ರಾಜಮೌಳಿ ಮುಂದಿನ ಸಿನಿಮಾ ಬಜೆಟ್ ಎಷ್ಟು? ಚಿತ್ರೀಕರಣ ಆರಂಭಕ್ಕೂ ಮುನ್ನ ಖರ್ಚಾಗಿರುವುದೆಷ್ಟು?
SS Rajamouli: ನಿರ್ದೇಶಕ ರಾಜಮೌಳಿಯ ಮುಂದಿನ ಸಿನಿಮಾದಲ್ಲಿ ಮಹೇಶ್ ಬಾಬು ನಟಿಸಲಿದ್ದಾರೆ. ಈ ಸಿನಿಮಾದ ಬಜೆಟ್ ಎಷ್ಟು ಗೊತ್ತೆ? ಅಂದಹಾಗೆ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗುವ ಮುನ್ನವೇ ನೂರಾರು ಕೋಟಿ ಖರ್ಚು ಮಾಡಲಾಗಿದೆ.

ಎಸ್ಎಸ್ ರಾಜಮೌಳಿ (SS Rajamouli) ಸಿನಿಮಾಗಳು ಸದಾ ಭಾರಿ ಬಜೆಟ್ನದ್ದೇ ಆಗಿರುತ್ತವೆ. ಸಿನಿಮಾದಿಂದ ಸಿನಿಮಾಕ್ಕೆ ಬಜೆಟ್ ಅನ್ನು ಏರಿಸಿಕೊಂಡೇ ಬರುತ್ತಿದ್ದಾರೆ ರಾಜಮೌಳಿ. ಈ ಹಿಂದಿನ ‘ಆರ್ಆರ್ಆರ್’ (RRR) ಸಿನಿಮಾವನ್ನು ನಾಲ್ಕು ನೂರು ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾಗಿತ್ತು. ಆ ಸಿನಿಮಾ ಆಸ್ಕರ್ ಅಂಗಳಕ್ಕೆ ಹೋದಾಗಲೂ ಅದರ ಪ್ರಚಾರಕ್ಕೆಂದು ಮತ್ತೆ ಸುಮಾರು 100 ಕೋಟಿ ಖರ್ಚು ಮಾಡಲಾಯ್ತು. ಇದೀಗ ರಾಜಮೌಳಿ ತಮ್ಮ ಮುಂದಿನ ಸಿನಿಮಾದ ತಯಾರಿಯಲ್ಲಿದ್ದಾರೆ. ಈ ಸಿನಿಮಾದ ಬಜೆಟ್ ರಾಜಮೌಳಿಯ ವೃತ್ತಿ ಜೀವನದ ಅತಿದೊಡ್ಡ ಬಜೆಟ್ನ ಸಿನಿಮಾ ಮಾತ್ರವೇ ಅಲ್ಲ, ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ನ ಸಿನಿಮಾ ಆಗಿರಲಿದೆ. ವಿಶೇಷವೆಂದರೆ ಸಿನಿಮಾದ ಮುಹೂರ್ತ ನಡೆಯುವುದಕ್ಕಿಂತಲೂ ಮುಂಚೆಯೇ ನೂರಾರು ಕೋಟಿ ಖರ್ಚು ಮಾಡಿದ್ದಾಗಿದೆ.
ರಾಜಮೌಳಿಯವರ ಮುಂದಿನ ಸಿನಿಮಾದಲ್ಲಿ ಮಹೇಶ್ ಬಾಬು ನಾಯಕರಾಗಿ ನಟಿಸಲಿದ್ದು, ಹಲವು ದೊಡ್ಡ ನಟರು, ತಂತ್ರಜ್ಞರು ಸಿನಿಮಾದ ಭಾಗವಾಗಲಿದ್ದಾರೆ. ಮಾತ್ರವಲ್ಲದೆ ವಿಶ್ವದ ಅತ್ಯುತ್ತಮ ತಂತ್ರಜ್ಞಾನವನ್ನು ಈ ಸಿನಿಮಾಕ್ಕೆ ಬಳಸಿಕೊಳ್ಳಲು ರಾಜಮೌಳಿ ಮುಂದಾಗಿದ್ದಾರೆ. ವಿಶ್ವದ ಹಲವು ದೇಶಗಳಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಹಾಗಾಗಿ ಈ ಸಿನಿಮಾದ ಬಜೆಟ್ ಸಹಜವಾಗಿ ದೊಡ್ಡದಾಗಿಯೇ ಇರಲಿದೆ.
ರಾಜಮೌಳಿಯ ಮುಂದಿನ ಸಿನಿಮಾದ ಬಜೆಟ್ ಸುಮಾರು 1000 ಕೋಟಿ ರೂಪಾಯಿಗಳು ಎನ್ನಲಾಗುತ್ತಿದೆ. ಈ ಸಿನಿಮಾದ ಪ್ರಚಾರಕ್ಕಾಗಿಯೇ ಸುಮಾರು 300 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತದೆಯಂತೆ. ಭಾರತ ಮಾತ್ರವೇ ಅಲ್ಲದೆ ಅಮೆರಿಕ, ಯೂರೋಪ್ ದೇಶಗಳು, ಅರಬ್ ದೇಶಗಳು, ಆಸ್ಟ್ರೇಲಿಯಾ ಪ್ರಪಂಚದ ಇನ್ನೂ ಹಲವು ಕಡೆಗಳಲ್ಲಿ ಈ ಸಿನಿಮಾದ ಪ್ರಚಾರ ನಡೆಯಲಿದೆ. ಭಾರತದ ಈ ಮುಂಚಿನ ಯಾವುದೇ ಸಿನಿಮಾಗಳು ಮಾಡದ ಮಟ್ಟಿಗೆ ಈ ಸಿನಿಮಾದ ಪ್ರಚಾರ ನಡೆಯಲಿದೆ.
ಇದನ್ನೂ ಓದಿ:ಮಹೇಶ್ ಬಾಬು-ರಾಜಮೌಳಿ ಸಿನಿಮಾ ಮುಹೂರ್ತಕ್ಕೆ ದಿನಾಂಕ ನಿಗದಿ
ಇನ್ನು ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿದೆ. ರಾಜಮೌಳಿ ಹಾಲಿವುಡ್ನ ಕೆಲವು ಅತ್ಯುತ್ತಮ ತಂತ್ರಜ್ಞಾನ ಸಂಸ್ಥೆಗಳೊಟ್ಟಿಗೆ ಹಲವು ಸಭೆಗಳನ್ನು ನಡೆಸಿದ್ದು ಕೆಲವು ಸಂಸ್ಥೆಗಳೊಟ್ಟಿಗೆ ಒಪ್ಪಂದ ಸಹ ಮಾಡಿಕೊಂಡಿದ್ದಾರೆ. ನಟ-ನಟಿಯರ ಲುಕ್ ಟೆಸ್ಟ್, ತಂತ್ರಜ್ಞರ ಪರೀಕ್ಷೆಗಳು ನಡೆಯುತ್ತಿವೆ. ಕೆಲವು ಮೂಲಗಳ ಸಿನಿಮಾದ ಚಿತ್ರೀಕರಣ ಮಾಡುವ ಮುಂಚೆಯೇ ಈಗಾಗಲೇ ಸುಮಾರು 150 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆಯಂತೆ. ಸಿನಿಮಾದ ಮುಹೂರ್ತ ಯುಗಾದಿ ಹಬ್ಬದಂದು ನಡೆಯಲಿದ್ದು, ಅಂದಿನಿಂದ ಸಿನಿಮಾದ ಚಿತ್ರೀಕರಣ ಪ್ರಾರಂಭ ಆಗಲಿದೆ.
ರಾಜಮೌಳಿಯ ಮುಂದಿನ ಸಿನಿಮಾ ‘ಇಂಡಿಯಾನಾ ಜೋನ್ಸ್’ ರೀತಿಯ ಸಿನಿಮಾ ಆಗಿದ್ದು, ಸಿನಿಮಾವು ಸಾಹಸಮಯ ಪ್ರಯಾಣದ ಕತೆಯನ್ನು ಒಳಗೊಂಡಿರಲಿದೆ. ಸಿನಿಮಾಕ್ಕೆ ಕತೆಯನ್ನು ರಾಜಮೌಳಿಯ ತಂದೆ ಬರೆದಿದ್ದಾರೆ. ನಾಯಕಿಯಾಗಿ ಇಂಡೊನೇಷ್ಯಾದ ನಟಿಸಲಿದ್ದಾರೆ. ಸಿನಿಮಾದ ಮುಹೂರ್ತಕ್ಕೆ ಹಾಲಿವುಡ್ನ ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮರನ್ ಬರಲಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:13 am, Tue, 5 March 24