ನನ್ನ ಬಾಯಿ ಬಚ್ಚಲು ಮನೆ ಇದ್ದಂಗೆ; ಮಂಜು ಪಾವಗಡ ಹೀಗೆ ಹೇಳಿದ್ದು ಯಾಕೆ?

ಸಾಮಾನ್ಯವಾಗಿ ಜಗಳ ಮಾಡುವಾಗ ಕೆಟ್ಟ ಶಬ್ದ ಪ್ರಯೋಗ ಮಾಡುವಾಗ ನನ್ನ ಬಾಯಿ ಬಚ್ಚಲ ಮನೆ ಇದ್ದಂತೆ ಎನ್ನುತ್ತಾರೆ. ಆದರೆ, ಮಂಜು ಬೇರೆಯದೇ ರೀತಿ ಬಳಸಿದ್ದಾರೆ.

ನನ್ನ ಬಾಯಿ ಬಚ್ಚಲು ಮನೆ ಇದ್ದಂಗೆ; ಮಂಜು ಪಾವಗಡ ಹೀಗೆ ಹೇಳಿದ್ದು ಯಾಕೆ?
ಮಂಜು ಪಾವಗಡ

Updated on: Mar 26, 2021 | 5:45 PM

ಬಿಗ್​ ಬಾಸ್​ ಮನೆಯಲ್ಲಿ ಮಂಜು ಸದಾ ನಗುತ್ತಿರುತ್ತಾರೆ. ಅವರು ಮನೆಯಲ್ಲಿ ರೇಗಾಡಿದ್ದು ಕಡಿಮೆ. ಅವರು ಹೆಚ್ಚು ಜಗಳ ಮಾಡಿಕೊಂಡಿದ್ದು ಎಂದರೆ ಅದು ಪ್ರಶಾಂತ್​ ಸಂಬರಗಿ ಜತೆ ಮಾತ್ರ. ಈ ಮಧ್ಯೆ ಮಂಜು ನನ್ನ ಬಾಯಿ ಬಚ್ಚಲ ಮನೆ ಇದ್ದಂತೆ ಎಂದಿದ್ದಾರೆ. ಅಷ್ಟಕ್ಕೂ ಅವರು ಹೇಳಿದ್ದು ಯಾರಿಗೆ? ರೇಗಾಡಿ ಅವರು ಹೀಗೆ ಹೇಳಿದ್ದಾರಾ ಎನ್ನುವ ಪ್ರಶ್ನೆ ಮೂಡೋದು ಸಹಜ. ಅದಕ್ಕೆ ಉತ್ತರ ಈ ಸ್ಟೋರಿಯಲ್ಲಿದೆ.

ಸಾಮಾನ್ಯವಾಗಿ ಜಗಳ ಮಾಡುವಾಗ ಕೆಟ್ಟ ಶಬ್ದ ಪ್ರಯೋಗ ಮಾಡುವಾಗ ನನ್ನ ಬಾಯಿ ಬಚ್ಚಲ ಮನೆ ಇದ್ದಂತೆ ಎನ್ನುತ್ತಾರೆ. ಬಚ್ಚಲಮನೆಯಲ್ಲಿ ಕೊಳೆ ಇರುವುದರಿಂದ ಈ ರೀತಿ ಪ್ರಯೋಗ ಮಾಡಲಾಗುತ್ತದೆ. ಆದರೆ, ಮಂಜು ಬಳಕೆ ಮಾಡಿದ್ದ ಅರ್ಥ ಬೇರೆ ರೀತಿಯಲ್ಲಿದೆ. ಅವರು ಬಯ್ಯುವಾಗ ಈ ಶಬ್ದ ಬಳಕೆ ಮಾಡಿಲ್ಲ. ಮಂಜು ಹೀಗೆ ಹೇಳುವುದಕ್ಕೆ ಬೆರೆಯದೇ ಕಾರಣ ಇದೆ.

ಬಿಗ್​ ಬಾಸ್​ ಮನೆಯಲ್ಲಿ ಶುಭಾ ಹಾಗೂ ನಿಧಿ ಸದಾ ಗಾಸಿಪ್​ ಮಾಡುತ್ತಿರುತ್ತಾರೆ. ರಾತ್ರಿ ವೇಳೆ ಮಲಗಿದ್ದಾಗ ಇಬ್ಬರೂ ಮನೆಯ ಎಲ್ಲಾ ಸದಸ್ಯರ ಬಗ್ಗೆ ತಮಗಿಷ್ಟ ಬಂದಂತೆ, ತಾವು ಕಂಡಂತೆ ಹೇಳುತ್ತಾರೆ. ಈಗ ಮಂಜು ಜತೆ ಸೇರಿ ಬಿಗ್​ ಬಾಸ್​ ಮನೆಯ ಗಾಸಿಪ್​ ಬಗ್ಗೆ ಶುಭಾ ಮಾತನಾಡಿದ್ದಾರೆ.

ಮಂಜು ಶುಭಾ ಇಬ್ಬರೂ ಕೂತಿದ್ದರು. ಈ ವೇಳೆ ಮಾತು ಆರಂಭಿಸಿದ ಮಂಜು, ಬೇರೆಯವರ ಬಾಯಿ ವಿಚಾರ ಹಾಗಿರಲಿ. ನನ್ನ ಬಾಯಿ ಗೊತ್ತಲ್ಲ ಬಚ್ಚಲ ಮನೆ ಇದ್ದಂತೆ. ಬಿಗ್​ ಬಾಸ್​ ಮನೆಯಲ್ಲಿ ಅವರ ಬಗ್ಗೆ ಇವರು, ಇವರ ಬಗ್ಗೆ ಅವರು ಮಾತನಾಡುತ್ತಾ ಇರುತ್ತಾರೆ. ಬಿಗ್​ ಬಾಸ್​ ಮನೆಯಲ್ಲಿ ಮಾತನಾಡೋಕೆ ಏನೂ ಇಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಬಿಗ್​ ಬಾಸ್ ಮನೆಯಲ್ಲಿ ಗಾಸಿಪ್​ ಹೇಗಾಗುತ್ತದೆ ಎಂಬುದನ್ನೂ ವಿವರಿಸಿದ್ದಾರೆ. ಇದೆಲ್ಲವುದಕ್ಕೂ ಶುಭಾ ತಲೆ ಆಡಿಸಿದ್ದಾರೆ.

ಇದನ್ನೂ ಓದಿ: BBK8: ’ಮಂಜುನ ಮದ್ವೆ ಆಗೋಕೆ ಚಾನ್ಸೇ ಇಲ್ಲ’: ಸಂಬರಗಿ ಬಳಿ ಎಲ್ಲವನ್ನೂ ಬಿಚ್ಚಿಟ್ಟ ದಿವ್ಯಾ ಸುರೇಶ್​

‘ಸ್ಕರ್ಟ್​ ಹಾಕ್ಕೊಂಡು ಮಲಗಿದ್ದಾಗ ನಮ್ಮ ತಂದೆಯೇ ಕೆಟ್ಟದಾಗಿ ನಡೆದುಕೊಂಡ್ರು’: ಬಿಗ್​ ಬಾಸ್​ ಚಂದ್ರಕಲಾ ಬದುಕಿನ ಕಹಿ ಘಟನೆ!

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us