94ನೇ ವಯಸ್ಸಿಗೆ ನಿರ್ದೇಶನ ಮಾಡಿದ ‘ಪುಷ್ಪಕ ವಿಮಾನ’ ನಿರ್ದೇಶಕ

ಹಿರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ರಾವ್ 13 ವರ್ಷಗಳ ನಂತರ 'ಸಿಂಗ್ ಗೀತಂ' ಮೂಲಕ ಮರಳಿದ್ದಾರೆ. 94ನೇ ವಯಸ್ಸಿನಲ್ಲೂ ಅವರ ಕ್ರಿಯಾಶೀಲತೆ ಎಲ್ಲರನ್ನೂ ಅಚ್ಚರಿಗೊಳಿಸಿದೆ. 'ಮ್ಯೂಸಿಕಲ್ ಫ್ಯಾಂಟಸಿ' ಕಥಾಹಂದರ ಹೊಂದಿರುವ ಈ ಚಿತ್ರವು ಗಣಿಗಾರಿಕೆ ಪಟ್ಟಣದಲ್ಲಿ ಚಿನ್ನದ ಹುಡುಕಾಟ ಮತ್ತು ಪ್ರಗತಿ-ಸಂರಕ್ಷಣೆಯ ಸಂಘರ್ಷವನ್ನು ಹೇಳುತ್ತದೆ. ನಾಗ್ ಅಶ್ವಿನ್ ನಿರ್ಮಿಸಿರುವ, ಡಿಎಸ್ಪಿ ಸಂಗೀತ ನೀಡಿರುವ ಈ ಸಿನಿಮಾ ಜೂನ್ 11ರಂದು ತೆರೆಕಾಣಲಿದೆ.

94ನೇ ವಯಸ್ಸಿಗೆ ನಿರ್ದೇಶನ ಮಾಡಿದ ‘ಪುಷ್ಪಕ ವಿಮಾನ’ ನಿರ್ದೇಶಕ
ಸಿಂಗೀತಂ

Updated on: May 02, 2026 | 3:08 PM

ಭಾರತೀಯ ಚಿತ್ರರಂಗದ ದಂತಕಥೆ, ಹಿರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ಅವರು ಬರೋಬ್ಬರಿ 13 ವರ್ಷಗಳ ನಂತರ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. ಅವರ ನಿರ್ದೇಶನದ ಹೊಸ ಚಿತ್ರ ‘ಸಿಂಗ್ ಗೀತಂ’ (Sing Geetham) ಟೀಸರ್ ಬಿಡುಗಡೆಯಾಗಿದ್ದು, 94ನೇ ವಯಸ್ಸಿನಲ್ಲೂ ಅವರ ಕ್ರಿಯಾಶೀಲತೆ ಕಂಡು ಎಲ್ಲರೂ ಅಚ್ಚರಿಕೊಂಡಿದ್ದಾರೆ.ಇವರು ಜೆನ್-ಜಿ ತಲೆಮಾರಿಗಿಂತಲೂ ಮಿಗಿಲು ಎಂದು ಗುಣಗಾನ ಮಾಡುತ್ತಿದ್ದಾರೆ.

ಸಿಂಗೀತಂ ಅವರ ಹೆಸರಿನಲ್ಲೇ ಇರುವ ‘ಸಿಂಗ್ ಗೀತಂ’ ಎಂಬ ಶೀರ್ಷಿಕೆಯ ಈ ಚಿತ್ರದ 1 ನಿಮಿಷ 22 ಸೆಕೆಂಡುಗಳ ಟೀಸರ್ ಕುತೂಹಲ ಮೂಡಿಸುವಂತಿದೆ. ಗಣಿಗಾರಿಕೆ ನಡೆಯುವ ಪಟ್ಟಣದ ಹಿನ್ನೆಲೆಯನ್ನು ಹೊಂದಿದ್ದು, ಅಲ್ಲಿ ಜನರು ಚಿನ್ನದ ಹುಡುಕಾಟದಲ್ಲಿ ತೊಡಗುತ್ತಾರೆ. ಪ್ರತಾಪ್ ಎಂಬ ಯುವಕ ವಿಚಿತ್ರ ಜಗತ್ತೊಂದಕ್ಕೆ ಪ್ರವೇಶಿಸಿದಾಗ ಎದುರಿಸುವ ಸವಾಲುಗಳು ಹಾಗೂ ಪ್ರಗತಿ ಮತ್ತು ಸಂರಕ್ಷಣೆಯ ನಡುವಿನ ಸಂಘರ್ಷವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.

ಈ ಚಿತ್ರವು ಒಂದು ‘ಮ್ಯೂಸಿಕಲ್ ಫ್ಯಾಂಟಸಿ’ ಕಥಾಹಂದರವನ್ನು ಹೊಂದಿದೆ. ಅಯಾನ್, ಅಹಲ್ಯಾ ಬಾಮ್ರೂ ಮತ್ತು ಶಾಲಿನಿ ಕೊಂಡೆಪುಡಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೆ, ತುಳಸಿ ಪಿಎ, ಬ್ಯಾನರ್ಜಿ ಮತ್ತು ಶಿವನಾರಾಯಣ ಅವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಶೇಷವೆಂದರೆ, ‘ಕಲ್ಕಿ 2898 ಎಡಿ’ ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ಅವರು ವೈಜಯಂತಿ ಮೂವೀಸ್ ಮತ್ತು ಸ್ವಪ್ನ ಸಿನಿಮಾ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ (DSP) ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ: ಕೊನೆಗೂ ಸೆಟ್ಟೇರಲೇ ಇಲ್ಲ ರಾಜ್​​ಕುಮಾರ್ ನಟಿಸಬೇಕಿದ್ದ ಆ ಸಿನಿಮಾ

ಸಿಂಗೀತಂ ಶ್ರೀನಿವಾಸ ರಾವ್ ಅವರು ಕನ್ನಡ ಮತ್ತು ತೆಲುಗು ಚಿತ್ರರಂಗಕ್ಕೆ ಮರೆಯಲಾಗದ ಕೊಡುಗೆ ನೀಡಿದವರು. 1972 ರಲ್ಲಿ ‘ನೀತಿ ನಿಜಾಯಿತಿ’ ಚಿತ್ರದ ಮೂಲಕ ನಿರ್ದೇಶನ ಆರಂಭಿಸಿದ ಇವರು, 10 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ಅವರು ‘ಚಲಿಸುವ ಮೋಡಗಳು’ ಸಿನಿಮಾ ಮಾಡಿದರು. ಅವರ ‘ಪುಷ್ಪಕ ವಿಮಾನ’ ಗಮನ ಸೆಳೆಯಿತು. ‘ಟುವ್ವಿ ಟುವ್ವಿ ಟುವ್ವಿ’, ‘ಭಾಗ್ಯದ ಲಕ್ಷ್ಮೀ ಬಾರಮ್ಮ’ ಮೊದಲಾದ ಸಿನಿಮಾ ಮಾಡಿದರು. ‘ಸಿಂಗ್ ಗೀತಂ’ ಚಿತ್ರವು ಜೂನ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us