ಕನ್ನಡ ಬಿಗ್ ಬಾಸ್ನಲ್ಲಿ ಒಟ್ಟೂ 7 ಸೀಸನ್ಗಳು ಪೂರ್ಣಗೊಂಡಿವೆ. ಆರು ಸೀಸನ್ಗಳಲ್ಲಿ ಪುರುಷರೇ ವಿನ್ ಆಗಿದ್ದಾರೆ. ಒಂದು ಸೀಸನ್ನಲ್ಲಿ ಮಾತ್ರ ನಟಿ ಶ್ರುತಿ ಬಿಗ್ ಬಾಸ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಈಗ ಬಿಗ್ ಬಾಸ್ ಮನೆ ಸೇರಿರುವ ಮಹಿಳಾ ಸ್ಪರ್ಧಿಗಳಿಗೂ ಶ್ರುತಿ ಮಾದರಿ ಆಗಿದ್ದಾರೆ. ಅಷ್ಟೇ ಅಲ್ಲ, ಅವರಂತೆ ನಾವೂ ಈ ಬಾರಿ ಬಿಗ್ ಬಾಸ್ ಕಿರೀಟ ಗೆಲ್ಲಬೇಕು ಎನ್ನುವ ಕನಸನ್ನು ಕಾಣುತ್ತಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಶುಭಾ ಪೂಂಜಾ ಹಾಗೂ ನಿಧಿ ಸುಬ್ಬಯ್ಯ ಮಾತನಾಡುತ್ತಿದ್ದರು. ಈ ವೇಳೆ ಹೆಣ್ಣುಮಕ್ಕಳು ಪುರುಷರನ್ನೇ ಫೇವರಿಟ್ ಸ್ಪರ್ಧಿಗಳು ಎಂದು ಆಯ್ಕೆ ಮಾಡುತ್ತಿರುವುದಕ್ಕೆ ಇಬ್ಬರೂ ಬೇಸರ ಹೊರ ಹಾಕಿದರು.
ನಾವು ಪ್ರತಿ ಬಾರಿ ರಾಜೀವ್, ಮಂಜು, ಅರವಿಂದ್ ಅವರ ಹೆಸರನ್ನು ಆಯ್ಕೆ ಮಾಡುತ್ತೇವೆ. ಆದರೆ, ಅವರು ಒಂದು ಬಾರಿಯಾದರೂ ನಮ್ಮ ಹೆಸರನ್ನು ಎತ್ತಿಕೊಂಡರಾ? ಗಂಡುಮಕ್ಕಳು ಟಾಸ್ಕ್ ಆಧಾರದಮೇಲೆ ದಿವ್ಯಾ ಉರುಡುಗ, ದಿವ್ಯಾ ಸುರೇಶ್ ಅವರ ಹೆಸರನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ನಾವು ಬಕೆಟ್ ಹಿಡ್ಯಲ್ಲ. ಇದ್ದಿದ್ದು ಇದ್ದಂಗೆ ಹೇಳ್ತೀವಿ ಎಂದರು ನಿಧಿ.
ಈ ಬಾರಿಯ ಸೀಸನ್ ಹೇಗಿರಬೇಕು ಎಂದರೆ ಫಿನಾಲೆಗೆ ಐದರಲ್ಲಿ ನಾಲ್ಕು ಜನ ಹೆಣ್ಮಕ್ಳೇ ಇರಬೇಕು. ನಾಲ್ಕು ಅಲ್ಲದಿದ್ದರೆ ಮೂರಾದರೂ ಹೆಣ್ಮಕ್ಳು ಇರಬೇಕು. ಪ್ರತಿ ಬಾರಿ ಗಂಡಸರೇ ಏಕೆ ವಿನ್ ಆಗುತ್ತಾರೆ ಎನ್ನುವ ಪ್ರಶ್ನೆ ನನಗೆ ಸದಾ ಕಾಡುತ್ತದೆ. ಶ್ರುತಿ ಅಮ್ಮ ಒಬ್ಬರೆ ಆಟವಾಡಿದ್ದರು. ಅವರು ನಮ್ಮ ತರ ಗುಂಪಲ್ಲಿ ಗೋವಿಂದ ಆಗಿರಲಿಲ್ಲ. ಅದಕ್ಕೆ ಅವರು ವಿನ್ ಆಗಿದ್ದರು ಎಂದು ಹೇಳುವ ಮೂಲಕ ಇದೇ ತಂತ್ರವನ್ನು ಮನೆಯಲ್ಲಿ ಉಪಯೋಗಿಸಬೇಕು ಎಂದು ಪರೋಕ್ಷವಾಗಿ ಸೂಚಿಸಿದರು.
ಈಗಾಗಲೇ ಬಿಗ್ ಬಾಸ್ ಮನೆಯಿಂದ ಮೂರು ಸ್ಪರ್ಧಿಗಳು ಹೊರ ಬಿದ್ದಿದ್ದಾರೆ. ಈ ಮೂವರು ಹೆಣ್ಣುಮಕ್ಕಳೇ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ. ಬಿಗ್ ಬಾಸ್ ಮನೆಯಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿರುವ ವಿಚಾರ ಕೂಡ ಮನೆಯಲ್ಲಿರುವ ಮಹಿಳಾ ಸ್ಪರ್ಧಿಗಳ ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ: BBK8: ತನ್ನನ್ನೇ ತಾನು ನಂಬದ ಶಮಂತ್ ಮೇಲೆ ಜನರಿಗೆ ಯಾಕಿಷ್ಟು ನಂಬಿಕೆ? ಇದು ಬಿಗ್ ಬಾಸ್ ರಹಸ್ಯ!