‘ಪುಷ್ಪ 2′ ಚಿತ್ರ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮೊದಲಾದವರು ನಟಿಸಿದ್ದಾರೆ. ಈ ಚಿತ್ರದಿಂದ ಮತ್ತೋರ್ವ ನಟಿ ಫೇಮಸ್ ಆಗಿದ್ದಾರೆ. ಅವರು ಬೇರಾರೂ ಅಲ್ಲ ಕನ್ನಡದ ನಟಿ ಶ್ರೀಲೀಲಾ. ಶ್ರೀಲಾಲ ಸದ್ಯ ‘ಪುಷ್ಪ 2: ದಿ ರೂಲ್’ ಚಿತ್ರದ ‘ಕಿಸಿಕ್’ ಹಾಡಿಗೆ ಸುದ್ದಿಯಲ್ಲಿದ್ದಾರೆ. ಕಳೆದ 2 ವರ್ಷಗಳಲ್ಲಿ, ಅವರು ಮೂರು ಮೆಗಾಬಜೆಟ್ ಪ್ಯಾನ್ ಇಂಡಿಯಾ ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದರೆ, ಈ ಮೂರೂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾದವು. ಆದರೆ ಅವರ ಕೆಲಸ ಮತ್ತು ನಟನೆಗಾಗಿ ಅವರು ಇನ್ನೂ ಮೆಚ್ಚುಗೆ ಪಡೆದಿದ್ದಾರೆ. ಅವರು ಈ ಮೊದಲು ಮಕ್ಕಳನ್ನು ದತ್ತು ಪಡೆದಿದ್ದರು.
‘ಕಿಸ್’, ‘ಭರಾಟೆ’ ಮುಂತಾದ ಸಿನಿಮಾಗಳ ಮೂಲಕ ಅವರು ಎಲ್ಲರ ಗಮನ ಸೆಳೆದಿದ್ದಾರೆ. ತೆಲುಗಿನ ‘ಪೆಳ್ಳಿ ಸಂದಡಿ’ ಚಿತ್ರದಲ್ಲಿ ನಟಿಸಿದ ಬಳಿಕ ಅವರ ಖ್ಯಾತಿ ದುಪ್ಪಟ್ಟಾಗಿದೆ. ಅಲ್ಲಿನ ಸ್ಟಾರ್ ನಟರ ಚಿತ್ರಗಳಿಗೆ ಅವರು ನಾಯಕಿಯಾಗಿ ಆಯ್ಕೆ ಆಗುತ್ತಿದ್ದಾರೆ. ಅವರು ‘ಪುಷ್ಪ 2’ ಚಿತ್ರದ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಇದನ್ನೂ ಓದಿ:‘ಪುಷ್ಪ 2’ ಐಟಂ ಹಾಡಿಗೆ ಹೆಜ್ಜೆ ಹಾಕಲು ಶ್ರೀಲೀಲಾ ಪಡೆದ ಸಂಭಾವನೆ ಎಷ್ಟು?
ಶ್ರೀಲೀಲಾ ಅವರಿಗೆ ಪ್ರಸ್ತುತ 23 ವರ್ಷ. ಆದರೆ ಕೇವಲ 21ನೇ ವಯಸ್ಸಿನಲ್ಲಿ ಅವರು ಎರಡು ಮಕ್ಕಳ ತಾಯಿಯಾದರು. ಅವರು ನಟಿಸಿದ ‘ಬೈ ಟೂ ಲವ್’ ಚಿತ್ರದ ಪ್ರಚಾರದ ಸಮಯ. ಆಗ ಅವರು ಮಾತೃಶ್ರೀ ಮನೋವಿಕಾಸ ಕೇಂದ್ರಕ್ಕೆ ಭೇಟಿ ನೀಡಿದ್ದರು. ಇದು ಬುದ್ಧಿಮಾಂದ್ಯ ಮಕ್ಕಳ ವಿಶೇಷ ಶಾಲೆ. ಇಲ್ಲಿರುವ ಗುರು ಮತ್ತು ಶೋಭಿತಾ ಎಂಬ ಇಬ್ಬರು ಮಕ್ಕಳನ್ನು ಶ್ರೀಲೀಲಾ ಅವರು ದತ್ತು ಪಡೆದುಕೊಂಡಿದ್ದರು. ಆ ಮೂಲಕ ಆ ಮಕ್ಕಳಿಗೆ ತಾಯಿಯ ಸ್ಥಾನವನ್ನು ತುಂಬಿದ್ದಾರೆ. ಮಕ್ಕಳ ಭವಿಷ್ಯದ ಸಂಪೂರ್ಣ ಜವಾಬ್ದಾರಿಯನ್ನು ಅವರು ಹೊತ್ತುಕೊಂಡಿದ್ದರು. ಇದನ್ನು ಈಗಲೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಶ್ರೀಲೀಲಾ ಅವರು 14 ಜೂನ್ 2001 ರಂದು ಅಮೇರಿಕಾದ ಮಿಚಿಗನ್ನಲ್ಲಿ ಜನಿಸಿದರು. ತಾಯಿ ಸ್ವರ್ಣಲತಾ ಬೆಂಗಳೂರಿನಲ್ಲಿ ಸ್ತ್ರೀರೋಗ ತಜ್ಞೆ. ಶ್ರೀಲಿ ತಮ್ಮ ಬಾಲ್ಯದಲ್ಲಿ ಭರತನಾಟ್ಯವನ್ನು ಕಲಿತರು. ತಾಯಿಯಂತೆ ವೈದ್ಯನಾಗಬೇಕೆಂದು ಬಯಸಿದ್ದರು. ಅವರು ಎಂಬಿಬಿಎಸ್ ಪೂರ್ಣಗೊಳಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ