ಹೊರ ಜಗತ್ತಿನ ಸಂಪರ್ಕವನ್ನು ಬಿಟ್ಟು ಬೇರೆಯದೇ ಲೋಕದಲ್ಲಿ ಬದುಕುವುದು ಇದೆಯಲ್ಲ ಅದು ಕಷ್ಟದ ಕೆಲಸ. ಮೊಬೈಲ್ ಇಲ್ಲದೆ, ಆಪ್ತರನ್ನು ಬಿಟ್ಟಿರುವುದಕ್ಕೆ ಎಮೋಷನಲಿ ಸ್ಟ್ರಾಂಗ್ ಆಗಿರಬೇಕು. ಬಿಗ್ ಬಾಸ್ ಮನೆ ಪ್ರವೇಶ ಮಾಡುವವರಿಗೆ ಹೀಗೊಂದು ಸಮಸ್ಯೆ ಎದುರಾಗದೇ ಇರದು. ಈಗ ಶುಭಾ ಪೂಂಜಾ ಕೂಡ ಹೀಗೊಂದು ಅನುಭವ ಹಂಚಿಕೊಂಡಿದ್ದಾರೆ.
ಶುಭಾ ಪೂಂಜಾ ಬಿಗ್ ಬಾಸ್ ಮನೆಯಲ್ಲಿ ಹಾಯಾಗಿದ್ದಾರೆ. ಅವರ ಫಿಯಾನ್ಸಿ ಸುಮಂತ್ ಅವರನ್ನು ನೆನಪು ಮಾಡಿಕೊಂಡು ಆಗಾಗ ಬೇಸರಗೊಂಡಿದ್ದಿದೆ. ಆದರೆ, ಉಳಿದಂತೆ ಅವರು ಸ್ಟ್ರಾಂಗ್ ಆಗಿದ್ದಾರೆ. ಪ್ರತಿ ವಾರ ಉತ್ತಮ ಪ್ರದರ್ಶನ ನೀಡುವ ಮೂಲಕ ನಾಮಿನೇಷನ್ನಿಂದ ಬಚಾವ್ ಆಗುತ್ತಿದ್ದಾರೆ. ಈಗ ಮನೆಯಲ್ಲಿ ತುಂಬಾನೇ ಕಷ್ಟವಾಗುತ್ತಿದೆ ಎಂದು ಶುಭಾ ಹೇಳಿದ್ದಾರೆ.
ಹೊರಜಗತ್ತಲ್ಲಿ ನಾವು ದೂರ ಇದ್ದರೂ ಫೋನ್ ಇರುತ್ತದೆ. ಈ ಮೂಲಕ ನಾವು ಸಂಪರ್ಕದಲ್ಲಿ ಇದ್ದೇವೆ ಅನಿಸುತ್ತದೆ. ಇಂದು ಬೆಳಗ್ಗೆ ಏನೋ ಕನಸು ಬಿದ್ದಿತ್ತು. ಬಿಗ್ ಬಾಸ್ ಸಾಂಗ್ ಬಂದಾಗ ನನಗೆ ರಿಯಾಲಿಟಿಗೆ ಬರೋದಕ್ಕೆ ತುಂಬಾನೇ ಸಮಯ ಹಿಡಿಯಿತು. ಕಳೆದ ಒಂದು ವಾರದಿಂದ ನಿಜವಾಗಲೂ ಎಮೋಷನಲಿ ಟಫ್ ಆಗ್ತಿದೆ. ಒಂದು ಟೈಮ್ನಲ್ಲಿ ಸೈಕ್ ಮಾಡಿ ಬಿಡುತ್ತದೆ ಎಂದರು.
ಈ ವೇಳೆ ಜತೆಗಿದ್ದ ಮಂಜು ಕೂಡ ಇದಕ್ಕೆ ಧ್ವನಿಗೂಡಿಸಿದರು. ಈ ಮನೆಯಲ್ಲಿ ನೋವಾದಾಗ ಮತ್ತೂ ತೊಂದರೆ ಆಗುತ್ತದೆ. ಇನ್ನು 3 ವಾರ ಅಷ್ಟೇ. ಆದರೆ, ಇಲ್ಲಿವರೆಗೆ ಬಂದು ಮನೆಯಿಂದ ಹೊರಹೋಗಿ ಬಿಟ್ಟರೆ ತುಂಬಾನೇ ಬೇಸರ ಆಗುತ್ತದೆ ಎಂದರು.
ಇದನ್ನೂ ಓದಿ: Prashanth Sambargi: ಸುದೀಪ್ ಮಾತಿಗೆ ಬೆಲೆಕೊಟ್ಟು ದೊಡ್ಡ ನಿರ್ಧಾರ ತೆಗೆದುಕೊಂಡ ಪ್ರಶಾಂತ್ ಸಂಬರಗಿ; ಮನೆಯವರಿಗೆ ಶಾಕ್
ಬಿಗ್ ಬಾಸ್ ಹೆಸರು ದುರ್ಬಳಕೆ ಮಾಡಿಕೊಂಡ ಪ್ರಶಾಂತ್ ಸಂಬರಗಿ; ಸುದೀಪ್ ಛೀಮಾರಿ