Shruti Haasan: ‘ಸಲಾರ್’ ಶೂಟಿಂಗ್ ಮುಗಿಸಿದ ಖುಷಿಯಲ್ಲಿ ನಟಿ ಶ್ರುತಿ ಹಾಸನ್ ಏನಂದ್ರು ನೋಡಿ

ಶ್ರುತಿ ಹಾಸನ್ ಅವರಿಗೆ 2023 ವಿಶೇಷ ಆಗಿರಲಿದೆ. ಅವರ ನಟನೆಯ ‘ವಾಲ್ತೇರು ವೀರಯ್ಯ’ ಹಾಗೂ ‘ವೀರ ಸಿಂಹ ರೆಡ್ಡಿ’ ಚಿತ್ರಗಳು ಬ್ಯಾಕ್​ ಟು ಬ್ಯಾಕ್ ರಿಲೀಸ್ ಆದವು. ಎರಡೂ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿತು. ಈ ವರ್ಷ ಅವರು ದೊಡ್ಡ ಯಶಸ್ಸು ಕಾಣುವ ನಿರೀಕ್ಷೆಯಲ್ಲಿದ್ದಾರೆ.

Shruti Haasan: ‘ಸಲಾರ್’ ಶೂಟಿಂಗ್ ಮುಗಿಸಿದ ಖುಷಿಯಲ್ಲಿ ನಟಿ ಶ್ರುತಿ ಹಾಸನ್ ಏನಂದ್ರು ನೋಡಿ
ಶ್ರುತಿ ಹಾಸನ್

Updated on: Feb 24, 2023 | 8:09 AM

ನಟಿ ಶ್ರುತಿ ಹಾಸನ್ (Shruti Haasan) ಅವರು ‘ಸಲಾರ್​’ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಇದ್ದರು. ಈಗ ಅವರು ಸಿನಿಮಾದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ನಟನೆಯ ಈ ಸಿನಿಮಾಗೆ ಶ್ರುತಿ ಹಾಸನ್ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಭಾಗದ ಶೂಟಿಂಗ್​ನ ಪೂರ್ಣಗೊಳಿಸಿರುವ ಬಗ್ಗೆ ಶ್ರುತಿ ಹಾಸನ್ ಮಾಹಿತಿ ನೀಡಿದ್ದಾರೆ. ಸೆಟ್​ನಲ್ಲಿರುವ ಫೋಟೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅವರು, ಸಿನಿಮಾ ತಂಡಕ್ಕೆ ಧನ್ಯವಾದ ಹೇಳಿದ್ದಾರೆ.

ಶ್ರುತಿ ಹಾಸನ್ ಅವರಿಗೆ 2023 ವಿಶೇಷ ಆಗಿರಲಿದೆ. ಅವರ ನಟನೆಯ ‘ವಾಲ್ತೇರು ವೀರಯ್ಯ’ ಹಾಗೂ ‘ವೀರ ಸಿಂಹ ರೆಡ್ಡಿ’ ಚಿತ್ರಗಳು ಬ್ಯಾಕ್​ ಟು ಬ್ಯಾಕ್ ರಿಲೀಸ್ ಆದವು. ಎರಡೂ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿತು. ಈ ವರ್ಷ ಅವರು ದೊಡ್ಡ ಯಶಸ್ಸು ಕಾಣುವ ನಿರೀಕ್ಷೆಯಲ್ಲಿದ್ದಾರೆ. ಶೂಟಿಂಗ್ ಪೂರ್ಣಗೊಂಡಿರುವ ಬಗ್ಗೆ ಬರೆದುಕೊಂಡಿರುವ ಅವರು, ‘ನನ್ನ ಭಾಗದ ಸಲಾರ್ ಶೂಟಿಂಗ್ ಪೂರ್ಣಗೊಂಡಿದೆ. ನನ್ನನ್ನು ಆದ್ಯ ಮಾಡಿದ್ದಕ್ಕೆ ಪ್ರಶಾಂತ್ ನಿಮಗೆ ಧನ್ಯವಾದ. ನೀವು ಅಸಾಧಾರಣ ವ್ಯಕ್ತಿ. ಡಾರ್ಲಿಂಗ್ ರೀತಿ ಇದ್ದಿದ್ದಕ್ಕೆ ಪ್ರಭಾಸ್ ನಿಮಗೂ ಥ್ಯಾಂಕ್ಸ್. ಭುವನ್ ನಿಮಗೂ ಥ್ಯಾಂಕ್ಸ್. ಹೊಂಬಾಳೆ ಫಿಲ್ಮ್ಸ್ ಜೊತೆ ಕೆಲಸ ಮಾಡಿದ್ದು ಖುಷಿ ನೀಡಿದೆ. ಕೊನೆಯಲ್ಲಿ ಇದು ಕುಟುಂಬದಂತೆ ಭಾಸವಾಗಿದೆ’ ಎಂದು ಶ್ರುತಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ
Sanya Iyer: ಬೋಲ್ಡ್ ಫೋಟೋ ಮೂಲಕ ಮಿಂಚಿದ ನಟಿ ಸಾನ್ಯಾ ಐಯ್ಯರ್; ಇಲ್ಲಿದೆ ಗ್ಯಾಲರಿ
ಶರವೇಗದಲ್ಲಿ ‘ಧೂಮಂ’ ಶೂಟಿಂಗ್ ಮುಗಿಸಿದ ಪವನ್ ಕುಮಾರ್​; ರಿಲೀಸ್ ಯಾವಾಗ?
Varisu Movie Review: ಇವ ಎಂಟರ್​​ಟೇನರ್ ವಾರಸುದಾರ; ಎಳೆದಾಟವೇ ಪ್ರೇಕ್ಷಕನಿಗೆ ಭಾರ

‘ಸಲಾರ್​​’ನಲ್ಲಿ ಶ್ರುತಿ ಹಾಸನ್ ಅವರು ಆದ್ಯ ಹೆಸರಿನ ಪಾತ್ರವನ್ನು ಮಾಡುತ್ತಿದ್ದಾರೆ. ಪ್ರಭಾಸ್ ಜೊತೆ ಅವರು ನಟಿಸುತ್ತಿರುವ ಮೊದಲ ಸಿನಿಮಾ ಇದಾಗಿದೆ. ಜಗಪತಿ ಬಾಬು ಹಾಗೂ ಪೃಥ್ವಿರಾಜ್​ ಸುಕುಮಾರನ್ ಅವರು ಈ ಚಿತ್ರದಲ್ಲಿ ವಿಲನ್ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ.

ಈ ಮೊದಲು ಸಿನಿಮಾ ಬಗ್ಗೆ ಮಾತನಾಡಿದ್ದ ಶ್ರುತಿ ಹಾಸನ್ ಅವರು, ‘ಸಲಾರ್ ದೊಡ್ಡ ಪ್ರಾಜೆಕ್ಟ್. ಈ ಸಿನಿಮಾ ಬಗ್ಗೆ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಬಹುದು. ಈ ಸಿನಿಮಾದ ಕಥೆಯಲ್ಲಿ ನನ್ನ ಪಾತ್ರಕ್ಕೆ ಪ್ರಾಮುಖ್ಯತೆ ಇದೆ’ ಎಂದು ಶ್ರುತಿ ಹಾಸನ್ ಹೇಳಿಕೊಂಡಿದ್ದರು. ಪ್ರಶಾಂತ್ ನೀಲ್ ಸಿನಿಮಾಗಳಲ್ಲಿ ಮಹಿಳಾ ಪಾತ್ರಕ್ಕೆ ಪ್ರಾಮುಖ್ಯತೆ ಇರುತ್ತದೆ. ಹೀಗಾಗಿ, ಶ್ರುತಿ ಹಾಸನ್ ಪಾತ್ರ ಕೂಡ ಈ ಸಿನಿಮಾದಲ್ಲಿ ಮುಖ್ಯವಾಗಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ‘ಸಲಾರ್​’ ಸಿನಿಮಾಗೆ ಸೀಕ್ವೆಲ್ ಬೇಕೋ ಅಥವಾ ಬೇಡವೋ ಎಂಬುದನ್ನು ನಿರ್ಧರಿಸಲಿದೆ ಈ ವಿಚಾರ

‘ಕೆಜಿಎಫ್ 2​’ ರಿಲೀಸ್ ಆದ ನಂತರದಲ್ಲಿ ಪ್ರಶಾಂತ್ ನೀಲ್ ಕೆಲಸದ ಬಗ್ಗೆ ಎಲ್ಲರಿಗೂ ನಂಬಿಕೆ ಬಂದಿದೆ. ಹೀಗಾಗಿ, ಸಹಜವಾಗಿಯೇ ‘ಸಲಾರ್​’ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ‘ಸಲಾರ್​’ ಸಿನಿಮಾ ಕನ್ನಡದ ‘ಉಗ್ರಂ’ ಚಿತ್ರದ ರಿಮೇಕ್ ಎಂದು ಹೇಳಲಾಗಿತ್ತು. ಆದರೆ, ಇದನ್ನು ಪ್ರಶಾಂತ್ ನೀಲ್ ಒಪ್ಪಿಕೊಂಡಿಲ್ಲ. ಪ್ರಭಾಸ್ ಅವರು ‘ಸಲಾರ್​’ ಮಾತ್ರವಲ್ಲದೆ ಇನ್ನೂ ಹಲವು ಪ್ರಾಜೆಕ್ಟ್​​ಗಳಲ್ಲಿ ಬ್ಯುಸಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:08 am, Fri, 24 February 23