ಸಿಂಗಪುರ ಪೊಲೀಸರನ್ನೂ ಬಿಟ್ಟಿಲ್ಲ ರಜನೀಕಾಂತ್​ರ ‘ಕೂಲಿ’ ಕ್ರೇಜು

Rajinikanth: ಭಾರತೀಯ ಸಿನಿಮಾಗಳಿಗೆ ಅಮೆರಿಕ, ಜಪಾನ್, ಯುಎಇ ಇನ್ನೂ ಕೆಲ ದೇಶಗಳಲ್ಲಿ ಭಾರಿ ಬೇಡಿಕೆ ಇರುವುದು ಗೊತ್ತಿರುವುದೇ ಆದರೆ ಸಿಂಗಪುರದಂಥಹಾ, ಅತಿಯಾದ ಸಿನಿಮಾ ಸಂಸ್ಕೃತಿ ಇಲ್ಲದ ದೇಶಗಳಲ್ಲಿಯೂ ಹವಾ ಎಬ್ಬಿಸಿದೆ ರಜನೀಕಾಂತ್​ರ ‘ಕೂಲಿ’ ಸಿನಿಮಾ. ಹೌದು, ರಜನೀಕಾಂತ್​ ನಟನೆಯ ‘ಕೂಲಿ’ ಸಿನಿಮಾದ ಹಾಡೊಂದಕ್ಕೆ ಸಿಂಗಪುರದ ಪೊಲೀಸರು ರೀಲ್ಸ್ ಮಾಡಿದ್ದಾರೆ.

ಸಿಂಗಪುರ ಪೊಲೀಸರನ್ನೂ ಬಿಟ್ಟಿಲ್ಲ ರಜನೀಕಾಂತ್​ರ ‘ಕೂಲಿ’ ಕ್ರೇಜು
Rajinikanth

Updated on: Aug 10, 2025 | 7:07 PM

ರಜನೀಕಾಂತ್ (Rajinikanth) ನಟನೆಯ ‘ಕೂಲಿ’ ಸಿನಿಮಾ ಬಿಡುಗಡೆಗೆ ಇನ್ನು ನಾಲ್ಕು ದಿನಗಳಷ್ಟೆ ಬಾಕಿ ಇದೆ. ಸಿನಿಮಾದ ಹವಾ ಭಾರತದಲ್ಲಿ ಬಲು ಜೋರಾಗಿ ಹರಡಿದೆ. ಅಂದಹಾಗೆ ಭಾರತದಲ್ಲಿ ಮಾತ್ರವಲ್ಲ ಹೊರದೇಶಗಳಲ್ಲಿಯೂ ಸಿನಿಮಾದ ಹವಾ ಬಲು ಜೋರಾಗಿದೆ. ವಿದೇಶಗಳಲ್ಲಿ ಸಹ ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾ ಹವಾ ಎಬ್ಬಿಸಿದೆ.

ಭಾರತೀಯ ಸಿನಿಮಾಗಳಿಗೆ ಅಮೆರಿಕ, ಜಪಾನ್, ಯುಎಇ ಇನ್ನೂ ಕೆಲ ದೇಶಗಳಲ್ಲಿ ಭಾರಿ ಬೇಡಿಕೆ ಇರುವುದು ಗೊತ್ತಿರುವುದೇ ಆದರೆ ಸಿಂಗಪುರದಂಥಹಾ, ಅತಿಯಾದ ಸಿನಿಮಾ ಸಂಸ್ಕೃತಿ ಇಲ್ಲದ ದೇಶಗಳಲ್ಲಿಯೂ ಹವಾ ಎಬ್ಬಿಸಿದೆ ರಜನೀಕಾಂತ್​ರ ‘ಕೂಲಿ’ ಸಿನಿಮಾ. ಹೌದು, ರಜನೀಕಾಂತ್​ ನಟನೆಯ ‘ಕೂಲಿ’ ಸಿನಿಮಾದ ಹಾಡೊಂದಕ್ಕೆ ಸಿಂಗಪುರದ ಪೊಲೀಸರು ರೀಲ್ಸ್ ಮಾಡಿದ್ದಾರೆ.

ಸಿಂಗಪುರ ಪೊಲೀಸ್ ಪಡೆ ವಿಶ್ವದ ಅತ್ಯುತ್ತಮ ಪೊಲೀಸ್ ಪಡೆಗಳಲ್ಲಿ ಒಂದು. ಇದೀಗ ಸಿಂಗಪುರ ಪೊಲೀಸರು ‘ಕೂಲಿ’ ಸಿನಿಮಾದ ಮಾಸ್ ಹಾಡನ್ನು ಹಿನ್ನೆಲೆಯಾಗಿ ಬಳಸಿಕೊಂಡು ಸ್ಲೋ ಮೋಷನ್​​ನಲ್ಲಿ ತಮ್ಮ ಪೊಲೀಸ್ ಪಡೆಯ ವಿವಿಧ ವಿಭಾಗಗಳನ್ನು ತೋರಿಸುವ ವಿಡಿಯೋ ಒಂದನ್ನು ಮಾಡಿ ತಮ್ಮ ಅಧಿಕೃತ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅಂದಹಾಗೆ ಸಿಂಗಪುರದಲ್ಲಿ ರಜನೀಕಾಂತ್​ಗೆ ದೊಡ್ಡ ಸಂಖ್ಯೆಯ ಅಭಿಮಾನಿ ವರ್ಗವಿದೆ. ಸಿಂಗಪುರದಲ್ಲಿ ಭಾರತೀಯರ ಸಂಖ್ಯೆ ಹೆಚ್ಚಿದೆ. ಈ ಹಿಂದೆ ಸಹ ರಜನೀಕಾಂತ್​ ಅವರ ಹಲವು ಸಿನಿಮಾಗಳು ಸಿಂಗಪುರದಲ್ಲಿ ಉತ್ತಮ ಪ್ರದರ್ಶನ ಕಂಡಿದ್ದವು. ಸಿಂಗಪುರ ಮಾತ್ರವೇ ಅಲ್ಲದೆ ಮಲೇಷ್ಯಾನಲ್ಲೂ ಸಹ ರಜನೀಕಾಂತ್ ಅವರಿಗೆ ಭಾರಿ ದೊಡ್ಡ ಅಭಿಮಾನಿ ವರ್ಗವಿದೆ. ಜಪಾನ್​ನಲ್ಲಿ ಅಂತೂ ದಶಕಗಳಿಂದಲೂ ರಜನೀಕಾಂತ್ ಅವರ ಸಿನಿಮಾಗಳು ಬ್ಲಾಕ್ ಬಸ್ಟರ್ ಪ್ರದರ್ಶನ ಕಾಣುತ್ತಲೇ ಬರುತ್ತಿವೆ.

ಇದನ್ನೂ ಓದಿ:‘ವಾರ್ 2’ Vs ‘ಕೂಲಿ’: ಬುಕ್​ ಮೈ ಶೋನಲ್ಲಿ ಯಾರಿಗೆ ಹೆಚ್ಚಿದೆ ಬೆಂಬಲ?

ಇನ್ನು ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾ ಆಗಸ್ಟ್ 14 ರಂದು ಬಿಡುಗಡೆ ಆಗಲಿದೆ. ಸಿನಿಮಾ ಅನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ರಜನೀಕಾಂತ್ ಜೊತೆಗೆ ಆಮಿರ್ ಖಾನ್, ಉಪೇಂದ್ರ, ವಿಲನ್ ಪಾತ್ರದಲ್ಲಿ ಅಕ್ಕಿನೇನಿ ನಾಗಾರ್ಜುನ, ಸೋಬಿನ್, ಶ್ರುತಿ ಹಾಸನ್, ಪೂಜಾ ಹೆಗ್ಡೆ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:04 pm, Sun, 10 August 25