ನನ್ನ ಎಕ್ಸ್​​ಗಳ ಜತೆ ಫ್ರೆಂಡ್​ಶಿಪ್ ಇದೆ, ಅವರ ಪಾಲಕರನ್ನೂ ಭೇಟಿ ಮಾಡ್ತೀನಿ ಎಂದ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಹಾಗೂ ನಟ ರಕ್ಷಿತ್ ಶೆಟ್ಟಿ ಎಂಗೇಜ್​ಮೆಂಟ್ ಮಾಡಿಕೊಂಡಿದ್ದರು. ಆದರೆ, ಅವರ ಸಂಬಂಧ ಮುರಿದು ಬಿತ್ತು. ಆ ಬಳಿಕ ಅವರು ವಿಜಯ್ ದೇವರಕೊಂಡ ಜತೆ ಕ್ಲೋಸ್ ಆದರು.

ನನ್ನ ಎಕ್ಸ್​​ಗಳ ಜತೆ ಫ್ರೆಂಡ್​ಶಿಪ್ ಇದೆ, ಅವರ ಪಾಲಕರನ್ನೂ ಭೇಟಿ ಮಾಡ್ತೀನಿ ಎಂದ ರಶ್ಮಿಕಾ ಮಂದಣ್ಣ
ರಶ್ಮಿಕಾ
Edited By:

Updated on: Oct 01, 2022 | 6:06 PM

ರಶ್ಮಿಕಾ ಮಂದಣ್ಣ (Rashmika Mandanna) ಅವರು ಬಾಲಿವುಡ್​ನಲ್ಲಿ ಬ್ಯುಸಿ ಇದ್ದಾರೆ. ಅವರ ನಟನೆಯ ಮೊದಲ ಹಿಂದಿ ಸಿನಿಮಾ ‘ಗುಡ್​ಬೈ’ ರಿಲೀಸ್​ಗೆ ರೆಡಿ ಇದೆ. ಇದು ಅವರ ಮೊದಲ ಚಿತ್ರ ಆದ್ದರಿಂದ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರು ಈ ಚಿತ್ರಕ್ಕೆ ಭರ್ಜರಿಯಾಗೇ ಪ್ರಚಾರ ನೀಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರು ನಾನಾ ನಗರಗಳಿಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಕೊಡಗಿನ ಕುವರಿಗೆ ಮಾಧ್ಯಮದವರಿಂದ ವೈಯಕ್ತಿಕ ಪ್ರಶ್ನೆಗಳು ಕೂಡ ಎದುರಾಗಿವೆ. ಇದಕ್ಕೆ ರಶ್ಮಿಕಾ ಯಾವುದೇ ಹಿಂಜರಿಕೆ ಇಲ್ಲದೆ ಉತ್ತರಿಸಿದ್ದಾರೆ. ಅವರ ಉತ್ತರ ಕೇಳಿ ಫ್ಯಾನ್ಸ್ ಅಚ್ಚರಿಗೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ನಟ ರಕ್ಷಿತ್ ಶೆಟ್ಟಿ ಎಂಗೇಜ್​ಮೆಂಟ್ ಮಾಡಿಕೊಂಡಿದ್ದರು. ಆದರೆ, ಅವರ ಸಂಬಂಧ ಮುರಿದು ಬಿತ್ತು. ಆ ಬಳಿಕ ಅವರು ವಿಜಯ್ ದೇವರಕೊಂಡ ಜತೆ ಕ್ಲೋಸ್ ಆದರು. ಇಬ್ಬರೂ ಪ್ರೀತಿಯಲ್ಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ, ಇದನ್ನು ಅವರ ಅಲ್ಲಗಳೆಯುತ್ತಲೇ ಬಂದಿದ್ದಾರೆ. ‘ಇಬ್ಬರೂ ರಿಲೇಶನ್​ಶಿಪ್​ನಲ್ಲಿದ್ದರು. ಆದರೆ, ಈಗ ಬೇರೆ ಆಗಿದ್ದಾರೆ’ ಎಂದು ಕೆಲ ಮಾಧ್ಯಮಗಳಲ್ಲಿ ವರದಿ ಆಗಿದ್ದಿದೆ. ಈಗ ಇದೇ ವಿಚಾರ ಇಟ್ಟುಕೊಂಡು ರಶ್ಮಿಕಾಗೆ ಪ್ರಶ್ನೆ ಮಾಡಲಾಗಿದೆ.

ಎಕ್ಸ್​ಗಳ ವಿಚಾರವಾಗಿ ರಶ್ಮಿಕಾಗೆ ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಉತ್ತರಿಸಿದ ಅವರು, ‘ನನ್ನ ಎಕ್ಸ್​ಗಳ ಜತೆ ಈಗಲೂ ಫ್ರೆಂಡ್​ಶಿಪ್ ಉಳಿಸಿಕೊಂಡಿದ್ದೇನೆ. ಅವರ ಕುಟುಂಬವನ್ನು, ಅವರ ಪಾಲಕರನ್ನು ಭೇಟಿ ಮಾಡುತ್ತೇನೆ. ನನಗೆ ಗೊತ್ತು ಅದು ಒಳ್ಳೆಯ ಲಕ್ಷಣ ಅಲ್ಲ. ಆದರೆ, ಅವರ ಜತೆ ನನಗೆ ಫ್ರೆಂಡ್​ಶಿಪ್ ಇದೆ. ಅದು ಒಳ್ಳೆಯದು’ ಎಂದು ರಶ್ಮಿಕಾ ಹೇಳಿದ್ದಾರೆ.

ಇದನ್ನೂ ಓದಿ
Pushpa 2: ರಶ್ಮಿಕಾ ಮಂದಣ್ಣ ಪಾತ್ರ ಸಾಯುತ್ತೆ ಅನ್ನೋದು ನಿಜವೇ? ‘ಪುಷ್ಪ 2’ ನಿರ್ಮಾಪಕರು​ ನೀಡಿದ ಪ್ರತಿಕ್ರಿಯೆ ಇಲ್ಲಿದೆ..
Rashmika Mandanna: ರಶ್ಮಿಕಾ ಮಂದಣ್ಣ ಗುಟ್ಟಾಗಿ ‘777 ಚಾರ್ಲಿ’ ನೋಡಿದ್ರಾ? ಜನರ ಅನುಮಾನಕ್ಕೆ ಕಾರಣ ಆಗಿದೆ ಈ ವಿಡಿಯೋ
ಅತಿ ಹೆಚ್ಚು ಸಂಬಳ ಪಡೆಯುವ ದಕ್ಷಿಣ ಭಾರತದ ಟಾಪ್​ 10 ನಟಿಯರು ಇವರು; ರಶ್ಮಿಕಾ, ಸಮಂತಾ ಸಂಭಾವನೆ ಎಷ್ಟು?
ರಶ್ಮಿಕಾ ಮಂದಣ್ಣ ಹೊಸ ವಿಡಿಯೋ ವೈರಲ್​; ಎನರ್ಜಿ ಕಂಡು ವಾವ್​ ಎಂದ ಅಭಿಮಾನಿಗಳು

ಇದನ್ನೂ ಓದಿ: ಎದೆ ಮೇಲೆ ಆಟೋಗ್ರಾಫ್​ ಹಾಕಿ ಅಂತ ಹಠ ಹಿಡಿದ ರಶ್ಮಿಕಾ ಮಂದಣ್ಣ ಅಭಿಮಾನಿ; ಮುಂದೇನಾಯ್ತು?

ವಿಜಯ್ ದೇವರಕೊಂಡ ಜತೆಗಿನ ರಿಲೇಶನ್​ಶಿಪ್ ವಿಚಾರಕ್ಕೆ ಸಂಬಂಧಿಸಿ ರಶ್ಮಿಕಾ ಮೌನ ತಾಳಿದ್ದೇ ಹೆಚ್ಚು. ಅನೇಕ ಬಾರಿ ಅವರು ಈ ಪ್ರಶ್ನೆ ಎದುರಾದಾಗ ನಕ್ಕಿ ಸುಮ್ಮನಾಗಿದ್ದೂ ಇದೆ. ರಶ್ಮಿಕಾ ಹಾಗೂ ವಿಜಯ್ ‘ಗೀತ ಗೋವಿಂದಂ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆಯಿತು. ಆ ಬಳಿಕ ‘ಡಿಯರ್ ಕಾಮ್ರೇಡ್’ ಚಿತ್ರದಲ್ಲಿ ಈ ಜೋಡಿ ಒಟ್ಟಾಗಿ ನಟಿಸಿತು. ಆದರೆ, ಈ ಸಿನಿಮಾ ಹೇಳಿಕೊಳ್ಳುವಂತಹ ಯಶಸ್ಸು ಪಡೆದಿಲ್ಲ.