ದೆಹಲಿ: ಸೂರ್ಯ ನಾಯಕನಾಗಿರುವ ಸುಧಾ ಕೊಂಗರ ನಿರ್ದೇಶನದ ತಮಿಳು ಸಿನಿಮಾ ‘ಸೂರರೈ ಪೊಟ್ರು’ 93ನೇ ಆಸ್ಕರ್ ಪ್ರಶಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಗಿಟ್ಟಿಸಿಕೊಂಡಿದೆ ಎಂದು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆಂಡ್ ಸಯನ್ಸ್ ಹೇಳಿದೆ. ಮಾರ್ಚ್ 5-10ರವರೆಗೆ ಅಕಾಡೆಮಿ ಮತದಾನ ನಡೆಯಲಿದ್ದು ಮಾರ್ಚ್ 15ರಂದು ಫಲಿತಾಂಶ ಪ್ರಕಟವಾಗಲಿದೆ.
ಕಡಿಮೆ ದರದಲ್ಲಿ ಸಾಮಾನ್ಯ ವ್ಯಕ್ತಿಗಳೂ ವಿಮಾನದಲ್ಲಿ ಸಂಚರಿಸಬೇಕು ಎಂದು ಕನಸು ಹೊತ್ತು ಏರ್ ಡೆಕ್ಕನ್ ವಿಮಾನಯಾನ ಸಂಸ್ಥೆ ಆರಂಭಿಸಿದ ಕನ್ನಡಿಗ ಗೋಪಿನಾಥ್ ಜೀವನದ ಕಥೆ ಸೂರರೈ ಪೊಟ್ರು ಸಿನಿಮಾ ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಹಿನ್ನೆಲೆ ಸಂಗೀತ ಹಾಗೂ ಇತರ ವಿಭಾಗಗಳಲ್ಲಿ ಆಸ್ಕರ್ ಸ್ಪರ್ಧೆಗೆ ಪ್ರವೇಶಿಸಿದೆ.
We are elated and thrilled!!! #SooraraiPottru joins OSCARS!!!https://t.co/JEDGgDWdZ9#SooraraiPottru?@Suriya_offl #SudhaKongara @rajsekarpandian @gvprakash @nikethbommi @Aparnabala2 @editorsuriya @jacki_art @deepakbhojraj @thanga18 @guneetm
— 2D Entertainment (@2D_ENTPVTLTD) February 26, 2021
ಪ್ರಾಥಮಿಕ ಹಂತದಲ್ಲಿ ಆಯ್ಕೆಯಾದ 366 ಸಿನಿಮಾಗಳ ಪಟ್ಟಿಯಲ್ಲಿ ಸೂರರೈ ಪೊಟ್ರು ಸಿನಿಮಾ ಇದೆ. ಜನರಲ್ ಕೆಟಗರಿಯಲ್ಲಿ ಈ ಸಿನಿಮಾ ಸ್ಪರ್ಧಿಸುತ್ತಿದೆ ಎಂದು ಸಹ ನಿರ್ಮಾಪಕ ರಾಜಶೇಖರ್ ಪಾಂಡ್ಯ ಹೇಳಿದ್ದಾರೆ.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸೂರರೈ ಪೊಟ್ರು ಅಮೆಜಾನ್ ಪ್ರೈಮ್ನಲ್ಲಿ ರಿಲೀಸ್ ಆಗಿತ್ತು. ಒಟಿಟಿಯಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತ್ತು. ಸೂರ್ಯ ಅವರ ಹೋಮ್ ಬ್ಯಾನರ್ 2ಡಿ ಎಂಟರ್ ಟೈನ್ ಮೆಂಟ್ ನಿರ್ಮಿಸಿದ ಈ ಚಿತ್ರದಲ್ಲಿ ಸೂರ್ಯ ಜತೆಗೆ ಪರೇಶ್ ರಾವಲ್, ಅಪರ್ಣಾ ಬಾಲಮುರಳಿ, ಊರ್ವಶಿ ಮೊದಲಾದವರು ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ: ಆಸ್ಕರ್ ರೇಸ್ನಲ್ಲಿ ಕನ್ನಡಿಗ ಗೋಪಿನಾಥ್ ಜೀವನದ ಕಥೆ!
Published On - 1:49 pm, Fri, 26 February 21