ಮತ್ತೊಂದು ಮೆಟ್ಟಿಲೇರಿದ ಶ್ರೀಲೀಲಾ, ಮತ್ತೊಬ್ಬ ಸ್ಟಾರ್ ನಟನಿಗೆ ನಾಯಕಿ

Sreeleela next movie: ಈಗಾಗಲೇ ಶ್ರೀಲೀಲಾ ಕೈಯಲ್ಲಿ ಮೂರು ಹಿಂದಿ ಸಿನಿಮಾಗಳಿವೆಯಂತೆ. ಇದೀಗ ತಮಿಳಿನಲ್ಲೂ ಸ್ಟಾರ್ ನಟಿ ಆಗುವತ್ತ ಹೆಜ್ಜೆ ಹಾಕಿದ್ದಾರೆ ಶ್ರೀಲೀಲಾ. ಇತ್ತೀಚೆಗಷ್ಟೆ ಶ್ರೀಲೀಲಾ ನಟನೆಯ ಮೊದಲ ತಮಿಳು ಸಿನಿಮಾ ಬಿಡುಗಡೆ ಆಗಿತ್ತು. ಇದೀಗ ಶ್ರೀಲೀಲಾಗೆ ತಮಿಳಿನ ಜನಪ್ರಿಯ ನಾಯಕನೊಟ್ಟಿಗೆ ನಾಯಕಿಯಾಗಿ ನಟಿಸುವ ಅವಕಾಶ ಲಭಿಸಿದೆ.

ಮತ್ತೊಂದು ಮೆಟ್ಟಿಲೇರಿದ ಶ್ರೀಲೀಲಾ, ಮತ್ತೊಬ್ಬ ಸ್ಟಾರ್ ನಟನಿಗೆ ನಾಯಕಿ
Sreeleela

Updated on: Feb 01, 2026 | 7:17 PM

ಶ್ರೀಲೀಲಾ (Sreeleela) ಕನ್ನಡದ ನಟಿ ಆದರೆ ಇದೀಗ ಪರ ಭಾಷೆಯಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ. ಕನ್ನಡದ ಬಳಿಕ ತೆಲುಗು ಚಿತ್ರರಂಗಕ್ಕೆ ಹೆಜ್ಜೆ ಇಟ್ಟ ಶ್ರೀಲೀಲಾ ಅಲ್ಲಿ ಬಹು ಕಡಿಮೆ ಅವಧಿಯಲ್ಲೇ ಸ್ಟಾರ್ ನಟಿಯಾಗಿ ಗುರುತಿಸಿಕೊಂಡರು. ಬಳಿಕ ಬಾಲಿವುಡ್​​ಗೆ ಪದಾರ್ಪಣೆ ಮಾಡಿದ ಶ್ರೀಲೀಲಾಗೆ ಅಲ್ಲಿ ಅವರ ಮೊದಲ ಸಿನಿಮಾ ಬಿಡುಗಡೆ ಆಗುವ ಮುಂಚೆಯೇ ಬಹಳ ಡಿಮ್ಯಾಂಡ್ ಏರ್ಪಟ್ಟಿದೆ. ಈಗಾಗಲೇ ಶ್ರೀಲೀಲಾ ಕೈಯಲ್ಲಿ ಮೂರು ಹಿಂದಿ ಸಿನಿಮಾಗಳಿವೆಯಂತೆ. ಇದೀಗ ತಮಿಳಿನಲ್ಲೂ ಸ್ಟಾರ್ ನಟಿ ಆಗುವತ್ತ ಹೆಜ್ಜೆ ಹಾಕಿದ್ದಾರೆ ಶ್ರೀಲೀಲಾ. ಇತ್ತೀಚೆಗಷ್ಟೆ ಶ್ರೀಲೀಲಾ ನಟನೆಯ ಮೊದಲ ತಮಿಳು ಸಿನಿಮಾ ಬಿಡುಗಡೆ ಆಗಿತ್ತು. ಇದೀಗ ಶ್ರೀಲೀಲಾಗೆ ತಮಿಳಿನ ಜನಪ್ರಿಯ ನಾಯಕನೊಟ್ಟಿಗೆ ನಾಯಕಿಯಾಗಿ ನಟಿಸುವ ಅವಕಾಶ ಲಭಿಸಿದೆ.

ಶ್ರೀಲೀಲಾ, ‘ಪರಾಶಕ್ತಿ’ ಹೆಸರಿನ ತಮಿಳು ಸಿನಿಮಾನಲ್ಲಿ ನಟಿಸಿದ್ದರು. ಅದು ಅವರ ಮೊದಲ ತಮಿಳು ಸಿನಿಮಾ ಆಗಿತ್ತು. ಸಿನಿಮಾ ಬಿಡುಗಡೆ ಆಗಿ ಕೆಲವೇ ದಿನಗಳಲ್ಲಿ ಶ್ರೀಲೀಲಾಗೆ ಮತ್ತೊಂದು ತಮಿಳು ಸಿನಿಮಾನಲ್ಲಿ ನಟಿಸುವ ಅವಕಾಶ ಲಭಿಸಿದೆ. ಅದೂ ತಮಿಳು ಮಾತ್ರವಲ್ಲದೆ ಬಾಲಿವುಡ್​​ನಲ್ಲೂ ಸಖತ್ ಹೆಸರು ಮಾಡಿರುವ ಸ್ಟಾರ್ ನಟನ ಎದುರು ನಾಯಕಿಯಾಗಿ ನಟಿಸುವ ಅವಕಾಶ ದೊರೆತಿದೆ.

ತಮಿಳಿನ ಸ್ಟಾರ್ ನಟರುಗಳಲ್ಲಿ ಒಬ್ಬರಾಗಿರುವ ಧನುಶ್ ಅವರ ಹೊಸ ಸಿನಿಮಾನಲ್ಲಿ ಶ್ರೀಲೀಲಾ ನಾಯಕಿ. ಇದು ಧನುಶ್ ಅವರ 55ನೇ ಸಿನಿಮಾ ಆಗಿದ್ದು, ಇತ್ತೀಚೆಗಷ್ಟೆ ಸಿನಿಮಾದ ಘೋಷಣೆ ಆಗಿತ್ತು. ಸಿನಿಮಾ ಘೋಷಣೆಯಾದಾಗ ಧನುಶ್ ಎದುರು ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಶ್ರೀಲೀಲಾ, ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

ಇದನ್ನೂ ಓದಿ:ಮೂರು ಮಕ್ಕಳ ದತ್ತು ಪಡೆದಿದ್ದು ಏಕೆ? ಭಾವುಕ ವಿಷಯ ಹಂಚಿಕೊಂಡ ಶ್ರೀಲೀಲಾ

ಧನುಶ್ ಹಾಗೂ ಶ್ರೀಲೀಲಾ ನಟಿಸಲಿರುವ ಸಿನಿಮಾವನ್ನು ನಿರ್ದೇಶಕ ರಾಜ್​​ಕುಮಾರ್ ಪೆರಿಯಸ್ವಾಮಿ ನಿರ್ದೇಶನ ಮಾಡಲಿದ್ದಾರೆ. 2024ರಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆದ ‘ಅಮರನ್’ ಸಿನಿಮಾವನ್ನು ನಿರ್ದೇಶಿಸಿದ್ದು ಇವರೇ. ಇದೀಗ ಧನುಶ್ ಅವರಿಗಾಗಿ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

ಇನ್ನು ಶ್ರೀಲೀಲಾ ಪ್ರಸ್ತುತ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಗಬ್ಬರ್ ಸಿಂಗ್’ ರವಿತೇಜ ನಟಿಸಲಿರುವ ಹೊಸ ಸಿನಿಮಾ, ಹಿಂದಿಯಲ್ಲಿ ‘ಆಶಿಖಿ 3’, ಸೈಫ್ ಅಲಿ ಖಾನ್ ಪುತ್ರನ ಜೊತೆಗೊಂದು ಸಿನಿಮಾ. ರಣ್ವೀರ್ ಸಿಂಗ್ ನಟಿಸಲಿರುವ ಹೊಸ ಸಿನಿಮಾಗಳಲ್ಲಿಯೂ ಶ್ರೀಲೀಲಾ ನಟಿಸುತ್ತಿದ್ದಾರೆ. ಇದೀಗ ಧನುಶ್ ಸಿನಿಮಾ ಅವಕಾಶವೂ ಅವರಿಗೆ ಲಭಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us