AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Honganasu: ಕತ್ತಲೆ ಕೋಣೆಯಲ್ಲಿ ವಸೂಧರಾ-ರಿಷಿ ಒಟ್ಟಿಗೆ ಇರುವುದು ನೋಡಿ ಶಾಕ್ ಆದ ಗೌತಮ್

Honganasu Serial Update: ವಸೂಧರಾ ಕೈಯಿಗೆ ಮುಳ್ಳು ಚುಚ್ಚಿಕೊಂಡಿತು. ಗಾಬರಿಯಾದ ರಿಷಿ ವಸೂಧರಾ ಕೈಯಲ್ಲಿದ್ದ ಮುಳ್ಳನ್ನು ತಾನೆ ಬಾಯಿಂದ ಕಚ್ಚಿ ತೆಗೆದ. ಅದೇ ಸಮಯಕ್ಕೆ ಗೌತಮ್ ಎಂಟ್ರಿ ಕೊಟ್ಟ.

Honganasu: ಕತ್ತಲೆ ಕೋಣೆಯಲ್ಲಿ ವಸೂಧರಾ-ರಿಷಿ ಒಟ್ಟಿಗೆ ಇರುವುದು ನೋಡಿ ಶಾಕ್ ಆದ ಗೌತಮ್
‘ಹೊಂಗನಸು’ ಧಾರಾವಾಹಿ
TV9 Web
| Updated By: ಮದನ್​ ಕುಮಾರ್​|

Updated on: Oct 05, 2022 | 9:40 AM

Share

‘ಸ್ಟಾರ್​ ಸುವರ್ಣ’ ವಾಹಿನಿಯ ‘ಹೊಂಗನಸು’ ಧಾರಾವಾಹಿ (Honganasu Serial) ಇಂಟರೆಸ್ಟಿಂಗ್​ ತಿರುವು ಪಡೆದುಕೊಳ್ಳುತ್ತಿದೆ. ಜಗತಿ ಮನೆಗೆ ವಾಪಸ್ ಬಂದಿರುವುದು ಎಲ್ಲರಿಗೂ ಖುಷಿ ತಂದಿದೆ. ಆದರೆ ದೇವಯಾನಿಗೆ ಮಾತ್ರ ಜಗತಿಯನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಹೇಗಾದರೂ ಮಾಡಿ ಮತ್ತೆ ಮನೆಯಿಂದ ಓಡಿಸುವವರೆಗೂ ದೇವಯಾನಿಗೆ ಸಮಾಧಾನವಿಲ್ಲ. ಜಗತಿ ಮನೆಗೆ ಬಂದ ಖುಷಿಗೆ ಬಾವ ಬಟ್ಟೆಯನ್ನು ತಂದಿದ್ದಾನೆ. ದೇವಯಾನಿ ಬಳಿ ಬಂದು ಈ ಬಟ್ಟೆಯನ್ನು ಜಗತಿ ಮತ್ತು ಮಹೇಂದ್ರನಿಗೆ ಕೊಡೋಣ ಎಂದು ಹೇಳುತ್ತಿದ್ದಂತೆ ದೇವಯಾನಿ ಕೋಪಿಸಿಕೊಂಡಳು. ‘ನಾನು ಇದನ್ನು ಕೊಡಲ್ಲ ನೀವೇ ಕೊಡಿ’ ಎಂದು ಗರಂ ಆದಳು. ಅಷ್ಟರಲ್ಲೇ ರಿಷಿ ಬಂದಿದ್ದನ್ನು ನೋಡಿ ದೇವಯಾನಿ ತಾನೇ ಬಟ್ಟೆ ಕೊಡಲು ಮುಂದಾದಳು. ದೇವಯಾನಿಯ ನಾಟಕ ನೋಡಿ ಎಲ್ಲರೂ ಶಾಕ್ ಆದರು. ರಿಷಿಯನ್ನು ಮೆಚ್ಚಿಸಲು ದೇವಯಾನಿ ಏನು ಬೇಕಾದರೂ ಮಾಡಲು ರೆಡಿ. ರಿಷಿ ಅಲ್ಲೇ ಇದ್ದಾನೆ ಎನ್ನುವ ಕಾರಣಕ್ಕೆ ದೇವಯಾನಿ, ಜಗತಿಗೆ ತನ್ನ ಕೈಯಾರೆ ಬಟ್ಟೆ ನೀಡಿದಳು.

ಮಹೇಂದ್ರ ಮತ್ತು ಜಗತಿ ಇಬ್ಬರೂ ಅನೇಕ ವರ್ಷಗಳ ಬಳಿಕ ಹಬ್ಬವನ್ನು ಒಟ್ಟಿಗೆ ಸಂಭ್ರಮಿಸುತ್ತಿದ್ದಾರೆ. ಮನೆಯವರೆಲ್ಲರೂ ಸಂತಸದಿಂದ ಕುಣಿದು ಕುಪ್ಪಳಿಸುತ್ತಿದ್ದರು. ಅಷ್ಟೊತ್ತಿಗೆ ಎಂಟ್ರಿ ಕೊಟ್ಟ ದೇವಯಾನಿ ಎಲ್ಲರ ಸಂಭ್ರಮ ನೋಡಿ ಉರಿದುಕೊಂಡಳು. ಮಹೇಂದ್ರನಿಗೆ ಹುಷಾರಿಲ್ಲ ಎನ್ನುವುದನ್ನು ಮರೆತಿದ್ಯಾ ಎಂದು ಕೇಳಿದಳು. ‘ಹಳೆಯದೆಲ್ಲ ಮರೆತು ಹೋಗಿದ್ದೀನಿ’ ಎಂದು ಅತ್ತಿಗೆಗೆ ಮಹೇಂದ್ರ ಟಾಂಗ್ ಕೊಟ್ಟ. ದೇವಯಾನಿ ಸೈಲೆಂಟ್ ಆದಳು. ಆಗ ರಿಷಿ ತನ್ನ ಹಳೆಯ ವಸ್ತುಗಳನ್ನು ತರಲು ಸ್ಟೋರ್ ರೂಮ್‌ಗೆ ತೆರಳಿದ, ಜೊತೆಗೆ ವಸೂಧರಾ ಕೂಡ ಹೊರಟಳು.

ಕತ್ತಲೆ ತುಂಬಿದ ಸ್ಟೋರ್ ರೂಮ್​ನಲ್ಲಿ ಇಬ್ಬರೂ ಹಳೆಯ ವಸ್ತುಗಳನ್ನು ಹುಡುಕುತ್ತಿದ್ದರು. ಆಗ ವಸೂಧರಾ ಕೈಯಿಗೆ ಮುಳ್ಳು ಚುಚ್ಚಿಕೊಂಡಿತು. ಗಾಬರಿಯಾದ ರಿಷಿ ವಸೂಧರಾ ಕೈಯಲ್ಲಿದ್ದ ಮುಳ್ಳನ್ನು ತಾನೆ ಬಾಯಿಂದ ಕಚ್ಚಿ ತೆಗೆದ. ಅದೇ ಸಮಯಕ್ಕೆ ಗೌತಮ್ ಎಂಟ್ರಿ ಕೊಟ್ಟ. ಇಬ್ಬರನ್ನೂ ಕತ್ತಲೆ ಕೋಣೆಯಲ್ಲಿ ನೋಡಿ ಶಾಕ್ ಆದ. ಏನು ಮಾಡುತ್ತಿದ್ದೀರಿ ಎಂದು ಸ್ಟೋರ್ ರೂಮ್ ಒಳಗೆ ಎಂಟ್ರಿ ಕೊಟ್ಟ. ಗೌತಮ್ ಬಂದಿದ್ದು ನೋಡಿ ರಿಷಿ ಸ್ಟೋರ್ ರೂಮ್‌ನಲ್ಲಿದ್ದ ಹಳೆಯ ವಸ್ತುಗಳನ್ನು ತರುವಂತೆ ಹೇಳಿ ವಸೂಧರಾಳನ್ನು ಕರ್ಕೊಂಡು ಹೊರಟ. ವಸೂಧರಾ ಮುಂದೆ ಆಗಲ್ಲ ಎನ್ನಬಾರದು ಎನ್ನುವ ಕಾರಣಕ್ಕೆ ರಿಷಿ ಹೇಳಿದ್ದನ್ನೆಲ್ಲಾ ಹೊತ್ತು ತಂದ ಗೌತಮ್.

ಇದನ್ನೂ ಓದಿ
Image
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
Image
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Image
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Image
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ಮನೆಯಲ್ಲಿ ಎಲ್ಲರೂ  ಖುಷಿ ಖುಷಿಯಾಗಿ ಹಬ್ಬ ಮಾಡುತ್ತಿದ್ದಾರೆ. ರಿಷಿಗೆ ತಾನು ಪ್ರೀತಿಸುತ್ತಿರುವ ಹುಡುಗಿ ಮನೆಯಲ್ಲೇ ಇರುವ ಸಂತಸ. ಇತ್ತ ಮಹೇಂದ್ರನಿಗೆ ಪತ್ನಿ ಜಗತಿ ಮನೆಗೆ ಮರಳಿದ ಖುಷಿ. ಮತ್ತೊಂದೆಡೆ ವಸೂಧರಾಳನ್ನು ಪಟಾಯಿಸಲು ಪ್ರಯತ್ನಿಸುತ್ತಿದ್ದಾನೆ ಗೌತಮ್. ವಸೂಧರಾ ಮೇಲೆ ಹೂ ಹಾಕಬೇಕೆಂದು ಗೌತಮ್ ಹೂ ಹಿಡಿದು ಹೊರಟಿದ್ದ. ಆದರೆ ಜೋರಾಗಿ ಬಂದ ದೇವಯಾನಿ ಗೌತಮ್‌ಗೆ ಡಿಕ್ಕಿ ಹೊಡೆದಳು. ಕೈಯಲ್ಲಿದ್ದ ಹೂ ಮಹೇಂದ್ರ ಮತ್ತು ಜಗತಿ ಮೇಲೆ ಬಿತ್ತು. ಇಬ್ಬರ ಮೇಲೆ ಹೂವಿನ ಸುರಿಮಳೆ ನೋಡಿ ದೇವಯಾನಿ ಕೋಪ ಮತ್ತಷ್ಟು ನೆತ್ತಿಗೇರಿತು. ಆದರೆ ರಿಷಿ ಮುಂದೆ ತೋರಿಸಿಕೊಳ್ಳದೇ ನಗುವ ಹಾಗೆ ನಾಟಕ ಮಾಡುತ್ತಾ ಹಬ್ಬದ ಶುಭಾಶಯ ಹೇಳಿದಳು.

ಪ್ರತಿ ಹೆಜ್ಜೆಯಲ್ಲೂ ಜಗತಿಗೆ ಅವಮಾನ ಮಾಡುತ್ತಾ ರಿಷಿಯ ಸಿಂಪಥಿ ಗಿಟ್ಟಿಸಿಕೊಳ್ಳುತ್ತಿರುವ ದೇವಯಾನಿಯ ಬಣ್ಣ ಬಯಲಾಗುತ್ತಾ? ರಿಷಿ ತನ್ನ ತಾಯಿಯನ್ನು ಒಪ್ಪಿಕೊಳ್ಳುತ್ತಾನಾ ಎಂಬ ಕೌತುಕ ನಿರ್ಮಾಣ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ