
ಹಿಂದಿ ಸಿನಿಮಾ ‘ದೂಸ್ರಾ’ ಬಿಡುಗಡೆಗೆ ತಡೆ ನೀಡಬೇಕೆಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹೂಡಿದ್ದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದೆ. ‘ದೂಸ್ರಾ’ ಸಿನಿಮಾನಲ್ಲಿ ಸೌರವ್ ಗಂಗೂಲಿಯ ಚಿತ್ರ ಮತ್ತು ಕೆಲವು ದೃಶ್ಯಗಳನ್ನು ಬಳಸಾಗಿತ್ತು. ಆದರೆ ಚಿತ್ರತಂಡವು ತಮ್ಮ ಅನುಮತಿ ಇಲ್ಲದೆ ತಮ್ಮ ಚಿತ್ರ, ಹೆಸರು ಮತ್ತು ದೃಶ್ಯಗಳನ್ನು ಬಳಸಿದ್ದಾರೆ ಎಂದು ಆರೋಪಿಸಿ ಗಂಗೂಲಿ ದೂರು ದಾಖಲಿಸಿ, ಸಿನಿಮಾ ಬಿಡುಗಡೆಗೆ ತಡೆ ನೀಡುವಂತೆ ಮನವಿ ಮಾಡಿದ್ದರು.
‘ದೂಸ್ರಾ’ ಸಿನಿಮಾದ ಪೋಸ್ಟರ್ನಲ್ಲಿ 2002ರ ನ್ಯಾಟ್ವೆಸ್ಟ್ ಸರಣಿಯ ಕೊನೆಯ ಪಂದ್ಯದ ಗೆಲುವಿನ ಬಳಿಕ ಸೌರವ್ ಗಂಗೂಲಿ ಶರ್ಟ್ ಬಿಚ್ಚಿ ಸಂಭ್ರಮಿಸಿದ್ದ ಐಕಾನಿಕ್ ಚಿತ್ರವನ್ನು ಬಳಸಲಾಗಿದೆ. ಸಿನಿಮಾದ ಟ್ರೈಲರ್ನಲ್ಲಿಯೂ ಸಹ ಹಲವು ದೃಶ್ಯಗಳನ್ನು ಬಳಸಲಾಗಿದೆ. ಆದರೆ ಅದ್ಯಾವುದಕ್ಕೂ ಸಹ ತಮ್ಮ ಅನುಮತಿ ಪಡೆದಿಲ್ಲವೆಂದು ಗಂಗೂಲಿ ಆರೋಪಿಸಿದ್ದು, ತಮ್ಮ ವ್ಯಕ್ತಿತ್ವದ ಹಕ್ಕನ್ನು ಚಿತ್ರತಂಡ ಉಲ್ಲಂಘಿಸಿದೆ ಎಂದು ಗಂಗೂಲಿ ಆರೋಪ ಮಾಡಿದ್ದಾರೆ.
ಆದರೆ ಚಿತ್ರತಂಡವು, ತಾವು ಬಿಸಿಸಿಐ ಹಾಗೂ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ನ ಅನುಮತಿಯನ್ನು ಪಡೆದುಕೊಂಡೇ ನ್ಯಾಟ್ವೆಸ್ಟ್ ಸರಣಿಯ ದೃಶ್ಯಗಳನ್ನು ಹಾಗೂ ಇತರೆ ಕ್ರಿಕೆಟ್ಗೆ ಸಂಬಂಧಿಸಿದ ದೃಶ್ಯಗಳನ್ನು ಬಳಸಿರುವುದಾಗಿ ಹೇಳಿದೆ. ಅಲ್ಲದೆ, ತಾವು ಬಳಸಿರುವ ಕ್ರಿಕೆಟ್ ಪಂದ್ಯದ ದೃಶ್ಯಗಳು ಸೌರವ್ ಗಂಗೂಲಿ ಅವರ ವ್ಯಕ್ತಿತ್ವದ ಹಕ್ಕನ್ನು ಉಲ್ಲಂಘನೆ ಮಾಡುವುದಿಲ್ಲ ಎಂದಿತ್ತು.
ಇದನ್ನೂ ಓದಿ:ಸನ್ನಿ ಡಿಯೋಲ್ ನಟನೆಯ ‘ಸೂರ್ಯ’ ಸಿನಿಮಾ ಬಿಡುಗಡೆಗೆ ತಡೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಣೆ
ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ‘ಗಂಗೂಲಿ ಮನವಿಯಂತೆ ಸಿನಿಮಾದ ಬಿಡುಗಡೆಗೆಯನ್ನು ತಡೆಯಲು ನಿರಾಕರಿಸಿದೆ. ಆದರೆ ಆರೋಪದ ಗಂಭೀರತೆ ಅರಿಯಲು ಸಿನಿಮಾದ ವಿಶೇಷ ಶೋ ಅನ್ನು ಆಯೋಜಿಸುವಂತೆ ಆದೇಶಿಸಿತ್ತು. ಅಕ್ಟೋಬರ್ 29ರಂದು ನಡೆದ ವಿಚಾರಣೆಯಲ್ಲಿ ತಮಗೆ ಆಕ್ಷೇಪವಿರುವ ದೃಶ್ಯಗಳ ಮಾಹಿತಿ ನೀಡುವಂತೆ ಸೌರವ್ ಗಂಗೂಲಿ ಅವರಿಗೆ ಕೋರ್ಟ್ ನಿರ್ದೇಶಿಸಿತ್ತು. ಇದೀಗ ನೀಡಿರುವ ಆದೇಶದಂತೆ ನ್ಯಾಯಾಲಯವು ಸಿನಿಮಾದ ಆರಂಭದಲ್ಲಿ ಡಿಸ್ಕೇಮರ್ (ಹಕ್ಕು ನಿರಾಕರಣೆ) ಸಂದೇಶವನ್ನು ಸೇರಿಸಬೇಕು ಹಾಗೂ ಎರಡು ಕೋಟಿ ರೂಪಾಯಿಗಳ ಗ್ಯಾರೆಂಟಿಯನ್ನು ನೀಡಬೇಕು ಎಂದಿದೆ.
‘ದೂಸ್ರಾ’ ಸಿನಿಮಾ, ಸೌರವ್ ಗಂಗೂಲಿಯ ಅಭಿಮಾನಿ ಆಗಿರುವ ಬಾಲಕಿಯೊಬ್ಬಳ ಕತೆಯಾಗಿದ್ದು, ಆ ಬಾಲಕಿ ತನ್ನನ್ನು ತಾನು ಸೌರವ್ ಗಂಗೂಲಿ ಜೊತೆಗೆ ಹೋಲಿಸಿಕೊಳ್ಳುವ ಕತೆಯನ್ನು ಸಿನಿಮಾ ಒಳಗೊಂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ