AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಗೂ ಸೆಟ್ಟೇರಲೇ ಇಲ್ಲ ರಾಜ್​​ಕುಮಾರ್ ನಟಿಸಬೇಕಿದ್ದ ಆ ಸಿನಿಮಾ

ಇಂದು ಡಾ. ರಾಜ್‌ಕುಮಾರ್ ಜನ್ಮದಿನ. ಅವರ ಅಭಿಮಾನಿಗಳು ಸದಾ ನೆನಪಿಸಿಕೊಳ್ಳುವ ಪ್ರಸಂಗವೆಂದರೆ ನಿರ್ಮಾಣವಾಗದ ಅವರ 200ನೇ ಚಿತ್ರ 'ಅಮೋಘವರ್ಷ ನೃಪತುಂಗ'. ಪೌರಾಣಿಕ ಮತ್ತು ಐತಿಹಾಸಿಕ ಪಾತ್ರಗಳನ್ನು ಇಷ್ಟಪಡುತ್ತಿದ್ದ ರಾಜ್‌ಕುಮಾರ್ ಅವರಿಗೆ ಇದು ನೆಚ್ಚಿನ ಕಥಾವಸ್ತುವಾಗಿತ್ತು. ಅಂದಿನ ಜಾಹೀರಾತುಗಳ ಹೊರತಾಗಿಯೂ, ಈ ಮಹತ್ವಾಕಾಂಕ್ಷೆಯ ಸಿನಿಮಾ ಸೆಟ್ಟೇರದೆ ಉಳಿದಿದ್ದು, ಅದೆಷ್ಟೋ ಅಭಿಮಾನಿಗಳಿಗೆ ನಿರಾಶೆ ಮೂಡಿಸಿತ್ತು.

ಕೊನೆಗೂ ಸೆಟ್ಟೇರಲೇ ಇಲ್ಲ ರಾಜ್​​ಕುಮಾರ್ ನಟಿಸಬೇಕಿದ್ದ ಆ ಸಿನಿಮಾ
ಅಮೋಘವರ್ಷ
 ಶ್ರೀಲಕ್ಷ್ಮೀ ಎಚ್
| Edited By: |

Updated on:Apr 24, 2026 | 8:12 AM

Share

ರಾಜ್​ಕುಮಾರ್ ಅವರಿಗೆ ಇಂದು (ಏಪ್ರಿಲ್ 24) ಜನ್ಮದಿನ. ಅವರು ಬದುಕಿದ್ದರೆ ಅಭಿಮಾನಿಗಳು ಅವರ ಮನೆಯ ಬಳಿಯೇ ತೆರಳಿ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದರು. ಆದರೆ, ಇಂದು ಅವರಿಲ್ಲ. ಅವರ ನೆನಪಲ್ಲಿ ಎಲ್ಲ ಕಡೆಗಳಲ್ಲಿ ಜನ್ಮದಿನವನ್ನು ಆಚರಣೆ ಮಾಡುವುದನ್ನು ನೀವು ಕಾಣಬಹುದು. ಈಗ ರಾಜ್​ಕುಮಾರ್ ನಟಿಸಬೇಕಿದ್ದ ಒಂದು ಸಿನಿಮಾ ಸೆಟ್ಟೇರಲೇ ಇಲ್ಲ ಎಂಬ ವಿಷಯ ನಿಮಗೆ ಗೊತ್ತೇ? ಆ ಬಗ್ಗೆ ನಾವು ಹೇಳುತ್ತೇವೆ.

ರಾಜ್​​ಕುಮಾರ್ ಅವರು ಇಂತಹ ಪಾತ್ರ ಮಾಡಿಲ್ಲ ಎಂದಿಲ್ಲ. ಬಾಂಡ್, ಪ್ರಣಯದ ಸಿನಿಮಾಗಳು, ಸಮಾಜಕ್ಕೆ ಒಂದೊಳ್ಳೆಯ ಸಂದೇಶವನ್ನು ತಲುಪಿಸುವ ಚಿತ್ರಗಳನ್ನು ಮಾಡಿದರು. ಅದರಲ್ಲೂ ಅವರಿಗೆ ಪೌರಾಣಿಕ, ದೈವಿಕ ಹಾಗೂ ಐತಿಹಾಸಿಕ ಸಿನಿಮಾಗಳನ್ನು ಮಾಡುವುದು ಎಂದರೆ ಇಷ್ಟವಾಗಿತ್ತು. ಅವರು ನಾಟಕಗಳನ್ನು ಮಾಡಿ ಬಂದಿದ್ದಕ್ಕೋ ಏನೋ ಈ ಪಾತ್ರಗಳು ಅವರಿಗೆ ತುಂಬಾನೇ ಹೊಂದಿಕೆ ಆಗುತ್ತಿತ್ತು ಎಂದರೂ ತಪ್ಪಾಗಲಿಕ್ಕಿಲ್ಲ.

ಅಮೋಘವರ್ಷ ನೃಪತುಂಗ ಇದು ರಾಜ್​​ಕುಮಾರ್ ಅವರು ನಟಿಸಬೇಕಿದ್ದ ಸಿನಿಮಾ ಆಗಿತ್ತು. ಇದು ಅವರ 200ನೇ ಚಿತ್ರ ಆಗಬೇಕಿತ್ತು. ಅಂದಿನ ಕಾಲದಲ್ಲಿ ಜಾಹೀರಾತು ಕೂಡ ನೀಡಲಾಗಿತ್ತು. ಈ ಜಾಹೀರಾತನ್ನು ಲಿಖಿತಾ ಎಂಬುವವರು ಶೇರ್ ಮಾಡಿಕೊಂಡಿದ್ದಾರೆ.

ಈ ಸಿನಿಮಾ ಬಗ್ಗೆ ಎಂಎಸ್ ಶ್ರೀ ಹರ್ಷ ಎಂಬುವವರು ಬರೆದುಕೊಂಡಿದ್ದಾರೆ. ‘ಅಮೋಘವರ್ಷ ನೃಪತುಂಗ – ಇದು ಅಣ್ಣಾವ್ರ 200ನೇ ಸಿನಿಮಾ‌ ಎಂದು ಆಗ ಜಾಹಿರಾತು ನೀಡಲಾಗಿತ್ತು ( 1986-87ನಲ್ಲಿ ಅಂದಾಜು ). ಪತ್ರಿಕೆಗಳಲ್ಲಿ ತುಂಬಾ ದಿನ ಹಾಗೆ ಜಾಹಿರಾತು ಬರುತ್ತಲೇ ಇತ್ತು. ನಾವೆಲ್ಲ ಆಗ ರೋಮಾಂಚನಗೊಂಡು, ಕಾತರದಿಂದ ಕಾಯುತ್ತಿದ್ದಾಗಲೇ ದಿಡೀರ್ ಎಂದು ಒಂದು ದಿನ ದೇವತಾ ಮನುಶ್ಯ ರಾಜ್​ಕುಮಾರ್ 200 ನೇ ಚಿತ್ರ ಎಂದು ಘೋಷಣೆ ಮಾಡಲಾಯಿತು’ ಎಂದು ಶ್ರೀ ಹರ್ಷ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:  ಡಾ. ರಾಜ್​ಕುಮಾರ್ ಮೇಲಿನ ಅಭಿಮಾನಕ್ಕೆ ಅಮೆರಿಕದಲ್ಲಿ ಕನ್ನಡ ಗೀತೆ ಹಾಡಿದ ಮೋಹನ್​ಲಾಲ್

‘ನೃಪತುಂಗ ಏಕೆ ಸೆಟ್ ಏರಲಿಲ್ಲ, ಏನು ಕಾರಣ ಎಂದು ಈವರೆಗೂ ನನಗೆ ಗೊತ್ತಿಲ್ಲ. ಆದರೆ ಅದೊಂದು ದೊಡ್ಡ ನಿರಾಶೆ. ಇನ್ನು ಆ ಪಾತ್ರವನ್ನು ಯಾರೂ ಮಾಡಿದರೂ ಅಷ್ಟು ರಸ ಇರುವುದಿಲ್ಲ. ಅದು ಮುಗಿದ ಅಧ್ಯಾಯ ಬಿಡಿ’ ಎಂದು ಅವರು ಬರೆದಿದ್ದಾರೆ. ಅಂದಹಾಗೆ ಈ ಚಿತ್ರವನ್ನು ಸಿಂಗೀತಂ ಶ್ರೀನಿವಾಸರಾವ್ ನಿರ್ದೇಶನ ಮಾಡಬೇಕಿತ್ತು. ಪಾರ್ವತಮ್ಮ ನಿರ್ಮಾಣ ಮಾಡಬೇಕಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:00 am, Fri, 24 April 26

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​