ಕೊವಿಡ್​ನಿಂದ ತಂದೆ-ತಾಯಿ ಕಳೆದುಕೊಂಡ ಮಕ್ಕಳ ಸಹಾಯಕ್ಕೆ ಮುಂದಾದ ಸೋನು ಸೂದ್

| Updated By: ಮದನ್​ ಕುಮಾರ್​

Updated on: May 31, 2021 | 4:32 PM

ಸೋನು ಸೂದ್​ ಆಂಗ್ಲ ಮಾಧ್ಯಮವೊಂದರ ಜತೆ ಮಾತನಾಡಿದ್ದು, ಈ ವಿಚಾರ ಹಂಚಿಕೊಂಡಿದ್ದಾರೆ. ಈಗ ಉಂಟಾಗಿರುವ ಪರಿಸ್ಥಿತಿ ತುಂಬಾನೇ ಗಂಭೀರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೊವಿಡ್​ನಿಂದ ತಂದೆ-ತಾಯಿ ಕಳೆದುಕೊಂಡ ಮಕ್ಕಳ ಸಹಾಯಕ್ಕೆ ಮುಂದಾದ ಸೋನು ಸೂದ್
ನಟ ಸೋನು ಸೂದ್
Follow us on

ಕೊರೊನಾ ಎರಡನೇ ಅಲೆ ಜೋರಾಗಿದೆ. ದೇಶದಲ್ಲಿ ಸಾವಿರಾರು ಜನರು ಕೊವಿಡ್​ನಿಂದ ಮೃತಪಡುತ್ತಿದ್ದಾರೆ. ಇನ್ನು, ಕೊವಿಡ್​ಗೆ ತುತ್ತಾಗಿ ಅಪ್ಪ-ಅಮ್ಮ ಇಬ್ಬರೂ ಮೃತಪಟ್ಟು ಅನೇಕ ಮಕ್ಕಳು ಅನಾಥರಾಗಿದ್ದಾರೆ. ಇವರಿಗ ಸಹಾಯ ಮಡೋಕೆ ಸೋನು ಸೂದ್​ ಮುಂದಾಗಿದ್ದಾರೆ. ಅಲ್ಲದೆ, ಸರ್ಕಾರಕ್ಕೆ ಈ ಬಗ್ಗೆ ಅವರು ಮನವಿ ಕೂಡ ಮಾಡಿದ್ದಾರೆ.

ಸೋನು ಸೂದ್​ ಆಂಗ್ಲ ಮಾಧ್ಯಮವೊಂದರ ಜತೆ ಮಾತನಾಡಿದ್ದು, ಈ ವಿಚಾರ ಹಂಚಿಕೊಂಡಿದ್ದಾರೆ. ಈಗ ಉಂಟಾಗಿರುವ ಪರಿಸ್ಥಿತಿ ತುಂಬಾನೇ ಗಂಭೀರವಾಗಿದೆ. ಕೊವಿಡ್​ನಿಂದ ಯಾರು ತಂದೆ-ತಾಯಿಯನ್ನು ಕಳೆದುಕೊಂಡಿದ್ದಾರೋ ಅವರ ಜತೆ ನಾನು ಸಂಪರ್ಕದಲ್ಲಿದ್ದೇನೆ. ಮಹಾರಾಷ್ಟ್ರ ಸರ್ಕಾರದ ಜತೆ ಇವರಿಗೆ ಉಚಿತ ಶಿಕ್ಷಣ ನೀಡುವಂತೆ ಒತ್ತಾಯಿಸಿದ್ದೇನೆ. ಇನ್ನು, ಮನೆಯನ್ನು ಮುನ್ನಡೆಸುವವನು ಮೃತಪಟ್ಟರೆ ಅಂಥ ಕುಟುಂಬಕ್ಕೆ ಪೆನ್ಶನ್​ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ ಎಂದಿದ್ದಾರೆ.

ಇದಕ್ಕೆ ಸರ್ಕಾರ ಶೀಘವೇ ಉತ್ತರಿಸಿದೆ. ಈಗಾಗಲೇ 11-12 ರಾಜ್ಯ ಸರ್ಕಾರಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿವೆ. ಇದಕ್ಕೆ ನಾವು ಶಾಶ್ವತ ಆರ್ಥಿಕ ಪರಿಹಾರ ಹುಡುಕಿಕೊಳ್ಳುವ ಅಗತ್ಯವಿದೆ ಎಂದು ಸೋನು ಸೂದ್​ ಹೇಳಿದ್ದಾರೆ. ಅಲ್ಲದೆ, ಮಹಾರಾಷ್ಟ್ರ ಸರ್ಕಾರ ಈ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳಲಿದೆ ಎನ್ನುವ ಭರವಸೆ ಮೂಡಿಸಿದ್ದಾರೆ.

ಕೊರೊನಾ ಮೊದಲನೇ ಅಲೆ ಕಾಣಿಸಿಕೊಂಡಾಗ ಸೋನು ಸೂದ್ ಸಹಾಯಕ್ಕೆ ಮುಂದಾಗಿದ್ದರು. ಅದನ್ನು ಈಗಲೂ ಮುಂದುವರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಅವರು ಕಷ್ಟ ಎಂದವರಿಗೆ ಸಹಾಯ ಮಾಡುತ್ತಿದ್ದಾರೆ. ಸೋನು ಸೂದ್ ಕೆಲವರಿಗೆ ಆಮ್ಲಜನಕ ಸಿಲಿಂಡರ್​ ನೀಡಿದರೆ, ಇನ್ನೂ ಕೆಲವರಿಗೆ ಬೆಡ್​ ವ್ಯವಸ್ಥೆ ಮಾಡಿದ್ದಾರೆ. ಸಾಕಷ್ಟು ಜನರ ಆಸ್ಪತ್ರೆ ಖರ್ಚನ್ನು ಸ್ವತಃ ಸೋನು ಸೂದ್​ ಅವರೇ ನೋಡಿಕೊಂಡಿದ್ದಾರೆ. ಹೀಗಾಗಿ, ಜನರಿಗೆ ಸೋನು ಸೂದ್​ ಮೇಲೆ ಭಕ್ತಿ ಭಾವನೆ ಮೂಡಿದೆ. ಕೆಲವರು ಅವರನ್ನು ಪೂಜಿಸುತ್ತಿದ್ದಾರೆ. ಅವರು​ ಮಾಡುತ್ತಿರುವ ಕೆಲಸಕ್ಕೆ ಸಾಕಷ್ಟು ಕಡೆಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲದೆ, ಸಾಕಷ್ಟು ಮ್ಯಾಗಜಿನ್​ಗಳು ಈ ಬಗ್ಗೆ ಆರ್ಟಿಕಲ್​ ಪಬ್ಲಿಶ್​ ಮಾಡುತ್ತಿವೆ.

ಇದನ್ನೂ ಓದಿ:

ಮಟನ್​ ಶಾಪ್​ಗೆ ಸೋನು ಸೂದ್​ ಹೆಸರು; ‘ನಾನು ಸಸ್ಯಾಹಾರಿ, ಹೀಗಾಗಿ ನಿಮಗೆ ತರಕಾರಿ ಅಂಗಡಿ ಇಟ್ಟುಕೊಡ್ತೀನಿ’ ಎಂದ ನಟ

ಅಂದು ರಿಜೆಕ್ಟ್​ ಆಗಿದ್ದ ಮ್ಯಾಗಜಿನ್​ನಲ್ಲೇ ಸೋನು ಸೂದ್ ಫೋಟೋ; ಇದಲ್ಲವೇ ಯಶಸ್ಸು?