ಗೌತಮ್ ನಾನು ಸಾಕಿರೋ ನಾಯಿ ಎಂದ ಶಕುಂತಲಾ ಕೆನ್ನೆಗೆ ಹೊಡೆದ ಭೂಮಿಕಾ
Kannada serial: ‘ಅಮೃತಧಾರೆ’ ಧಾರಾವಾಹಿಯಲ್ಲಿ ಭೂಮಿಕಾಗೆ ಎಲ್ಲವೂ ತಿಳಿದು ಹೋಗಿದೆ. ಶಕುಂತಲ ತುಂಬಾನೇ ಕೆಟ್ಟವಳು ಎಂಬ ವಿಚಾರವನ್ನು ಅರಿತಾ ಭೂಮಿಕಾ ನೇರವಾಗಿ ಸವಾಲು ಹಾಕಿದ್ದಾಳೆ. ‘ಭೂಮಿಕಾ ಹಾಗೂ ಗೌತಮ್ನ ದೂರ ಮಾಡುತ್ತೇನೆ’ ಎಂದು ಶಕುಂತಲಾ ಸವಾಲು ಹಾಕಿದ್ದಳು. ಆದರೆ, ಇದನ್ನು ಸುಳ್ಳು ಮಾಡೋದಾಗಿ ಭೂಮಿಕಾ ಶಪಥ ತೊಟ್ಟಿದ್ದಾಳೆ.

‘ಅಮೃತಧಾರೆ’ ಧಾರಾವಾಹಿಯಲ್ಲಿ (Serial) ಸಾಕಷ್ಟು ತಿರುವುಗಳನ್ನು ನೀಡುವ ಕೆಲಸವನ್ನು ನಿರ್ದೇಶಕರು ಮಾಡುತ್ತಿದ್ದಾರೆ. ಈವರೆಗೆ ಭೂಮಿಕಾ ಹಾಗೂ ಗೌತಮ್ ವಿರುದ್ಧ ಸಂಚು ರೂಪಿಸುವ ಕೆಲಸವನ್ನು ಶಕುಂತಲಾ ಮಾಡುತ್ತಿದ್ದಳು. ಆದರೆ, ಇದೆಲ್ಲವೂ ಗುಟ್ಟಾಗಿ ನಡೆಯುತ್ತಿತ್ತು. ಮಗ ಜಯದೇವ್ ಜೊತೆ ಸೇರಿ ಸಂಚು ರೂಪಿಸುತ್ತಿದ್ದರು. ಆದರೆ, ಈಗ ಅದೆಲ್ಲವೂ ಭೂಮಿಕಾಗೆ ತಿಳಿದು ಹೋಗಿದೆ. ಈ ಕಾರಣಕ್ಕೆ ಇಬ್ಬರ ಮಧ್ಯೆ ವಾರ್ ಶುರುವಾಗಿದೆ. ಈ ಯುದ್ಧ ಮತ್ತೊಂದು ಹಂತಕ್ಕೆ ಹೋಗಿದ್ದನ್ನು ಕಾಣಬಹುದು.
‘ಅಮೃತಧಾರೆ’ ಧಾರಾವಾಹಿಯಲ್ಲಿ ಭೂಮಿಕಾಗೆ ಎಲ್ಲವೂ ತಿಳಿದು ಹೋಗಿದೆ. ಶಕುಂತಲ ತುಂಬಾನೇ ಕೆಟ್ಟವಳು ಎಂಬ ವಿಚಾರವನ್ನು ಅರಿತಾ ಭೂಮಿಕಾ ನೇರವಾಗಿ ಸವಾಲು ಹಾಕಿದ್ದಾಳೆ. ‘ಭೂಮಿಕಾ ಹಾಗೂ ಗೌತಮ್ನ ದೂರ ಮಾಡುತ್ತೇನೆ’ ಎಂದು ಶಕುಂತಲಾ ಸವಾಲು ಹಾಕಿದ್ದಳು. ಆದರೆ, ಇದನ್ನು ಸುಳ್ಳು ಮಾಡೋದಾಗಿ ಭೂಮಿಕಾ ಶಪಥ ತೊಟ್ಟಿದ್ದಾಳೆ. ಇದಕ್ಕೆ ಪ್ರತಿ ಸವಾಲು ಕೂಡ ಹಾಕಿದ್ದಾಳೆ.
ಈ ಮಧ್ಯೆ ಭೂಮಿಕಾಳನ್ನು ಸಾಯಿಸಲು ಶಕುಂತಲಾ ಪ್ಲ್ಯಾನ್ ಮಾಡಿದಳು. ಭೂಮಿಕಾ ಹಾಗೂ ಅವಳ ಮಗ ಕಾರಿನಲ್ಲಿ ಹೋಗುವಾಗ ಪ್ಲ್ಯಾನ್ ಮಾಡಿ ಕೊಲ್ಲಲು ಪ್ರಯತ್ನಿಸಿದ್ದಾಳೆ. ಆದರೆ, ಪ್ರಯತ್ನ ವಿಫಲವಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಭೂಮಿಕಾ ಮನೆಗೆ ಬಂದು ಅತ್ತೆಯನ್ನು ವಿಚಾರಿಸಿದ್ದಾಳೆ.
View this post on Instagram
ಆಗ ‘ಗೌತಮ್ ನಾನು ಸಾಕಿದ ನಾಯಿ’ ಎಂದು ಹೇಳಿದ್ದಾಳೆ ಶಕುಂತಲ. ಇದರಿಂದ ಸಿಟ್ಟಾದ ಭೂಮಿಕಾ ಅತ್ತೆಯ ಕೆನ್ನೆಗೆ ಹೊಡೆದಿದ್ದಾಳೆ. ಇದರಿಂದ ಶಕುಂತಲ ತುಂಬಾನೇ ಸಿಟ್ಟಾಗಿದ್ದಾಳೆ. ‘ನಾನು ನಿಮ್ಮ ಕೆನ್ನೆಗೆ ಹೊಡೆದೆ ಎಂದು ಹೋಗಿ ಗೌತಮ್ಗೆ ಹೇಳಿ. ಅವರು ನಂಬ್ತಾರಾ ನೋಡೋಣ’ ಎಂದು ಭೂಮಿಕಾ ಸವಾಲು ಹಾಕಿದ್ದಾಳೆ. ಈ ಜಗಳ ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ಹೋಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಸಿಕ್ಕಿತು ಮತ್ತೊಂದು ಮಗು
ಭೂಮಿಕಾಗೆ ಅವಳಿ ಮಗು ಜನಿಸಿತ್ತು. ಒಂದು ಗಂಡು ಮತ್ತೊಂದು ಹೆಣ್ಣು. ಹೆಣ್ಣು ಮಗು ಕಳೆದು ಹೋಗಿತ್ತು. ಈಗ ಆ ಮಗು ಮತ್ತೆ ಸಿಕ್ಕಿದೆ ಎಂದು ಪ್ರೋಮೋ ಒಂದರಲ್ಲಿ ತೋರಿಸಲಾಗಿದೆ. ಈ ಮಗುವನ್ನು ಮನೆಗೆ ತೆಗೆದುಕೊಂಡು ಬಂದರೆ ಶಕುಂತಲಾ ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಮತ್ತೊಂದೆಡೆ ಭೂಮಿಕಾ ಇದನ್ನು ಒಪ್ಪುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



