- Kannada News Photo gallery Radhika Pandit Shares Photo of yash A good Old dating time photo Entertainment News In Kannada
Radhika Pandit: ಹೇಗಿತ್ತು ನೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಡೇಟಿಂಗ್ ದಿನಗಳು
ರಾಧಿಕಾ ಪಂಡಿತ್ ಹಾಗೂ ಯಶ್ ನಿಶ್ಚಿತಾರ್ಥ ನಡೆದು ಆಗಸ್ಟ್ 12ಕ್ಕೆ ಬರೋಬ್ಬರಿ 8 ವರ್ಷಗಳು. 2016ರಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತು. ಈಗ ರಾಧಿಕಾ ಪಂಡಿತ್ ಅವರು ಯಶ್ ಜೊತೆಗಿನ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
Updated on: Aug 13, 2024 | 8:28 AM

ರಾಧಿಕಾ ಪಂಡಿತ್ ಹಾಗೂ ಯಶ್ ಅವರು ಪ್ರೀತಿಸಿ ಮದುವೆ ಆದವರು. ಕಿರುತೆರೆಯಿಂದ ಬಣ್ಣದ ಬದುಕು ಆರಂಭಿಸಿದ ಇವರು ನಂತರ ಸ್ಟಾರ್ ಹೀರೋ ಆದರು. ಈಗ ರಾಧಿಕಾ ಪಂಡಿತ್ ಅವರು ಯಶ್ ಜೊತೆಗಿನ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ರಾಧಿಕಾ ಪಂಡಿತ್ ಹಾಗೂ ಯಶ್ ನಿಶ್ಚಿತಾರ್ಥ ನಡೆದು ಆಗಸ್ಟ್ 12ಕ್ಕೆ ಬರೋಬ್ಬರಿ 8 ವರ್ಷಗಳು. 2016ರಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತು. ಈ ಬಗ್ಗೆ ರಾಧಿಕಾ ಪಂಡಿತ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಡೇಟ್ ಮಾಡುತ್ತಿದ್ದ ದಿನಗಳ ಫೋಟೋಗಳನ್ನು ರಾಧಿಕಾ ಪಂಡಿತ್ ಹಾಗೂ ಯಶ್ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಬಗೆ ಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ. ಇವರು ಹಾಯಾಗಿ ಬಾಳಲಿ ಎಂದು ಹಾರೈಸಿದ್ದಾರೆ.

ರಾಧಿಕಾ ಪಂಡಿತ್ ಅವರು ಮಕ್ಕಳಾದ ಆಯ್ರಾ ಹಾಗೂ ಯಥರ್ವ್ ಆರೈಕೆಯಲ್ಲಿ ಬ್ಯುಸಿ ಇದ್ದಾರೆ. ಈ ಕಾರಣಕ್ಕೆ ಅವರು ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ.

ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅವರ ಸಿನಿಮಾ ಬಗ್ಗೆ ಫ್ಯಾನ್ಸ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರ ಮುಂದಿನ ವರ್ಷ ಏಪ್ರಿಲ್ನಲ್ಲಿ ರಿಲೀಸ್ ಆಗಲಿದೆ.




