AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Siddharth: ‘ಹಿಂದಿಯಲ್ಲಿ ಮಾತನಾಡಿ ತಂದೆ-ತಾಯಿಗೆ 20 ನಿಮಿಷ ಕಿರುಕುಳ ನೀಡಿದ್ರು’; ನಟ ಸಿದ್ದಾರ್ಥ್​ ಆರೋಪ

Actor Siddharth | Hindi Imposition: ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯ ವರ್ತನೆ ಬಗ್ಗೆ ಸಿದ್ದಾರ್ಥ್​ ಅವರು ಆರೋಪ ಮಾಡಿದ್ದಾರೆ. ಹಿಂದಿ ಹೇರಿಕೆ ಕುರಿತ ಚರ್ಚೆಗೆ ಇದರಿಂದಾಗಿ ಮತ್ತೆ ಪುಷ್ಟಿ ಸಿಕ್ಕಂತೆ ಆಗಿದೆ.

Siddharth: ‘ಹಿಂದಿಯಲ್ಲಿ ಮಾತನಾಡಿ ತಂದೆ-ತಾಯಿಗೆ 20 ನಿಮಿಷ ಕಿರುಕುಳ ನೀಡಿದ್ರು’; ನಟ ಸಿದ್ದಾರ್ಥ್​ ಆರೋಪ
ಸಿದ್ದಾರ್ಥ್
TV9 Web
| Edited By: |

Updated on:Dec 28, 2022 | 3:27 PM

Share

ಹಿಂದಿ ಹೇರಿಕೆ (Hindi Imposition) ಬಗ್ಗೆ ದೇಶದಲ್ಲಿ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಈಗ ಖ್ಯಾತ ನಟ ಸಿದ್ದಾರ್ಥ್​ (Siddharth) ಅವರು ಆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ವಿಮಾನ ನಿಲ್ದಾಣದಲ್ಲಿನ ಭದ್ರತಾ ಸಿಬ್ಬಂದಿಯ ವರ್ತನೆ ಬಗ್ಗೆ ಅವರೀಗ ಆರೋಪ ಮಾಡಿದ್ದಾರೆ. ವಯಸ್ಸಾದ ತಮ್ಮ ತಂದೆ-ತಾಯಿಗೆ ಕಿರುಕುಳ ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಸಿದ್ದಾರ್ಥ್​ ಅವರು ಆಗಾಗ ವಿವಾದ (Siddharth Controversy) ಮಾಡಿಕೊಳ್ಳುತ್ತಾರೆ. ರಾಜಕೀಯದ ನಿಲುವುಗಳಿಗೆ ಸಂಬಂಧಿಸಿದಂತೆ ನೆಟ್ಟಿಗರು ಅವರನ್ನು ವಿರೋಧಿಸಿದ ಅನೇಕ ನಿದರ್ಶನಗಳಿವೆ. ಆದರೆ ಈ ಬಾರಿ ಅವರು ಭಾಷೆಯ ವಿಚಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಮಧುರೈ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯಿಂದ 20 ನಿಮಿಷ ಕಿರುಕುಳ ಆಯಿತು. ನನ್ನ ವಯಸ್ಸಾದ ತಂದೆ-ತಾಯಿಯ ಬ್ಯಾಗ್​ನಿಂದ ಕಾಯಿನ್​ಗಳನ್ನು ತೆಗೆಸಿದರು. ಇಂಗ್ಲಿಷ್​ನಲ್ಲಿ ಮಾತನಾಡಿ ಎಂದು ಹೇಳಿದರೂ ಕೂಡ ಪದೇ ಪದೇ ಹಿಂದಿಯಲ್ಲಿ ಮಾತನಾಡಿದರು. ಅದನ್ನು ನಾವು ವಿರೋಧಿಸಿದಾಗ ಭಾರತದಲ್ಲಿ ಹೀಗೆಯೇ ಇರುವುದು ಅಂತ ಹೇಳಿದ್ರು. ಕೆಲಸ ಇಲ್ಲದ ಜನ ಅಧಿಕಾರದ ದರ್ಪ ತೋರುತ್ತಿದ್ದಾರೆ’ ಎಂದು ಸಿದ್ದಾರ್ಥ್​ ಅವರು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಹಿಂದಿ ಹೇರಿಕೆ ಕುರಿತ ಚರ್ಚೆಗೆ ಇದರಿಂದಾಗಿ ಮತ್ತೆ ಪುಷ್ಟಿ ಸಿಕ್ಕಂತೆ ಆಗಿದೆ.

ಇದನ್ನೂ ಓದಿ: Hindi Imposition: ಹಿಂದಿ ಹೇರಿಕೆ ವಿರೋಧಿಸಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ತಮಿಳುನಾಡಿನ ವೃದ್ಧ

ಇದನ್ನೂ ಓದಿ
Image
Hindi Imposition: ಹಿಂದಿ ಹೇರಿಕೆ ವಿರೋಧಿಸಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ತಮಿಳುನಾಡಿನ ವೃದ್ಧ
Image
ಹಿಂದಿ ಹೇರಿಕೆಯಂತೆ, ಹಿಂದುತ್ವ ಹೇರಿಕೆಯನ್ನು ನಾವು ಒಪ್ಪಲ್ಲ ಎಂದ ಚೇತನ್ ಅಹಿಂಸಾ
Image
Kerala CM: ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿ ಹೇರಿಕೆ ಬೇಡ, ಪ್ರಧಾನಿ ಮೋದಿಗೆ ಪತ್ರ ಬರೆದ ಕೇರಳ ಸಿಎಂ ಪಿಣರಾಯಿ ವಿಜಯನ್
Image
ಹಿಂದಿ ಹೇರಿಕೆ ಬಗ್ಗೆ ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ವರದಿ ಆಘಾತಕಾರಿ: ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿ​​

ಚಿತ್ರರಂಗದಲ್ಲಿ ಸಿದ್ದಾರ್ಥ್​ ಅವರಿಗೆ 20 ವರ್ಷಗಳ ಅನುಭವ ಇದೆ. ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್​ ಆಗಿದ್ದಾರೆ. ದೇಶಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ. ಈ ಹಿಂದೆ ಸೈನಾ ನೆಹ್ವಾಲ್​ ಕುರಿತು ಟ್ವೀಟ್ ಮಾಡಿದ್ದಕ್ಕಾಗಿ ಸಿದ್ದಾರ್ಥ್​ ಭಾರಿ ಟೀಕೆ ಎದುರಿಸಿದ್ದರು. ಅವರ ವಿರುದ್ಧ ಕೇಸ್​ ಕೂಡ ದಾಖಲಾಗಿತ್ತು. ನಂತರ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದರು.

ಇದನ್ನೂ ಓದಿ: ಹಿಂದಿ ಹೇರಿಕೆ ಎಂಬ ದೊಡ್ಡ ಹುನ್ನಾರ: ಇದು ಬರೀ ಭಾಷೆಯ ವಿಷಯ ಅಲ್ಲ, ಭವಿಷ್ಯದ ವಿಷಯ

ಆಮಿರ್ ಖಾನ್​ ಜೊತೆ ‘ರಂಗ್ ದೇ ಬಸಂತಿ’ ಚಿತ್ರದಲ್ಲಿ ಸಿದ್ದಾರ್ಥ್​ ನಟಿಸಿದ ಬಳಿಕ ಬಾಲಿವುಡ್​ ವಲಯದಲ್ಲಿ ಅವರ ಜನಪ್ರಿಯತೆ ಹೆಚ್ಚಿತು. ಈಗಲೂ ಅವರು ಬಹುಬೇಡಿಕೆಯ ನಟನಾಗಿ ಚಾರ್ಮ್​ ಉಳಿಸಿಕೊಂಡಿದ್ದಾರೆ. ಸೈದ್ಧಾಂತಿಕ ಕಾರಣಗಳಿಂದ ಕೆಲವರು ಅವರನ್ನು ವಿರೋಧಿಸುತ್ತಾ ಬಂದಿದ್ದಾರೆ. ಆದರೂ ಚಿತ್ರರಂಗದಲ್ಲಿ ಸಿದ್ದಾರ್ಥ್​ ಅವರ ಡಿಮ್ಯಾಂಡ್​ ಕಮ್ಮಿ ಆಗಿಲ್ಲ.

ಸಿನಿಮಾಗಳ ವಿಚಾರದಲ್ಲಿ ಸಿದ್ದಾರ್ಥ್​ ಚ್ಯೂಸಿ ಆಗಿದ್ದಾರೆ. ಕಮಲ್​ ಹಾಸನ್​ ನಟನೆಯ ‘ಇಂಡಿಯನ್​ 2’ ಚಿತ್ರದಲ್ಲಿ ಸಿದ್ದಾರ್ಥ್​ ಕೂಡ ಅಭಿನಯಿಸುತ್ತಿದ್ದಾರೆ. ವೆಬ್​ ಸಿರೀಸ್​ ಲೋಕದಲ್ಲೂ ಅವರು ಸಕ್ರಿಯರಾಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:27 pm, Wed, 28 December 22

Follow Us
TV9 Web
TV9 Web

TV9 Kannada

Read More