ಗಾಯಕಿ ಕಲ್ಪನಾ ರಾಘವೇದ್ರ ಅವರು ಸುದ್ದಿಯಲ್ಲಿ ಇದ್ದಾರೆ. ಅವರು ಹೈದರಾಬಾದ್‌ನ ತಮ್ಮ ನಿವಾಸದಲ್ಲಿ ಕಳೆದ ಎರಡು ದಿನಗಳಿಂದ ಬಾಗಿಲನ್ನು ತೆಗೆಯದೇ ಮನೆ ಒಳಗೆ ಇದ್ದರು. ಈ ವಿಚಾರದ ಬಗ್ಗೆ ಭದ್ರತಾ ಸಿಬ್ಬಂದಿಗೆ ಅನುಮಾನ ಬಂದು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಪರೀಕ್ಷಿಸಿದಾಗ ಕಲ್ಪನಾ ರಾಘವೇಂದ್ರ ಅವರು ಪ್ರಜ್ಞೆತಪ್ಪಿ ಬಿದ್ದಿದ್ದರು. ಆ ಬಳಿಕ ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎನ್ನುವ ವಿಚಾರ ಗೊತ್ತಾಗಿದೆ.
ಕಲ್ಪನಾ ಅವರು ಕೆಲ ದಿನಗಳ ಹಿಂದೆ ಮನೆ ಸೇರಿದ್ದರು. ಆದರೆ, ಎರಡು ದಿನವಾದರೂ ಅವರು ಬಾಗಿಲು ತೆಗೆದಿಲ್ಲ. ಈ ವಿಚಾರವನ್ನು ಪೊಲೀಸರ ಗಮನಕ್ಕೆ ತರಲಾಯಿತು. ಬಂದು ನೋಡಿದಾಗ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದರು. ಅವರು ನಿದ್ರೆ ಮಾತ್ರೆಗಳನ್ನು ಸೇವನೆ ಮಾಡಿದ್ದರು. ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ ಹಿಂದಿನ ಉದ್ದೇಶ ಏನು ಎಂಬುದು ಇನ್ನೂ ಗೊತ್ತಾಗಿಲ್ಲ. ಕಲ್ಪನಾ ಅವರ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್ನಲ್ಲಿ ಇಡಲಾಗಿದೆ.
ಕಲ್ಪನಾ ಅವರು ಖ್ಯಾತ ಗಾಯಕ ಟಿಎಸ್ ರಾಘವೇಂದ್ರ ಅವರ ಮಗಳು. 2010ರಲ್ಲಿ ಮಲಯಾಳಂನ ‘ಸ್ಟಾರ್ ಸಿಂಗರ್’ ರಿಯಾಲಿಟಿ ಶೋನಲ್ಲಿ ಗೆಲುವು ಕಂಡರು. ಅವರ ಗೆಲುವಿನ ಬಳಿಕ ಇಳಯರಾಜ, ಎಆರ್ ರೆಹಮಾನ್ ಮೊದಲಾದವರ ಜೊತೆ ಅವರು ಕೈ ಜೋಡಿಸಿದರು.
ಕಲ್ಪನಾ ರಾಘವೇಂದ್ರ ಅವರು ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಸಾಕಷ್ಟು ಹಾಡುಗಳನ್ನು ಹಾಡಿದ್ದಾರೆ. ಕನ್ನಡದಲ್ಲಿ ‘ಗಲಾಟೆ’ ಚಿತ್ರದ ‘ಮುದ್ದಾದ ನೆಗೆಯೇ’ ಹಾಡನ್ನು ಹಾಡಿದ್ದರು. ಅವರು ಹಾಡಿದ ಕನ್ನಡದ ಏಕೈಕ ಹಾಡು ಇದು. ಅವರಿಗೆ ಟಾಲಿವುಡ್ ಹಾಗೂ ಕಾಲಿವುಡ್ನಲ್ಲಿ ಬಹುಬೇಡಿಕೆ ಇದೆ. 1500ಕ್ಕೂ ಹೆಚ್ಚಿನ ಹಾಡುಗಳನ್ನು ಅವರು ಹಾಡಿದ್ದಾರೆ. ಅವರು ಒಂದು ಸಿನಿಮಾದಲ್ಲಿ ನಟನೆಯನ್ನೂ ಮಾಡಿದ್ದಾರೆ.
ಇದನ್ನೂ ಓದಿ: ಪಾಕ್ನಲ್ಲಿ ಕ್ರಿಕೆಟರ್ ಆಗಿದ್ದ ಈ ವ್ಯಕ್ತಿ ಈಗ ಸಿಂಗರ್; ಕರ್ಕಶ ಧ್ವನಿಗೆ ರೋಸಿ ಹೋದ ನೆಟ್ಟಿಗರು
ಕಲ್ಪನಾ ಅವರು ತೆಲುಗು ಬಿಗ್ ಬಾಸ್ ಸೀಸನ್ 1ರಲ್ಲಿ ಸ್ಪರ್ಧಿಸಿದ್ದರು. ಆದರೆ, ಇಲ್ಲಿ ಗೆಲುವು ಸಿಕ್ಕಿಲ್ಲ. ಅನೇಕ ಸಿಂಗಿಂಗ್ ರಿಯಾಲಿಟಿ ಶೋಗಳಿಗೆ ಅವರು ಜಡ್ಜ್ ಆಗಿ ತೆರಳಿದ್ದಾರೆ.
ಸದ್ಯ ವೈದ್ಯರು ಕಲ್ಪನಾಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಅವರು ಬೇಗ ಚೇತರಿಕೆ ಕಾಣಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.