Lakshana Serial: ನಕ್ಷತ್ರಳ ಜೀವನವನ್ನು ಹಾಳು ಮಾಡುವ ಖತರ್ನಾಕ್ ಪ್ಲಾನ್ ಹಾಕಿದ್ದಾಳೆ ಶ್ವೇತಾ!

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 06, 2022 | 11:17 AM

ಶಕುಂತಳಾ ದೇವಿ ಮನೆಗೆ ಬಂದು ಸೇರಿಕೊಳ್ಳುತ್ತೇನೆ. ನಿನ್ನಿಂದ ಭೂಪತಿಯನ್ನು ಕಿತ್ತುಕೊಂಡು, ನಿನ್ನನ್ನು ಬೀದಿಗೆ ತಂದು ನಿಲ್ಲಿಸುತ್ತೇನೆ ಎಂದು ಶ್ವೇತಾ ಅಹಂಕಾರದ ಮಾತನ್ನಾಡುತ್ತಾಳೆ.

Lakshana Serial: ನಕ್ಷತ್ರಳ ಜೀವನವನ್ನು ಹಾಳು ಮಾಡುವ ಖತರ್ನಾಕ್ ಪ್ಲಾನ್ ಹಾಕಿದ್ದಾಳೆ ಶ್ವೇತಾ!
Follow us on

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರವರೆಗೆ ರಾತ್ರಿ 8.30ಕ್ಕೆ ಪ್ರಸಾರವಾಗುವ ಲಕ್ಷಣ ಧಾರವಾಹಿಯು ತನ್ನ ವಿಭಿನ್ನ ಕಥೆಯ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ನಾಯಿ ಬಾಲ ಡೊಂಕು ಎನ್ನುವ ಗಾದೆ ಮಾತಿದೆ ಈ ಶ್ವೇತಾ ಬುದ್ಧಿಯು ಹಾಗೆ. ಆಕೆ ಎಷ್ಟೇ ತಪ್ಪು ಮಾಡಿದರೂ ಮತ್ತೆ ಅದೇ ತಪ್ಪನ್ನು ಮಾಡಿ ಹಳೆ ಚಾಳಿಯನ್ನು ಮುಂದುವರೆಸುತ್ತಿದ್ದಾಳೆ. ನೀನು ಮಾರಲು ಹೋದದ್ದು ತಪ್ಪು, ಇನ್ನು ಮುಂದೆ ಒಂದು ತಪ್ಪು ಮಾಡಿದರೂ ಪರಿಣಾಮ ನೆಟ್ಟಗಿರಲ್ಲ ಎಂದು ಬುದ್ಧಿ ಮಾತು ಹೇಳಿದ ನಕ್ಷತ್ರಳಿಗೆ ಹೊಸ ಚಾಲೆಂಜ್ ಹಾಕಿದ್ದಾಳೆ ಶ್ವೇತಾ.

ಇನ್ನೂ ಕೇವಲ ಒಂದು ವಾರದಲ್ಲಿ ನಾನು ಶಕುಂತಳಾ ದೇವಿ ಮನೆಗೆ ಬಂದು ಸೇರಿಕೊಳ್ಳುತ್ತೇನೆ. ನಿನ್ನಿಂದ ಭೂಪತಿಯನ್ನು ಕಿತ್ತುಕೊಂಡು, ನಿನ್ನನ್ನು ಬೀದಿಗೆ ತಂದು ನಿಲ್ಲಿಸುತ್ತೇನೆ ಎಂದು ಶ್ವೇತಾ ಅಹಂಕಾರದ ಮಾತನ್ನಾಡುತ್ತಾಳೆ. ಇದಕ್ಕೆ ಪ್ರತ್ಯುತ್ತರ ನೀಡಿದ ನಕ್ಷತ್ರ, ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ. ಭೂಪತಿಯನ್ನು ನನ್ನಿಂದ ಕಿತ್ತುಕೊಳ್ಳುವುದು ದೂರದ ಮಾತು. ಕೆಟ್ಟ ಯೋಚನೆಗಳನ್ನು ಬದಲಾಯಿಸಿಕೋ, ನಿನ್ನ ಗ್ರಹಚಾರವನ್ನು ಬಿಡಿಸುವುದು ನನಗೆ ದೊಡ್ಡ ವಿಷಯ ಅಲ್ಲ ಎಂದು ಹೇಳಿ ಹೊರಟು ಹೊಗುತ್ತಾಳೆ.

ಇದನ್ನು ಓದಿ: ‘ಸುಳ್ಳು ಆರೋಪ ಮಾಡಿ ಭುವಿಯನ್ನು ಕೆಲಸದಿಂದ ತೆಗೆಸಿದ್ದು ನಾನೇ’; ಕೊನೆಗೂ ತಪ್ಪು ಒಪ್ಪಿಕೊಂಡ ಸಾನಿಯಾ

ಇವರಿಬ್ಬರ ಮಾತುಕತೆಯನ್ನು ಅಲ್ಲೆ ಪಕ್ಕದಲ್ಲಿ ನಿಂತು ಕೇಳಿಸಿಕೊಂಡ ಸೃಷ್ಟಿಗೆ ಶ್ವೇತಾಳ ಮೇಲೆ ಎಲ್ಲಿಲ್ಲದ ಕೋಪ ಬರುತ್ತದೆ, ಜಂಬದ ಕೋಳಿ ಶ್ವೇತಾಳ ಬಳಿಗೆ ಮಿಲ್ಲಿಯ ಜೊತೆಗೆ ಬಂದ ಸೃಷ್ಟಿ ಬೇರೊಬ್ಬರ ಗಂಡನನ್ನು ಕಿತ್ತುಕೊಳ್ಳುತ್ತೇನೆ ಎಂದು ಹೇಳುತ್ತಿಯಲ್ವಾ ನಿನಗೆ ನಾಚಿಕೆ ಆಗಲ್ವಾ. ನಿನ್ನದು ಯಾವುದು ಕೊಳಕು ಜನ್ಮ ಕಣೆ ಎಂದು ಬೈಯುತ್ತಾಳೆ. ಇದಕ್ಕೆ ಡೋಂಟ್ ಕೇರ್ ಎನ್ನದ ಶ್ವೇತಾ, ನಕ್ಷತ್ರಳ ಜೀವನವನ್ನು ಹಾಳು ಮಾಡುತ್ತೇನೆ ಅಂತ ಹೇಳಿದಾಗ, ಅವಳು ನನ್ನ ತಂಗಿ ಅವಳ ಜೀವನವನ್ನು ಹಾಳು ಮಾಡಿದರೆ ನಿನ್ನ ಜುಟ್ಟು ಹಿಡಿದು ಮೂಲೆಗುಂಪು ಮಾಡುತ್ತೇನೆ ಎಂದು ನಕ್ಷತ್ರ ಹೇಳುತ್ತಾಳೆ.

ಶ್ವೇತಾಳ ಮೇಲೆ ಶಕುಂತಳಾದೇವಿಯ ಕುರುಡು ನಂಬಿಕೆ :

ಶ್ವೇತಾಳಿಗೆ ಸಪೋರ್ಟಿವ್ ಆಗಿ ಇರುವಂತದ್ದೇ ಶಕುಂತಳಾದೇವಿ. ಇದು ಕೂಡಾ ಶ್ವೇತಾಳ ದುರಹಂಕಾರಕ್ಕೆ ಒಂದು ಕಾರಣ ಅಂತನೇ ಹೇಳಬಹುದು. ನಕ್ಷತ್ರ ಖಂಡಿತವಾಗಿಯೂ ನಾನು ಮನೆ ಮಾರಿರುವ ವಿಚಾರವನ್ನು ಮನೆಯಲ್ಲಿ ಹೇಳುತ್ತಾಳೆ, ಇದರಿಂದ ಅತ್ತೆಗೆ ನನ್ನ ಮೇಲೆ ನಂಬಿಕೆ ಹೊರಟು ಹೋಗಬಹುದೆಂದು ಮನೆಯವರ ಒಳ್ಳೆಯದಕ್ಕೆ ಮನೆಯನ್ನು ಮಾರಲು ಹೊರಟಿದ್ದೆ ಎಂಬ ಸುಳ್ಳು ಕತೆಯನ್ನು ಹೇಳುತ್ತಾಳೆ. ಭೂಪತಿಗೆ ಶ್ವೇತಾಳ ವಿಷಯವನ್ನು ನಕ್ಷತ್ರ ಹೇಳಿದಾಗ, ಶ್ವೇತಾ ಹೀಗೆ ಮಾಡುತ್ತಾರೆಂದರೆ ನಂಬಲಾಗುವುದಿಲ್ಲ ಎಂದು ಭೂಪತಿ ಹೇಳುತ್ತಾನೆ.

ಅದಕ್ಕೆ ನಕ್ಷತ್ರ ನೀನು ನಂಬಲೇಬೇಕು ಆಕೆಯ ಇನ್ನೊಂದು ಮುಖ ನಿನಗೆ ಗೊತ್ತಿಲ್ಲ ಎಂದು ಹೇಳುವ ಸಂದರ್ಭದಲ್ಲಿ ಶಕುಂತಳಾ ದೇವಿ ಅಲ್ಲಿಗೆ ಬಂದು ನಿನ್ನ ನಾಟಕವನ್ನು ನಿಲ್ಲಿಸು ಎಂದು ಹೇಳುತ್ತಾರೆ. ನಿನಗೆ ಮತ್ತು ನಿನ್ನ ತಂದೆಗೆ ದುರ್ಬುದ್ಧಿ ಇರುವಂತದ್ದು, ಶ್ವೇತಾ ಎಲ್ಲಾ ವಿಷಯವನ್ನು ನನಗೆ ಹೇಳಿದ್ದಾಳೆ ಅವಳ ತಪ್ಪು ಏನು ಇಲ್ಲ ಎಂದು ಕುರುಡು ನಂಬಿಕೆಯಿಂದ ಶ್ವೇತಾಳ ಪರ ಶಕುಂತಳಾದೇವಿ ವಾದ ಮಾಡುತ್ತಾರೆ.

ಇದಾದ ಬಳಿಕ ಬೇಸರಗೊಂಡಿದ್ದ ನಕ್ಷತ್ರ, ಸತ್ಯ ಯಾವಗಲಾದರೂ ಹೊರ ಬರಲೇಕು, ನಾನು ಮೊದಲಿನಿಂದಲೂ ಸತ್ಯವನ್ನೇ ನಂಬಿದವಳು, ಸತ್ಯಮೇವ ಜಯತೆ ಎಂದು ಹೇಳಿ ಹೊರಟು ಹೋಗುತ್ತಾಳೆ. ಈಕೆಯ ಮಾತನ್ನು ಕೇಲಿ ಭೂಪತಿಯು ಯೋಚನೆ ಮಾಡುತ್ತಾ ನಿಲ್ಲುತ್ತಾನೆ. ಭೂಪತಿ ಮತ್ತು ಶಕುಂತಳಾದೇವಿಗೆ ಇನ್ನಾದರೂ ಶ್ವೇತಾಳ ನಿಜ ರೂಪದ ದರ್ಶನವಾಗುತ್ತಾ ಎಂಬುದನ್ನು ಮುಂದೆ ನೋಡಬೇಕಾಗಿದೆ.

ಮಾಲಾಶ್ರೀ ಅಂಚನ್