AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಮಾಯಣ’: ಶೂರ್ಪನಖಿ ಪಾತ್ರಕ್ಕಾಗಿ ಪಟ್ಟ ಕಷ್ಟ ವಿವರಿಸಿದ ನಟಿ ರಕುಲ್

ಸಿನಿಮಾನಲ್ಲಿ ಈ ಇವರ ಜೊತೆಗೆ ಇನ್ನೂ ಹಲವು ಸ್ಟಾರ್ ನಟ-ನಟಿಯರು ನಟನೆ ಮಾಡಿದ್ದಾರೆ. ವಿವೇಕ್ ಒಬೆರಾಯ್, ರಕುಲ್ ಪ್ರೀತ್ ಸಿಂಗ್, ರವಿ ದುಬೆ ಇನ್ನೂ ಹಲವರಿದ್ದಾರೆ. ಇದೀಗ ನಟಿ ರುಕುಲ್ ಪ್ರೀತ್ ಸಿಂಗ್, ‘ರಾಮಾಯಣ’ ಸಿನಿಮಾನಲ್ಲಿ ಕೆಲಸ ಮಾಡಿದ ಅನುಭವದ ಬಗ್ಗೆ ಮಾತನಾಡಿದ್ದು, ಸಿನಿಮಾಕ್ಕಾಗಿ ಪಟ್ಟ ಕಷ್ಟಗಳನ್ನು ವಿವರಿಸಿದ್ದಾರೆ.

‘ರಾಮಾಯಣ’: ಶೂರ್ಪನಖಿ ಪಾತ್ರಕ್ಕಾಗಿ ಪಟ್ಟ ಕಷ್ಟ ವಿವರಿಸಿದ ನಟಿ ರಕುಲ್
Rakul Preet Singh
ಮಂಜುನಾಥ ಸಿ.
|

Updated on: Nov 06, 2026 | 4:52 PM

Share

ಮುಖ್ಯಾಂಶಗಳು

  • ರಾಮಾಯಣ ಸಿನಿಮಾನಲ್ಲಿ ರಕುಲ್ ಪ್ರೀತ್ ಸಿಂಗ್
  • ಶೂರ್ಪನಖಿ ಪಾತ್ರದಲ್ಲಿ ನಟಿಸಿರುವ ರಕುಲ್ ಪ್ರೀತ್ ಸಿಂಗ್
  • ತಮ್ಮ ಪಾತ್ರಕ್ಕೆ ಪಟ್ಟ ಶ್ರಮದ ಬಗ್ಗೆ ರಕುಲ್ ಮಾತನಾಡಿದ್ದಾರೆ

‘ರಾಮಾಯಣ’ ಸಿನಿಮಾ ರಿಲೀಸ್ ಆಗಿದ್ದು ರಣ್​​ಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಅವರ ಪಾತ್ರಗಳನ್ನು ಪ್ರೇಕ್ಷಕರು ಸಿನಿಮಾ ಸೆಲೆಬ್ರಿಟಿಗಳು ಕೊಂಡಾಡುತ್ತಿದ್ದಾರೆ. ಆದರೆ ಸಿನಿಮಾನಲ್ಲಿ ಈ ಇವರ ಜೊತೆಗೆ ಇನ್ನೂ ಹಲವು ಸ್ಟಾರ್ ನಟ-ನಟಿಯರು ನಟನೆ ಮಾಡಿದ್ದಾರೆ. ವಿವೇಕ್ ಒಬೆರಾಯ್, ರಕುಲ್ ಪ್ರೀತ್ ಸಿಂಗ್, ರವಿ ದುಬೆ ಇನ್ನೂ ಹಲವರಿದ್ದಾರೆ. ಇದೀಗ ನಟಿ ರುಕುಲ್ ಪ್ರೀತ್ ಸಿಂಗ್, ‘ರಾಮಾಯಣ’ ಸಿನಿಮಾನಲ್ಲಿ ಕೆಲಸ ಮಾಡಿದ ಅನುಭವದ ಬಗ್ಗೆ ಮಾತನಾಡಿದ್ದು, ಸಿನಿಮಾಕ್ಕಾಗಿ ಪಟ್ಟ ಕಷ್ಟಗಳನ್ನು ವಿವರಿಸಿದ್ದಾರೆ.

ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟಿ, ‘ರಾಮಾಯಣದಲ್ಲಿ ಶೂರ್ಪಣಖಿಯ ಪಾತ್ರ ನಿರ್ವಹಿಸಿದ ಅನುಭವವನ್ನು ಹಂಚಿಕೊಳ್ಳಲು ನಾನು ಬಹಳ ದಿನಗಳಿಂದ ಕಾಯುತ್ತಿದ್ದೆ. ಇದು ನನಗೆ ತುಂಬಾ ವಿಶೇಷವಾದ ಪಯಣ. ತಲೆಮಾರುಗಳಿಂದ ನಮ್ಮ ಬದುಕು ಮತ್ತು ಸಂಸ್ಕೃತಿಯ ಭಾಗವಾಗಿರುವ ಕಥೆಯ ಭಾಗವಾಗುವ ಅವಕಾಶ ಪ್ರತಿದಿನ ಸಿಗುವುದಿಲ್ಲ. ರಾಮಾಯಣ ಇಷ್ಟು ಭವ್ಯ ಮಟ್ಟದಲ್ಲಿ ಜೀವ ತಳೆಯುವುದನ್ನು ನೋಡುವುದು ನಿಜಕ್ಕೂ ಬೇರೆಯೇ ಅನುಭವ. ನಮ್ಮ ದೇಶಕ್ಕೆ ಅಪಾರ ಅರ್ಥವಿರುವ ಕಥೆಯ ಭಾಗವಾಗಿರುವುದು, ಅದು ಇಷ್ಟು ದೊಡ್ಡ ಮಟ್ಟದಲ್ಲಿ ರೂಪುಗೊಳ್ಳುವುದನ್ನು ಕಾಣುವುದು ಈ ಪಯಣವನ್ನು ಇನ್ನಷ್ಟು ವಿಶೇಷವಾಗಿಸಿದೆ’ ಎಂದಿದ್ದಾರೆ.

‘ದೊಡ್ಡ ಕನಸು ಕಂಡು ಆ ದೃಷ್ಟಿಕೋನವನ್ನು ವಾಸ್ತವವಾಗಿಸಿದ ದಾರ್ಶನಿಕರಾದ ನಿತೇಶ್ ಕುಮಾರ್ ಮತ್ತು ಮಮಿತ್ ಮಲ್ಹೋತ್ರಾ ಸರ್ ಅವರಿಗೆ ಧನ್ಯವಾದಗಳು. ಭಾರತದಿಂದ ಜಗತ್ತಿಗೆ ಅಸಾಧಾರಣವಾದುದನ್ನು ಸೃಷ್ಟಿಸಬೇಕೆಂಬ ಅವರ ಶ್ರಮ ಮತ್ತು ಹಂಬಲ ನನಗೆ ಬಹಳ ಸ್ಫೂರ್ತಿದಾಯಕ ಪಯಣವಾಗಿತ್ತು. ಹಾಗೆಯೇ ರಣ್​​ಬೀರ್ ಕಪೂರ್, ಸಾಯಿ ಪಲ್ಲವಿ, ಯಶ್, ರವಿ ದುಬೆ, ಕಾಜಲ್ ಅಗರ್ವಾಲ್, ಶೋಭನಾ ಮೇಡಂ ಮತ್ತು ಇಡೀ ತಾರಾಗಣ ಹಾಗೂ ಚಿತ್ರತಂಡಕ್ಕೆ ಧನ್ಯವಾದಗಳು. ಅದ್ಭುತ ಸಹನಟರಾಗಿ, ಈ ಮ್ಯಾಜಿಕ್ ಅನ್ನು ತೆರೆಯ ಮೇಲೆ ತರಲು ರಕ್ತ, ಬೆವರು ಹರಿಸಿದ್ದಕ್ಕೆ ಧನ್ಯವಾದ’ ಎಂದಿದ್ದಾರೆ ನಟಿ ರಕುಲ್.

ಇದನ್ನೂ ಓದಿ:‘ರಾಮಾಯಣ’: ಯಶ್ ನಟನೆಗೆ ಮಾರುಹೋದ ಬಾಲಿವುಡ್ ನಟ ವಿವೇಕ್ ಒಬೆರಾಯ್

ನನ್ನ ಲುಕ್ ರೂಪಿಸಿದ ನನ್ನ ತಂಡ ಮತ್ತು ವಸ್ತ್ರವಿನ್ಯಾಸ ತಂಡಕ್ಕೆ ವಿಶೇಷ ಧನ್ಯವಾದಗಳು. ನಮಗೆ ಸಿಗುತ್ತಿರುವ ಎಲ್ಲಾ ಮೆಚ್ಚುಗೆಯೂ ಅವರ ಸೃಜನಶೀಲತೆ ಮತ್ತು ಪರಿಶ್ರಮದ ಫಲ, ಪ್ರತಿದಿನ 4 ಗಂಟೆ ನನ್ನನ್ನು ಸಿದ್ಧಪಡಿಸಿದ್ದಕ್ಕಾಗಿ ಎಲ್ಲರೂ ಈ ಚಿತ್ರವನ್ನು ಅನುಭವಿಸುವುದನ್ನು ನೋಡಲು ಕೃತಜ್ಞತೆ ಮತ್ತು ಉತ್ಸಾಹದಿಂದ ಕಾಯುತ್ತಿದ್ದೇನೆ. ಇದು ಕೇವಲ ಒಂದು ಸಿನಿಮಾ ಅಲ್ಲ. ಇದು ಭಾರತೀಯಳಾಗಿ ನನಗೆ ಹೆಮ್ಮೆ ತರುವ ಕ್ಷಣ’ ಎಂದಿದ್ದಾರೆ ನಟಿ. ಜೊತೆಗೆ ತಮ್ಮ ಮೇಕಪ್ ಹಾಗೂ ಶೂಟಿಂಗ್​​ನ ಕೆಲವು ಚಿತ್ರಗಳು ಮತ್ತು ವಿಡಿಯೋಗಳನ್ನು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ರಕುಲ್ ಹೇಳಿರುವಂತೆ ಗಂಟೆ ಗಟ್ಟಲೆ ಕೂತು ಅವರು ಮೇಕಪ್ ಮಾಡಿಕೊಳ್ಳಬೇಕಿತ್ತಂತೆ ಅಲ್ಲದೆ, ಬಲು ಭಾರವಾದ ಆಭರಣಗಳನ್ನು ಧರಿಸಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕಿತ್ತಂತೆ. ಇನ್ನೂ ಕೆಲವು ಸಮಸ್ಯೆಗಳನ್ನು ಎದುರಿಸಿ ಅವರು ‘ರಾಮಾಯಣ’ಕ್ಕಾಗಿ ಶೂಟಿಂಗ್ ಮಾಡಿದ್ದು, ಈಗ ಸಿನಿಮಾ ಯಶಸ್ಸು ಗಳಿಸುತ್ತಿರುವ ಬಗ್ಗೆ ಖುಷಿ ಪಟ್ಟಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More