ಪ್ಯಾರಿಸ್‌ನಲ್ಲಿ ಸುದೀಪ್ ‘ಈಗ’ ಚಿತ್ರಕ್ಕೆ ಭಾರಿ ಪ್ರಶಂಸೆ; ರಾಜಮೌಳಿಗೆ ಸಿಕ್ಕಿತು ಅಪರೂಪದ ಗೌರವ

ಎಸ್.ಎಸ್. ರಾಜಮೌಳಿ ಯುರೋಪ್ ಪ್ರವಾಸದಲ್ಲಿದ್ದು, ಅವರ ಹಿಟ್ ಚಿತ್ರಗಳ ಪ್ರದರ್ಶನ ನಡೆಯುತ್ತಿದೆ. ಪ್ಯಾರಿಸ್‌ನಲ್ಲಿ 'ಈಗ' ಚಿತ್ರದ ದೃಶ್ಯವೊಂದಕ್ಕೆ ಪ್ರೇಕ್ಷಕರು ಹುಚ್ಚೆದ್ದು ಸಂಭ್ರಮಿಸಿದ್ದು, ಅದರ ವಿಡಿಯೋ ವೈರಲ್ ಆಗಿದೆ. 'ಸಿನೆಮಾಥೆಕ್ ಫ್ರಾಂಕೈಸ್' ಸಂಸ್ಥೆಯಿಂದ ರಾಜಮೌಳಿಗೆ ಜಾಗತಿಕ ಗೌರವ ಲಭಿಸಿದೆ. ನಾನಿ, ಸಮಂತಾ, ಸುದೀಪ್ ನಟಿಸಿದ್ದ 'ಈಗ' ಚಿತ್ರದ ವಿಭಿನ್ನ ಕಥೆ ಮತ್ತು ಸುದೀಪ್ ನಟನೆಗೆ ವಿಶ್ವಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಪ್ಯಾರಿಸ್‌ನಲ್ಲಿ ಸುದೀಪ್ ಈಗ ಚಿತ್ರಕ್ಕೆ ಭಾರಿ ಪ್ರಶಂಸೆ; ರಾಜಮೌಳಿಗೆ ಸಿಕ್ಕಿತು ಅಪರೂಪದ ಗೌರವ
ಸುದೀಪ್

Updated on: Jun 30, 2026 | 8:37 AM

ಮುಖ್ಯಾಂಶಗಳು

  • ಪ್ಯಾರಿಸ್ ಥಿಯೇಟರ್‌ನಲ್ಲಿ 'ಈಗ' ಚಿತ್ರದ ಧೂಳ್: ಕ್ಲೈಮ್ಯಾಕ್ಸ್ ದೃಶ್ಯಕ್ಕೆ ಫ್ರೆಂಚ್ ಪ್ರೇಕ್ಷಕರು ಫಿದಾ
  • ಸ್ಟಾರ್ ನಿರ್ದೇಶಕ ರಾಜಮೌಳಿಗೆ ಜಾಗತಿಕ ಗೌರವ: ಪ್ರತಿಷ್ಠಿತ ಸಿನೆಮಾಥೆಕ್ ಫ್ರಾಂಕೈಸ್ ಸಂಸ್ಥೆಯಿಂದ ಅಪರೂಪದ ಸನ್ಮಾನ
  • ಕಿಚ್ಚ ಸುದೀಪ್ ಮತ್ತು ನೊಣದ ಜುಗಲ್‌ಬಂದಿ: ವಿಶ್ವಮಟ್ಟದಲ್ಲಿ ಮತ್ತೆ ಸದ್ದು ಮಾಡಿದ ರಾಜಮೌಳಿ ಸಿನಿಮಾ ಕಲೆ

ಸ್ಟಾರ್ ನಿರ್ದೇಶಕ ಎಸ್.ಎಸ್. ರಾಜಮೌಳಿ (Rajamouli) ಪ್ರಸ್ತುತ ಯುರೋಪ್ ಪ್ರವಾಸದಲ್ಲಿದ್ದಾರೆ. ಅಲ್ಲಿ ಅವರ ಸೂಪರ್ ಹಿಟ್ ಸಿನಿಮಾಗಳ ಪ್ರದರ್ಶನ ನಡೆಯುತ್ತಿದೆ. ‘ಆರ್‌ಆರ್‌ಆರ್’, ‘ಬಾಹುಬಲಿ’ ಮತ್ತು ‘ಈಗ’ ಸಿನಿಮಾಗಳನ್ನು ಅಲ್ಲಿನ ಪ್ರೇಕ್ಷಕರಿಗಾಗಿ ಪ್ರದರ್ಶಿಸಲಾಗುತ್ತಿದೆ. ಸಮಂತಾ, ನಾನಿ, ಸುದೀಪ್ ಮೊದಲಾದವರು ನಟಿಸಿರೋ ‘ಈಗ’ ಚಿತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪ್ಯಾರಿಸ್‌ನಲ್ಲಿ ‘ಈಗ’ ಸಿನಿಮಾದ ಪ್ರದರ್ಶನ ನಡೆದಿದೆ. ಈ ವೇಳೆ ಚಿತ್ರದ ಪ್ರಮುಖ ದೃಶ್ಯವೊಂದಕ್ಕೆ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ರಾಜಮೌಳಿ ಅವರ ತಂಡ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಸಿನಿಮಾದ ಕೊನೆಯಲ್ಲಿ ನಾಯಕ ಕಿಚ್ಚ ಸುದೀಪ್ ಅವರಿಗೆ ನೊಣ ಚಾಲೆಂಜ್ ಹಾಕುವ ದೃಶ್ಯವಿದು. ನೊಣವು ಗೋಡೆಯ ಮೇಲೆ ‘ಐ ವಿಲ್ ಬಿ ಬ್ಯಾಕ್’ (ನಾನು ಮತ್ತೆ ಬರುತ್ತೇನೆ) ಎಂದು ಬರೆಯುತ್ತದೆ. ಈ ದೃಶ್ಯಕ್ಕೆ ಫ್ರಾನ್ಸ್ ದೇಶದ ಪ್ರೇಕ್ಷಕರು ಥಿಯೇಟರ್‌ನಲ್ಲಿ ಸಖತ್ ಕಿರುಚಾಡಿ ಸಂಭ್ರಮಿಸಿದ್ದಾರೆ.

‘ಈಗ’ ಸಿನಿಮಾದ ಹಿನ್ನೆಲೆ

‘ಈಗ’ ಸಿನಿಮಾ 2012ರಲ್ಲಿ ಬಿಡುಗಡೆಯಾಗಿತ್ತು. ಇದರಲ್ಲಿ ನಾನಿ, ಸಮಂತಾ ಮತ್ತು ಕಿಚ್ಚ ಸುದೀಪ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಖಳನಾಯಕನಿಂದ ಕೊಲೆಯಾಗುವ ನಾಯಕ ನೊಣವಾಗಿ ಮರುಜನ್ಮ ಪಡೆಯುತ್ತಾನೆ. ನಂತರ ತನ್ನ ಸಾವಿಗೆ ಸೇಡು ತೀರಿಸಿಕೊಳ್ಳುವ ವಿಭಿನ್ನ ಕಥೆ ಇದಾಗಿತ್ತು. ಸುದೀಪ್ ಅವರ ನಟನೆಗೆ ಸಾಕಷ್ಟು ಮೆಚ್ಚುಗೆ ಸಿಕ್ಕಿತ್ತು.

ಇದನ್ನೂ ಓದಿ: ರಿಲೀಸ್​​ಗೆ 7 ತಿಂಗಳಿರುವಾಗಲೇ ‘ವಾರಣಾಸಿ’ ಶೂಟ್ ಪೂರ್ಣಗೊಳಿಸಲಿದ್ದಾರೆ ರಾಜಮೌಳಿ

ರಾಜಮೌಳಿಗೆ ಸಿಕ್ಕಿತು ಜಾಗತಿಕ ಗೌರವ

ಪ್ಯಾರಿಸ್ ಪ್ರವಾಸದ ವೇಳೆ ರಾಜಮೌಳಿ ಅವರಿಗೆ ವಿಶ್ವದ ಪ್ರತಿಷ್ಠಿತ ‘ಸಿನೆಮಾಥೆಕ್ ಫ್ರಾಂಕೈಸ್’ ಸಂಸ್ಥೆಯಿಂದ ದೊಡ್ಡ ಗೌರವ ಲಭಿಸಿದೆ. ಈ ಸಂಸ್ಥೆಯ ಹಾಲ್‌ನಲ್ಲಿ ರಾಜಮೌಳಿ ಅವರಿಗೆ ಖಾಯಂ ಸ್ಥಾನ ನೀಡಲಾಗಿದೆ. ಈ ಬಗ್ಗೆ ರಾಜಮೌಳಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ ಖಾತೆಯಲ್ಲಿ ಸಂತೋಷ ಹಂಚಿಕೊಂಡಿದ್ದಾರೆ. ‘ಪ್ಯಾರಿಸ್‌ನಲ್ಲಿ ನನ್ನ ಚಿತ್ರಗಳ ಪ್ರದರ್ಶನ ಆಗುತ್ತಿರುವುದೇ ನನಗೆ ದೊಡ್ಡ ಗೌರವ. ಆದರೆ ಈ ವಿಶೇಷ ಸರ್ಪ್ರೈಸ್ ಅನ್ನು ನಾನು ನಿರೀಕ್ಷಿಸಿರಲಿಲ್ಲ. ಇದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ’ ಎಂದು ಅವರು ಬರೆದುಕೊಂಡಿದ್ದಾರೆ. ಫ್ರೆಂಚ್ ಸಂಸ್ಥೆಗೆ ಅವರು ಧನ್ಯವಾದ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us