ಶ್ರುತಿ ಹಾಸನ್ ಸಿಗರೇಟ್ ಹೊಡೆಯುತ್ತಿರುವ ಫೋಟೋ ವೈರಲ್

ಸರಣಿ ಬ್ಲಾಕ್‌ಬಸ್ಟರ್‌ಗಳ ಮೂಲಕ ಗಮನ ಸೆಳೆದ ಶ್ರುತಿ ಹಾಸನ್, 'ಆಕಾಶಮ್ಲೋ ಓಕಾ ತಾರಾ' ಚಿತ್ರದ ತಮ್ಮ ವೈರಲ್ ಸಿಗರೇಟ್ ಧಮ್ ಹೊಡೆಯುವ ಫೋಟೋದ ಕುರಿತು ಸುದ್ದಿಯಲ್ಲಿದ್ದಾರೆ. ಇದು ಅವರ ಸಿನಿಮಾದ ಪಾತ್ರಕ್ಕಾಗಿ ಹೊರತು ಸಾರ್ವಜನಿಕವಾಗಿ ಸಿಗರೇಟ್ ಸೇದಿದ್ದಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ದುಲ್ಕರ್ ಸಲ್ಮಾನ್ ಜೊತೆ ನಟಿಸುತ್ತಿರುವ ಈ ಪ್ಯಾನ್-ಇಂಡಿಯಾ ಚಿತ್ರ 2026ರಲ್ಲಿ ತೆರೆಗೆ ಬರಲಿದೆ.

ಶ್ರುತಿ ಹಾಸನ್ ಸಿಗರೇಟ್ ಹೊಡೆಯುತ್ತಿರುವ ಫೋಟೋ ವೈರಲ್
ಶ್ರುತಿ ಹಾಸನ್
Image Credit source: Shruthi Haasan Instagram
Edited By:

Updated on: Jan 29, 2026 | 8:03 AM

ಸರಣಿ ಬ್ಲಾಕ್‌ಬಸ್ಟರ್‌ಗಳ ಮೂಲಕ ಗಮನ ಸೆಳೆದ ಶ್ರುತಿ ಹಾಸನ್ (Shruthi Haasan) ಈಗ ಸುದ್ದಿಯಲ್ಲಿದ್ದಾರೆ. ಅವರು ಕಮಲ್ ಹಾಸನ್ ಮಗಳು. ಆದರೂ ಚಿತ್ರರಂಗದಲ್ಲಿ ತಮ್ಮದೇ ಆದ ಹೆಸರು ಮಾಡಿದರು. ಈಗ ಅವರು ಧಮ್ ಹೊಡೆಯುತ್ತಿರುವ ಫೋಟೋ ವೈರಲ್ ಆಗಿದೆ. ಹಾಗಂತ ಅವರು ಪಬ್ಲಿಕ್​​ನಲ್ಲಿ ಧಮ್ ಹೊಡೆದು ಸಿಕ್ಕಿ ಬಿದ್ದಿದ್ದಲ್ಲ. ಅವರು ಈ ರೀತಿ ಸಿಗರೇಟ್ ಸೇದಿದ್ದು ಸಿನಿಮಾಗಾಗಿ. ಆ ಬಗ್ಗೆ ಇಲ್ಲಿದೆ ಮಾಹಿತಿ.

ದುಲ್ಕರ್ ಸಲ್ಮಾನ್ ಈಗ ‘ಆಕಾಶಮ್ಲೋ ಒಕ್ತ ತಾರಾ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪವನ್ ಸಾದಿನೇನಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಪ್ರತಿಷ್ಠಿತ ಗೀತಾ ಆರ್ಟ್ಸ್ ಮತ್ತು ಸ್ವಪ್ನ ಸಿನಿಮಾ ಅಡಿಯಲ್ಲಿ ಸಂದೀಪ್ ಗುನ್ನಮ್ ಮತ್ತು ರಮ್ಯಾ ಗುನ್ನಮ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ದುಲ್ಕರ್‌ಗೆ ನಾಯಕಿಯಾಗಿ ಹೊಸ ನಾಯಕಿ ಸಾತ್ವಿಕ ವೀರವಳ್ಳಿ ನಟಿಸುತ್ತಿದ್ದಾರೆ. ಶ್ರುತಿಹಾಸನ್ ಕೂಡ ಸಿನಿಮಾದ ಭಾಗ ಆಗಿದ್ದಾರೆ.

ಶ್ರುತಿ ಹಾಸನ್ ಜನ್ಮದಿನದ ಪ್ರಯುಕ್ತ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಆಯ್ದ ಚಿತ್ರಗಳನ್ನು ಮಾಡುತ್ತಿರುವ ಶ್ರುತಿ ಹಾಸನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಾ ಚಿತ್ರತಂಡ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದೆ.

ಅವರು ಕನ್ನಡಕ ಧರಿಸಿದ್ದಾರೆ. ಅವರ ತುಟಿಗಳ ಮೇಲಿನ ಸಿಗರೇಟ್ ಮತ್ತು ಅದರಿಂದ ಬರುತ್ತಿರುವ ಹೊಗೆ ಅವರ ಪಾತ್ರಕ್ಕೆ ರಾನೆಸ್ ನೀಡಿದೆ. ಶ್ರುತಿ ಹಾಸನ್ ಪಾತ್ರವು ಕಥೆಯಲ್ಲಿ ಪ್ರಮುಖ ತಿರುವು ನೀಡಲಿದೆ ಎನ್ನಲಾಗಿದೆ. ಈ ಫೋಟೋ ವೈರಲ್ ಮಾಡಲಾಗುತ್ತಿದೆ.

ಇದನ್ನೂ ಓದಿ: ಒಂದು ಸಿನಿಮಾ ಹೋಯ್ತು, ಮತ್ತೊಂದು ಸಿನಿಮಾ ಬಂತು ಶ್ರುತಿ ಹಾಸನ್ ಅದೃಷ್ಟ

ಈ ಚಿತ್ರವು ಉತ್ತಮ ತಾಂತ್ರಿಕ ಗುಣಮಟ್ಟವನ್ನು ಹೊಂದಿರಲಿದೆ. ಜಿ.ವಿ. ಪ್ರಕಾಶ್ ಕುಮಾರ್ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಸುಜಿತ್ ಸಾರಂಗ್ ಛಾಯಾಗ್ರಹಣವನ್ನು ಮತ್ತು ಶ್ವೇತಾ ಸಾಬು ಸಿರಿಲ್ ನಿರ್ಮಾಣ ವಿನ್ಯಾಸವನ್ನು ನೋಡಿಕೊಳ್ಳುತ್ತಿದ್ದಾರೆ. ಪ್ರಸ್ತುತ ನಿರ್ಮಾಣದ ಅಂತಿಮ ಹಂತದಲ್ಲಿರುವ ‘ಆಕಾಶಮ್ಲೋ ಓಕಾ ತಾರಾ’ 2026 ರ ಬೇಸಿಗೆಯಲ್ಲಿ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:59 am, Thu, 29 January 26