ಶ್ರೀದೇವಿ ನಿಧನದ ಬಗ್ಗೆ ಇರೋ ಅನುಮಾನ ದೂರವಾಗುವಂಥದ್ದಲ್ಲ; ಕಾರಣ?

ಶ್ರೀದೇವಿ ಹಾಗೂ ಬೂನಿ ಕಪೂರ್ ಅವರದ್ದು ಪ್ರೇಮ ವಿವಾಹ. ಅವರ ಲವ್ ಮ್ಯಾರೇಜ್ ವಿಚಾರ ಸಾಕಷ್ಟು ವಿವಾದಗಳನ್ನು ಹುಟ್ಟುಹಾಕಿದೆ. ಶ್ರೀದೇವಿ ಮದುವೆಗೆ ಮೊದಲೇ ಪ್ರೆಗ್ನೆಂಟ್ ಆಗಿದ್ದರು ಎನ್ನುವ ಸುದ್ದಿ ಇದೆ. ಅವರ ಸಾವು ಕೂಡ ಸಾಕಷ್ಟು ಚರ್ಚೆ ಹುಟ್ಟುಹಾಕಿತು.

ಶ್ರೀದೇವಿ ನಿಧನದ ಬಗ್ಗೆ ಇರೋ ಅನುಮಾನ ದೂರವಾಗುವಂಥದ್ದಲ್ಲ; ಕಾರಣ?
ಶ್ರೀದೇವಿ
Edited By:

Updated on: Aug 13, 2024 | 7:35 AM

ಶ್ರೀದೇವಿ ಅವರಿಗೆ ಇಂದು (ಆಗಸ್ಟ್ 13) ಜನ್ಮದಿನ. ಅವರು ಇಲ್ಲ ಎನ್ನುವ ನೋವು ಫ್ಯಾನ್ಸ್​ಗೆ ಈಗಲೂ ಕಾಡುತ್ತದೆ. ಶ್ರೀದೇವಿ ಅವರನ್ನು ಮಗಳು ಜಾನ್ವಿ ಕಪೂರ್ ಅವರು ಸೋಶಿಯಲ್ ಮೀಡಿಯಾದಲ್ಲಿ ನೆನಪಿಸಿಕೊಂಡಿದ್ದಾರೆ. ಶ್ರೀದೇವಿ ಸಾವು ಈಗಲೂ ಅನೇಕರಿಗೆ ಶಾಕಿಂಗ್ ಎನಿಸಿದೆ. 2018ರ ಫೆಬ್ರವರಿ 24ರಂದು ಇವರು ನಿಧನ ಹೊಂದಿದರು. ಶ್ರೀದೇವಿ ಸಾವಿನ ಹಿಂದೆ ಇರೋ ನಿಜವಾದ ಕಾರಣ ಏನು ಎಂಬುದನ್ನು ಬೋನಿ ಕಪೂರ್ ಅವರು ಈ ಮೊದಲು ಹೇಳಿದ್ದರು.

ಶ್ರೀದೇವಿ ಸಖತ್ ಸ್ಲಿಮ್ ಆಗಿದ್ದರು. ನಿಧನ ಹೊಂದುವಾಗ ಅವರಿಗೆ 54 ವರ್ಷ. ಶ್ರೀದೇವಿ ಅವರು ದುಬೈ ಹೋಟೆಲ್​ನ ಬಾತ್​ಟಬ್​ನಲ್ಲಿ ಮುಳುಗಿ ಮೃತಪಟ್ಟರು. ಶ್ರೀದೇವಿ ನಿಧನದ ಬಗ್ಗೆ ಒಬ್ಬೊಬ್ಬರು ಒಂದೊಂದು ಥಿಯರಿ ಹೇಳುತ್ತಾರೆ. ಶ್ರೀದೇವಿ ಸಾವಿಗೆ ಅವರು ಪಾಲಿಸುತ್ತಿದ್ದ ಕಠಿಣ ಡಯಟ್ ಕಾರಣ ಎನ್ನುವ ಥಿಯರಿ ಇದೆ.

‘ಶ್ರೀದೇವಿ ಅವರದ್ದು ಸಾಮಾನ್ಯ ಸಾವಲ್ಲ, ಆಕಸ್ಮಿಕ ಸಾವು. ನಾನು ಇದನ್ನು ಯಾರ ಜೊತೆಗೂ ಮಾತನಾಡಬಾರದು ಎಂದುಕೊಂಡಿದ್ದೆ. ಏಕೆಂದರೆ ನಾನು ವಿಚಾರಣೆ ಮಾಡುವಾಗ ಈ ಬಗ್ಗೆ 24-48 ಗಂಟೆ ಈ ಬಗ್ಗೆಯೇ ಮಾತನಾಡಿದ್ದೆ. ದುಬೈ ಪೊಲೀಸರು ನನಗೆ ಕ್ಲೀನ್ ಚಿಟ್ ನೀಡಿದ್ದಾರೆ’ ಎಂದಿದ್ದರು ಶ್ರಿದೇವಿ ಪತಿ ಬೋನಿ ಕಪೂರ್. ಕ್ಲೀನ್ ಚಿಟ್ ಸಿಕ್ಕರೂ ಶ್ರೀದೇವಿ ಫ್ಯಾನ್ಸ್ ಬೋನಿ ಮೆಲೆ ಆರೋಪ ಹೊರಿಸುತ್ತಲೇ ಬರುತ್ತಿದ್ದಾರೆ.

ಶ್ರೀದೇವಿ ಗ್ಲಾಮರ್​ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು. ಅದುವೇ ಅವರಿಗೆ ಮುಳುವಾಗಿದೆ. ಊಟದಲ್ಲಿ ಶ್ರೀದೇವಿ ಉಪ್ಪನ್ನು ಬಳಸುತ್ತಿರಲಿಲ್ಲವಂತೆ. ಶ್ರೀದೇವಿ ಅವರಿಗೆ ವೈದ್ಯರು ಕಡಿಮೆ ಉಪ್ಪಿರೋ ಆಹಾರ ಸೇವಿಸಬೇಡಿ ಎಂದು ಎಚ್ಚರಿಕೆ ನೀಡಿದ್ದರು. ಆದರೆ,  ಶ್ರೀದೇವಿ ಇದನ್ನು ನಿರ್ಲಕ್ಷ್ಯ ಮಾಡಿದ್ದರು.

‘ಹೊಸ ಸಿನಿಮಾ ಆರಂಭಿಸುವಾಗ ಶ್ರೀದೇವಿ ಡಯಟ್ ಮಾಡುತ್ತಿದ್ದರು. ಅವರು ಸುಂದರವಾಗಿ ಕಾಣಬೇಕು ಎಂದು ಆಹಾರದಲ್ಲಿ ಉಪ್ಪನ್ನು ಸೇವಿಸುತ್ತಾ ಇರಲಿಲ್ಲ’ ಎಂದಿದ್ದರು ಬೋನಿ ಕಪೂರ್. ಉಪ್ಪಿನ ಸೇವನೆ ಮಾಡದ ಕಾರಣ ಅವರಿಗೆ ಲೋ ಬಿಪಿ ಉಂಟಾಯಿತು. ಇದು ಶ್ರೀದೇವಿ ಸಾವಿಗೆ ಕಾರಣ ಆಗಿತ್ತು. ಆದರೆ, ಇದನ್ನು ಅನೇಕರು ಈಗಲೂ ನಂಬುತ್ತಿಲ್ಲ. ಇದರ ಹಿಂದೆ ಬೋನಿ ಕಪೂರ್ ಕೈವಾಡ ಇದೆ ಎನ್ನುತ್ತಾರೆ.

ಇದನ್ನೂ ಓದಿ: ತಾಯಿ ಶ್ರೀದೇವಿಗೆ ಮಗಳು ಜಾನ್ಹವಿ ನಟಿಯಾಗುವುದು ಇಷ್ಟವಿರಲಿಲ್ಲ, ಆಸೆ ಬೇರೆಯೇ ಇತ್ತು

ಮನೆಗೆ ಹೋಗಲಿ, ಹೋಟೆಲ್ ಹೋಗಲಿ ಉಪ್ಪು ಇಲ್ಲದೆ ಇರುವ ಆಹಾರ ಸೇವನೆ ಮಾಡಲು ಶ್ರೀದೇವಿ ಪ್ರಾಮುಖ್ಯತೆ ಕೊಡುತ್ತಿದ್ದರು. ಆಗ ಬೋನಿ ಕಪೂರ್ ಅವರು ಉಪ್ಪು ಸಹಿತ ಆಹಾರ ಸೇವನೆ ಮಾಡುವಂತೆ ಕೋರುತ್ತಿದ್ದರು. ಆದರೆ, ಇದನ್ನು ಅವರು ನಿರ್ಲಕ್ಷ್ಯ ಮಾಡುತ್ತಲೇ ಬರುತ್ತಿದ್ದರು. ಶ್ರೀದೇವಿ ಹಾಗೂ ಬೋನಿ ಕಪೂರ್ ಅವರು 1996ರಲ್ಲಿ ಮದುವೆ ಆದರು. 1997ರಲ್ಲಿ ಜಾನ್ವಿ ಹಾಗೂ 2000ನೇ ಇಸ್ವಿಯಲ್ಲಿ ಖುಷಿ ಕಪೂರ್ ಜನಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.