RRR ತಂಡ 60 ಲಕ್ಷ ರೂ. ಕೊಟ್ಟು ಆಸ್ಕರ್​ ಸಮಾರಂಭದ ಟಿಕೆಟ್​ ಪಡೆಯಿತಾ? ಬಯಲಾಯ್ತು ಬೇರೆ ಸತ್ಯ

|

Updated on: Mar 28, 2023 | 11:05 AM

ಎಂಎಂ ಕೀರವಾಣಿ ಮತ್ತು ಚಂದ್ರಬೋಸ್​ ಅವರಿಗೆ ಮಾತ್ರ ಉಚಿತ ಪಾಸ್​ ನೀಡಲಾಯಿತು. ಇನ್ನುಳಿದವರು ಸ್ವಂತ ಹಣ ಖರ್ಚು ಮಾಡಿ ಪಾಸ್​ ಪಡೆದಿದ್ದು ನಿಜ ಎಂದು ಕಾರ್ತಿಕೇಯ ಹೇಳಿದ್ದಾರೆ. ಆದರೆ..

RRR ತಂಡ 60 ಲಕ್ಷ ರೂ. ಕೊಟ್ಟು ಆಸ್ಕರ್​ ಸಮಾರಂಭದ ಟಿಕೆಟ್​ ಪಡೆಯಿತಾ? ಬಯಲಾಯ್ತು ಬೇರೆ ಸತ್ಯ
ಜೂನಿಯರ್​ ಎನ್​ಟಿಆರ್​, ರಾಮ್​ ಚರಣ್​
Follow us on

ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ (RRR Movie) ಸಿನಿಮಾದಲ್ಲಿನ ‘ನಾಟು ನಾಟು..’ ಹಾಡು ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿದೆ.  ಭಾರತಕ್ಕೆ ಆಸ್ಕರ್​ ತಂದುಕೊಟ್ಟ ಈ ಸಾಂ​ಗ್​ ಎಲ್ಲರಿಗೂ ಅಚ್ಚುಮೆಚ್ಚು. ಆಸ್ಕರ್​ ಸಮಾರಂಭ ಮುಗಿದು ಹಲವು ದಿನ ಕಳೆದಿದೆ. ಆದರೆ ಅದರ ಸುತ್ತ ಹಬ್ಬಿರುವ ಗಾಸಿಪ್​ಗಳು ಇನ್ನೂ ನಿಂತಿಲ್ಲ. ಆಸ್ಕರ್​ (Oscar Awards) ಪಡೆಯಲು ‘ಆರ್​ಆರ್​ಆರ್​’ ತಂಡದವರು 80 ಕೋಟಿ ರೂಪಾಯಿ ಖರ್ಚು ಮಾಡಿದ್ದರು ಎನ್ನಲಾಗಿತ್ತು. ಆದರೆ ಆ ಮಾಹಿತಿಯನ್ನು ಚಿತ್ರತಂಡ ತಳ್ಳಿಹಾಕಿದೆ. ಅಷ್ಟೇ ಅಲ್ಲ, ಆಸ್ಕರ್​ ಕಾರ್ಯಕ್ರಮದ ಟಿಕೆಟ್​ ಪಡೆಯಲು ರಾಮ್​ ಚರಣ್​ ಅವರು ಬರೋಬ್ಬರಿ 60 ಲಕ್ಷ ರೂಪಾಯಿ ವ್ಯಯಿಸಿದ್ದರು ಎಂಬ ಗಾಸಿಪ್ ಕೂಡ ಕೇಳಿಬಂದಿತ್ತು. ಆ ಬಗ್ಗೆ ರಾಜಮೌಳಿ ಅವರ ಪುತ್ರ ಎಸ್​ಎಸ್​ ಕಾರ್ತಿಕೇಯ (SS Karthikeya) ಮೌನ ಮುರಿದಿದ್ದಾರೆ.

ಆಸ್ಕರ್​ನ ಹಲವು ವಿಭಾಗಗಳಲ್ಲಿ ನಾಮಿನೇಟ್​ ಆಗಬೇಕು ಎಂಬುದು ‘ಆರ್​ಆರ್​ಆರ್​’ ತಂಡದ ಉದ್ದೇಶ ಆಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಅಂತಿಮವಾಗಿ ‘ನಾಟು ನಾಟು..’ ಹಾಡು ಮಾತ್ರ ನಾಮಿನೇಟ್​ ಆಯಿತು. ಹಾಗಾಗಿ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಮತ್ತು ಗೀತರಚನಕಾರ ಚಂದ್ರಬೋಸ್​ ಹಾಗೂ ಅವರ ಪತ್ನಿಯರಿಗೆ ಮಾತ್ರ ಉಚಿತ ಪಾಸ್​ ನೀಡಲಾಯಿತು. ಇನ್ನುಳಿದವರು ಸ್ವಂತ ಹಣ ಖರ್ಚು ಮಾಡಿ ಪಾಸ್​ ಪಡೆದಿದ್ದು ನಿಜ ಎಂದು ಕಾರ್ತಿಕೇಯ ಹೇಳಿದ್ದಾರೆ. ಆದರೆ 60 ಲಕ್ಷ ಖರ್ಚು ಮಾಡಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: MM Keeravani: ‘ನನಗೆ ಆಸ್ಕರ್​ ಸಿಕ್ಕಿದ್ದು ಇದೇ ಮೊದಲೇನಲ್ಲ’: 30 ವರ್ಷದ ಹಿಂದಿನ ವಿಷಯ ತೆರೆದಿಟ್ಟ ಎಂಎಂ ಕೀರವಾಣಿ

ಇದನ್ನೂ ಓದಿ
Oscar 2023 Winners List: ಈ ವರ್ಷ ಆಸ್ಕರ್ ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ
Oscar 2023: ಆಸ್ಕರ್ ಗೆದ್ದು ಬೀಗಿದ ‘ನಾಟು ನಾಟು..’ ಹಾಡು; ರಾಜಮೌಳಿ ಚಿತ್ರಕ್ಕೆ ಮತ್ತೊಂದು ಕಿರೀಟ
The Elephant Whisperers: ಭಾರತಕ್ಕೆ ಆಸ್ಕರ್​: ‘ದಿ ಎಲಿಫೆಂಟ್​ ವಿಸ್ಪರರ್ಸ್​’ಗೆ ಅಕಾಡೆಮಿ ಪ್ರಶಸ್ತಿ 
Ram Charan: ‘ಭಾರತೀಯರಿಗೆ ಆಸ್ಕರ್​ ಪ್ರಶಸ್ತಿ ಅಂದ್ರೆ ಒಲಂಪಿಕ್ಸ್​ ಗೋಲ್ಡ್​ ಮೆಡಲ್​ ಇದ್ದಂಗೆ’: ರಾಮ್​ ಚರಣ್​

ರಾಜಮೌಳಿ, ಜೂನಿಯರ್​ ಎನ್​ಟಿಆರ್​, ರಾಮ್​ ಚರಣ್​ ಹಾಗೂ ಅವರ ಕುಟುಂಬದವರಿಗೆ ಉಚಿತ ಪಾಸ್​ ಸಿಗಲಿಲ್ಲ. ಹಾಗಾಗಿ ತಲಾ 1.2 ಲಕ್ಷ ರೂಪಾಯಿ ಹಣ ನೀಡಿ ಪಾಸ್​ ಪಡೆಯಲಾಯಿತು. ಅದಕ್ಕಾಗಿ 60 ಲಕ್ಷ ರೂಪಾಯಿ ಖರ್ಚು ಮಾಡಿದ್ದು ನಿಜವಲ್ಲ ಎಂದು ಕಾರ್ತಿಕೇಯ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಇದನ್ನೂ ಓದಿ: DVV Danayya: ‘ಆಸ್ಕರ್​ಗಾಗಿ​ ನಾನು ದುಡ್ಡು ಕೊಟ್ಟಿಲ್ಲ, ಅಲ್ಲಿ ಏನಾಯ್ತೋ ಗೊತ್ತಿಲ್ಲ’: ‘ಆರ್​ಆರ್​ಆರ್​’ ನಿರ್ಮಾಪಕ ದಾನಯ್ಯ

80 ಕೋಟಿ ರೂಪಾಯಿ ಸುರಿದು ಪ್ರಚಾರ ಮಾಡುವ ಮೂಲಕ ಆಸ್ಕರ್​ ಪಡೆಯಲು ರಾಜಮೌಳಿ ಪ್ರಯತ್ನಿಸಿದ್ದಾರೆ ಎಂದು ತೆಲುಗಿನ ನಿರ್ಮಾಪಕ ತಮ್ಮಾರೆಡ್ಡಿ ಭಾರದ್ವಜ ಅವರು ಈ ಹಿಂದೆ ಆರೋಪಿಸಿದ್ದರು. ಆದರೆ ಅವರ ಮಾತನ್ನು ಹಿರಿಯ ನಿರ್ದೇಶಕ ಕೆ. ರಾಘವೇಂದ್ರ ರಾವ್​ ಅವರು ತಳ್ಳಿಹಾಕಿದ್ದರು. ‘ನಲ್ಮೆಯ ಸ್ನೇಹಿತ ಭಾರದ್ವಜ ಅವರೇ.. ತೆಲುಗು ಸಿನಿಮಾ, ಸಾಹಿತ್ಯ, ನಟರು ಮತ್ತು ನಿರ್ದೇಶಕರಿಗೆ ಆರ್​ಆರ್​ಆರ್​ ಚಿತ್ರವು ಕೀರ್ತಿ ತಂದುಕೊಟ್ಟಿದ್ದಕ್ಕಾಗಿ ನಾವೆಲ್ಲರೂ ಹೆಮ್ಮೆಪಡಬೇಕು. ಖರ್ಚು ಮಾಡಿದ ಹಣದ ಬಗ್ಗೆ ನಿಮ್ಮ ಬಳಿ ಲೆಕ್ಕ ಇದೆಯಾ? ಲೆಜೆಂಡರಿ ನಿರ್ದೇಶಕರಾದ ಜೇಮ್ಸ್​ ಕ್ಯಾಮೆರಾನ್​ ಮತ್ತು ಸ್ಟೀವಲ್​ ಸ್ಪೀಲ್​ಬರ್ಗ್​ ಅವರು ಹಣ ತೆಗೆದುಕೊಂಡು ಆರ್​ಆರ್​ಆರ್​ ಸಿನಿಮಾವನ್ನು ಹೊಗಳಿದರು ಎಂಬುದು ನಿಮ್ಮ ಅಭಿಪ್ರಾಯವೇ?’ ಎಂದು ಕೆ. ರಾಘವೇಂದ್ರ ರಾವ್​ ಅವರು ಟ್ವೀಟ್​ ಮಾಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:05 am, Tue, 28 March 23