‘ಸುಳ್ಳು ಆರೋಪ ಮಾಡಿ ಭುವಿಯನ್ನು ಕೆಲಸದಿಂದ ತೆಗೆಸಿದ್ದು ನಾನೇ’; ಕೊನೆಗೂ ತಪ್ಪು ಒಪ್ಪಿಕೊಂಡ ಸಾನಿಯಾ

ಭುವಿಯನ್ನು ಕೆಲಸದಿಂದ ತೆಗೆಯಬೇಕು ಎಂದು ಪ್ಲ್ಯಾನ್ ರೂಪಿಸಿದವಳು ಸಾನಿಯಾ. ಆದರೆ, ಈಗ ಅದು ಅವಳಿಗೆ ಕುತ್ತಾಗಿದೆ. ಸಾನಿಯಾಳನ್ನು ಎಂಡಿ ಪಟ್ಟದಿಂದ ಕೀಳಬೇಕು ಎಂದು ರತ್ನಮಾಲಾ ಯೋಚಿಸುತ್ತಿದ್ದಾಳೆ. ಈ ಘಟನೆ  ಅದಕ್ಕೆ ಸಹಕಾರಿ ಆಗಬಹುದು ಎಂಬುದು ಕೆಲವರ ಊಹೆ.

‘ಸುಳ್ಳು ಆರೋಪ ಮಾಡಿ ಭುವಿಯನ್ನು ಕೆಲಸದಿಂದ ತೆಗೆಸಿದ್ದು ನಾನೇ’; ಕೊನೆಗೂ ತಪ್ಪು ಒಪ್ಪಿಕೊಂಡ ಸಾನಿಯಾ
‘ಕನ್ನಡತಿ’ ಧಾರಾವಾಹಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Oct 06, 2022 | 10:01 AM

‘ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial) ಭುವಿಯು ಹರ್ಷನ ಮದುವೆ ಆಗಿ ಬಂದಿದ್ದಾಳೆ. ಇದಾದ ನಂತರದಲ್ಲಿ ಆಕೆಗೆ ಕಷ್ಟಗಳು ಹೆಚ್ಚುತ್ತಲೇ ಇವೆ. ಆಕೆಗೆ ಸಾನಿಯಾ ಒಂದಲ್ಲಾ ಒಂದು ರೀತಿಯಲ್ಲಿ ಹಿಂಸೆ ನೀಡುತ್ತಲೇ ಬರುತ್ತಿದ್ದಳು. ಭುವಿ ಇಷ್ಟಪಟ್ಟು ಮಾಡುತ್ತಿದ್ದ ಕನ್ನಡ ಉಪನ್ಯಾಸದ ಕೆಲಸದಿಂದಲೂ ಆಕೆಯನ್ನು ಕಿತ್ತು ಹಾಕಿದ್ದಳು ಸಾನಿಯಾ. ಇದಕ್ಕಾಗಿ ಆಕೆ ದೊಡ್ಡ ಸಂಚು ರೂಪಿಸಿದ್ದಳು. ಅದು ಯಶಸ್ಸು ಕೂಡ ಆಗಿತ್ತು. ಆದರೆ, ನೋಡುವವರ ಕಣ್ಣಿಗೆ ಅದನ್ನು ಹರ್ಷ ಮಾಡಿದ್ದಾನೆ ಎಂಬ ರೀತಿಯಲ್ಲಿ ಬಿಂಬಿಸಲಾಗಿತ್ತು. ಆದರೆ, ಈಗ ಹರ್ಷ ಎಲ್ಲವನ್ನೂ ಬಾಯಿ ಬಿಡಿಸಿದ್ದಾನೆ. ತನ್ನದು ತಪ್ಪಾಗಿದೆ ಎಂದು ಸ್ವತಃ ಸಾನಿಯಾ ಒಪ್ಪಿಕೊಂಡಿದ್ದಾಳೆ. ಇದರಿಂದ ರತ್ನಮಾಲಾ ಮನೆಯಲ್ಲಿ ಅಶಾಂತಿ ನೆಲೆಸಿದೆ.

‘ಸೀಟ್ ಕೊಡಿಸುವುದಾಗಿ ಭುವಿ ಹಣ ಪಡೆದಿದ್ದಾಳೆ. ಈಗ ನನಗೆ ಸೀಟ್ ಕೊಡಿಸಿ’ ಎಂದು ನೀಲೇಶ್ ಹಾಗೂ ಆತನ ಫ್ರೆಂಡ್ಸ್ ಕಾಲೇಜ್​ಗೆ ಬಂದು ಹಠ ಹಿಡಿದಿದ್ದರು. ಇದರಲ್ಲಿ ಭುವಿಯದ್ದೇ ತಪ್ಪು ಎಂಬ ರೀತಿ ಬಿಂಬಿಸಲಾಯಿತು. ಆಕೆಯನ್ನು ಕೆಲಸದಿಂದ ತೆಗೆಯಲಾಯಿತು. ನೀಲೇಶ್ ಆ್ಯಂಡ್ ಗ್ಯಾಂಗ್​ಗೆ ಹರ್ಷ ಹೋಗಿ ಹೊಡೆದು ಬಂದಿದ್ದ. ಇದನ್ನು ವಿಡಿಯೋ ಮಾಡಿ ಹರ್ಷನನ್ನು ಬ್ಲ್ಯಾಕ್​ಮೇಲ್ ಮಾಡಲಾಯಿತು. ಈ ಕಾರಣಕ್ಕೆ ಭುವಿ ಬಳಿ ಬಂದು ನೀವು ಕೆಲಸ ಬಿಡಬೇಕು ಎಂದು ಹೇಳಿದ್ದ. ಇದು ಭುವಿಗೆ ಬೇಸರ ತರಿಸಿತ್ತು. ಇದರ ಹಿಂದೆ ಯಾವ ರೀತಿಯ ಸಂಚು ರೂಪಿತಗೊಂಡಿತ್ತು ಎಂಬುದನ್ನು ಹರ್ಷ ಈಗ ಬಿಚ್ಚಿಟ್ಟಿದ್ದಾನೆ.

ರತ್ನಮಾಲಾ ಮನೆಯಲ್ಲಿ ಸಂಭ್ರಮದಿಂದ ಹಬ್ಬ ಆಚರಿಸಲಾಗುತ್ತಿತ್ತು. ಈ ಸಂದರ್ಭಕ್ಕೆ ಸರಿಯಾಗಿ ಹರ್ಷನ ಎಂಟ್ರಿ ಆಗಿದೆ. ಆತ ಗನ್ ಹಿಡಿದು ಮನೆಗೆ ಬಂದಿದ್ದ. ಸಾನಿಯಾಗೆ ಗನ್ ತೋರಿಸಿ ಆಕೆಯನ್ನು ಹೆದರಿಸಿದ. ನಿಜ ವಿಚಾರ ಒಪ್ಪಿಕೊಳ್ಳದೆ ಇದ್ದರೆ ಶೂಟ್ ಮಾಡುವ ಎಚ್ಚರಿಕೆಯನ್ನೂ ಕೂಡ ನೀಡಿದ. ಇದರಿಂದ ಭಯಗೊಂಡ ಸಾನಿಯಾ ಎಲ್ಲ ವಿಚಾರವನ್ನು ಒಪ್ಪಿಕೊಂಡಳು. ‘ಸುಳ್ಳು ಆರೋಪ ಮಾಡಿ ಭುವಿಯನ್ನು ಕೆಲಸದಿಂದ ತೆಗೆಸಿದ್ದು ನಾನೇ’ ಎಂಬ ಮಾತನ್ನು ನೇರವಾಗಿ ಹೇಳಿದಳು. ಇದರಿಂದ ಒಮ್ಮೆ ಎಲ್ಲರಿಗೂ ಶಾಕ್ ಆಯಿತು.

ಇದನ್ನೂ ಓದಿ
Image
‘ನಿಮ್ಮನ್ನು ಸುಡಬೇಕೋ ಅಥವಾ ಹೂಳಬೇಕೋ ನಿರ್ಧರಿಸುತ್ತೇನೆ’; ಸಾನಿಯಾಗೆ ಹರ್ಷನ ಎಚ್ಚರಿಕೆ
Image
ಹರ್ಷ ಎದುರು ಕತ್ತಿ, ಪಿಸ್ತೂಲ್ ಹಿಡಿದು ನಿಂತ ಸಾನಿಯಾ ಬಲಗೈ ಬಂಟ; ಆ ಬಳಿಕ ನಡೆದಿದ್ದು ಮಾತ್ರ ಅಚ್ಚರಿ
Image
ಸಾನಿಯಾ ಬಲಗೈ ಬಂಟನ ಅವಾಂತರ; ರತ್ನಮಾಲಾ ಎದುರು ಹೊರ ಬೀಳಲಿದೆಯೇ ಅಸಲಿ ವಿಚಾರ?
Image
10 ತಲೆ ರಾವಣನಾದ ಹರ್ಷ; ವಿಚಿತ್ರ ರೂಪ ನೋಡಿ ಭಯಬಿದ್ದ ಮನೆ ಮಂದಿ

ಸಾನಿಯಾಗೆ ಇದೆ ಸಂಕಷ್ಟ

ಭುವಿಯನ್ನು ಕೆಲಸದಿಂದ ತೆಗೆಯಬೇಕು ಎಂದು ಪ್ಲ್ಯಾನ್ ರೂಪಿಸಿದವಳು ಸಾನಿಯಾ. ಆದರೆ, ಈಗ ಅದು ಅವಳಿಗೆ ಕುತ್ತಾಗಿದೆ. ಸಾನಿಯಾಳನ್ನು ಎಂಡಿ ಪಟ್ಟದಿಂದ ಕೀಳಬೇಕು ಎಂದು ರತ್ನಮಾಲಾ ಯೋಚಿಸುತ್ತಿದ್ದಾಳೆ. ಈ ಘಟನೆ  ಅದಕ್ಕೆ ಸಹಕಾರಿ ಆಗಬಹುದು ಎಂಬುದು ಕೆಲವರ ಊಹೆ. ಅಷ್ಟೇ ಅಲ್ಲ, ಆ ಮನೆಗೆ ಬಂದ ಪತ್ರಕರ್ತೆ ಈ ಘಟನೆಯನ್ನು ಚಿತ್ರೀಕರಿಸಿಕೊಂಡಿದ್ದಾಳೆ. ಒಂದೊಮ್ಮೆ ಆ ವಿಡಿಯೋ ಪೊಲೀಸರ ಕೈಗೆ ಸಿಕ್ಕರೆ ಸಾನಿಯಾಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಇನ್ನು ಗನ್ ಎತ್ತಿದ ಕಾರಣಕ್ಕೆ ಹರ್ಷನಿಗೂ ಸಂಕಷ್ಟ ಎದುರಾದರೂ ಅಚ್ಚರಿ ಏನಿಲ್ಲ.

ಇದನ್ನೂ ಓದಿ: ಸಾನಿಯಾ ಹಣೆಗೆ ಗನ್​ ಇಟ್ಟು ಬುಲೆಟ್ ಹಾರಿಸಿದ ಹರ್ಷ; ಮನೆ ಮಂದಿಗೆ ಆಘಾತ

ಬೇಸರದಲ್ಲಿ ಭುವಿ:

ಟೀಚಿಂಗ್ ಕೆಲಸವನ್ನು ಭುವಿ ತುಂಬಾನೇ ಪ್ರೀತಿಯಿಂದ ಮಾಡುತ್ತಿದ್ದಳು. ಆದರೆ, ಆ ಕೆಲಸ ಹೋಗುವಂತೆ ಮಾಡಿದ್ದು ಸಾನಿಯಾ. ಈ ವಿಚಾರ ಇಲ್ಲಿವರೆಗೆ ಆಕೆಗೆ ಗೊತ್ತಿರಲಿಲ್ಲ. ಆದರೆ, ಈಗ ಅಸಲಿ ವಿಚಾರ ಗೊತ್ತಾಗಿದೆ. ಸುಳ್ಳು ಹೇಳಿ ತನ್ನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂಬ ವಿಚಾರ ಕೇಳಿ ಭುವಿಗೆ ಸಾಕಷ್ಟು ಬೇಸರಗೊಂಡಿದ್ದಾಳೆ. ರೂಮ್​ನ ಬಾಗಿಲು ಹಾಕಿಕೊಂಡು ಗಳಗಳನೆ ಅತ್ತಿದ್ದಾಳೆ. ಆಕೆಗೆ ರತ್ನಮಾಲಾ ಮುಂದೆ ಎಂಡಿ ಪಟ್ಟ ನೀಡಿದರೂ ಅಚ್ಚರಿ ಏನಿಲ್ಲ. ಧಾರಾವಾಹಿ ಮುಂದೆ ಯಾವ ರೀತಿಯ ತಿರುವು ಪಡೆದುಕೊಳ್ಳುತ್ತದೆ ಎಂಬುದು ಸದ್ಯದ ಕುತೂಹಲ.

ಶ್ರೀಲಕ್ಷ್ಮಿ ಎಚ್.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:50 am, Thu, 6 October 22

ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್