅವರು ಹಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.