
ಟಾಲಿವುಡ್ ಸ್ಟಾರ್ ನಿರ್ದೇಶಕ ರಾಜಮೌಳಿ (Rajamouli) ಅವರು ಯಾವುದೇ ಪ್ರಾಜೆಕ್ಟ್ ಕೈಗೆತ್ತಿಕೊಂಡರೂ ಅದರಲ್ಲಿ ಒಂದು ವಿಶೇಷತೆ ಇರುತ್ತದೆ. ಸಿನಿಮಾ ಅದ್ದೂರಿಯಾಗಿ ಮೂಡಿ ಬರುತ್ತದೆ. ಸಿನಿಮಾದ ದೃಶ್ಯಗಳನ್ನು ಥಿಯೇಟರ್ನಲ್ಲಿ ಕುಳಿತು ನೋಡುವಾಗ ಮೈ ರೋಮಾಂಚನ ಆಗುತ್ತದೆ. ಈಗ ಅವರ ಮೇಲೆ ಕೃತಿ ಚೌರ್ಯದ ಆರೋಪ ಕೇಳಿ ಬಂದಿದೆ. ‘ವಾರಣಾಸಿ’ ಟೀಸರ್ ನೋಡಿ ಅನೇಕರು ಇದನ್ನು ಹಾಲಿವುಡ್ ಸಿನಿಮಾ ದೃಶ್ಯಗಳಿಗೆ ಹೋಲಿಕೆ ಮಾಡಿದ್ದಾರೆ.
ರಾಜಮೌಳಿ ಅವರು ‘ಮಗಧೀರ’, ‘ಈಗ’, ‘ಬಾಹುಬಲಿ’, ‘ಬಾಹುಬಲಿ 2’, ‘ಆರ್ಆರ್ಆರ್’ನಂತಹ ಸಿನಿಮಾಗಳನ್ನು ನೀಡಿದ್ದಾರೆ. ಇವೆಲ್ಲವೂ ಫ್ಯಾಂಟಸಿ ಚಿತ್ರಗಳು. ಈ ಸಿನಿಮಾಗಳಲ್ಲಿ ಅವರ ಆಲೋಚನಾ ಶಕ್ತಿ ಪ್ರೇಕ್ಷಕರನ್ನು ವಿಸ್ಮಯಗೊಳಿಸುತ್ತದೆ. ಆದರೆ, ಕೆಲವು ದೃಶ್ಯಗಳು ಬೇರೆ ಬೇರೆ ಸಿನಿಮಾಗಳ ದೃಶ್ಯಗಳಿಗೆ ಹೋಲಿಕೆ ಆಗಿದ್ದು ಇದೆ. ಈ ಸಂದರ್ಭದಲ್ಲಿ ಅವರು ಟೀಕೆ ಎದುರಿಸಿದ್ದರು.
ಈಗ ರಾಜಮೌಳಿ ಅವರ ‘ವಾರಣಾಸಿ’ ಟೀಸರ್ನ ದೃಶ್ಯಗಳ ಮೇಲೂ ಕೃತಿ ಚೌರ್ಯದ ಆರೋಪ ಎದುರಾಗಿದೆ. ನೆಟ್ಟಿಗರು ಬೇರೆ ಬೇರೆ ಹಾಲಿವುಡ್ ಸಿನಿಮಾಗಳಿಗೆ ‘ವಾರಣಾಸಿ’ ಚಿತ್ರದ ದೃಶ್ಯವನ್ನು ಹೋಲಿಕೆ ಮಾಡುತ್ತಿದ್ದಾರೆ. ಒರಿಜಿನಲ್ ದೃಶ್ಯ ಹಾಗೂ ರಾಜಮೌಳಿ ವರ್ಷನ್ ಎಂದು ಫೋಟೋ ಸಮೇತ ಹಾಕಲಾಗಿದೆ. ಎರಡರ ಮಧ್ಯೆ ಸಾಮ್ಯತೆ ಇದೆ.
ss rajamouli saar… what is this behaviour? atleast try being original once pls !! 😭…. pic.twitter.com/Ks4ZMeRe8q
— 𝘞𝘈𝘓𝘛𝘌𝘙 𝘞𝘏𝘐𝘛𝘌 🚬 (@BOLLY4U2U) November 16, 2025
ತಮ್ಮ ಸಿನಿಮಾಗಳಲ್ಲಿ ಹಾಲಿವುಡ್ನ ಸ್ಫೂರ್ತಿ ಇರುತ್ತದೆ ಎಂದು ರಾಜಮೌಳಿ ಹೇಳಿದ್ದಾರೆ. ಆದಾಗ್ಯೂ ರಾಜಮೌಳಿ ಅವರು ಸಾಕಷ್ಟು ಬಾರಿ ಟೀಕೆಗಳನ್ನು ಎದುರಿಸಿದ ಉದಾಹರಣೆ ಇದೆ. ಈಗ ಸಿನಿಮಾದ ಟೀಸರ್ ಅಥವಾ ಟ್ರೇಲರ್ ರಿಲೀಸ್ ಆದ ಬಳಿಕ ಈ ಬಗ್ಗೆ ಮತ್ತಷ್ಟು ಸ್ಪಷ್ಟನೆ ಸಿಗಲಿದೆ.
ಇದನ್ನೂ ಓದಿ: ‘ವಾರಣಾಸಿ’ ಈವೆಂಟ್ನಲ್ಲಿ ಹಿಂದೂ ದೇವರ ಬಗ್ಗೆ ರಾಜಮೌಳಿ ಟೀಕೆ; ಸಿನಿಮಾ ಬ್ಯಾನ್ ಮಾಡಲು ಆಗ್ರಹ
‘ವಾರಣಾಸಿ’ ಸಿನಿಮಾಗೆ ಮಹೇಶ್ ಬಾಬು ಹೀರೋ. ಪ್ರಿಯಾಂಕಾ ಚೋಪ್ರಾ ನಾಯಕಿ. ಮಲಯಾಳಂನ ಪೃಥ್ವಿರಾಜ್ ಸುಕುಮಾರನ್ ವಿಲನ್. ಈ ಸಿನಿಮಾ 2027ರ ಸಮ್ಮರ್ ಅಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.