Ragini Dwivedi: ರಾಗಿಣಿ ಏನು ಅಂತ ಎಲ್ಲರಿಗೂ ಗೊತ್ತು; ನಾನು ಅದನ್ನು ಸಮರ್ಥಿಸಿಕೊಳ್ಳುವ ಅವಶ್ಯಕತೆ ಇಲ್ಲ

2021ರ ಮೊದಲ ಸಿನಿಮಾ ಕರ್ವ 3. ಈ ರೀತಿಯ ಪಾತ್ರದಕಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದೇನೆ.ಸಾಕಷ್ಟು ವಿಚಾರಗಳ ಬಗ್ಗೆ ಯೋಜನೆಗಳು ನಡೆಯುತ್ತಿವೆ ಎಂದು ರಾಗಿಣಿ ಸಿನಿಮಾ ಬಗ್ಗೆ ಮಾಹಿತಿ ನೀಡಿದರು.

  • TV9 Web Team
  • Published On - 13:00 PM, 26 Feb 2021
Ragini Dwivedi: ರಾಗಿಣಿ ಏನು ಅಂತ ಎಲ್ಲರಿಗೂ ಗೊತ್ತು; ನಾನು ಅದನ್ನು ಸಮರ್ಥಿಸಿಕೊಳ್ಳುವ ಅವಶ್ಯಕತೆ ಇಲ್ಲ
ರಾಗಿಣಿ ದ್ವಿವೇದಿ

ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್​ ಕೇಸ್​ನಲ್ಲಿ ನಟಿ ರಾಗಿಣಿ ದ್ವಿವೇದಿ ಜೈಲಿಗೆ ಹೋಗಿ ಬಂದಿದ್ದರು. ಜೈಲಿನಿಂದ ಹೊರ ಬರುತ್ತಲೇ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ್ದ ಅವರು, ಕಾಲವೇ ಎಲ್ಲದಕ್ಕೂ ಉತ್ತರಿಸುತ್ತದೆ ಎಂದಿದ್ದರು. ನಂತರ ಇನ್​ಸ್ಟಾಗ್ರಾಂ ಲೈವ್​​ನಲ್ಲಿ ಬಂದು ಕಣ್ಣೀರು ಹಾಕಿದ್ದರು. ನಾನು ಮತ್ತೆ ಚೇತರಿಸಿಕೊಳ್ಳುತ್ತಿದ್ದೇನೆ. ಶೀಘ್ರವೇ ಎಲ್ಲವೂ ಸರಿಯಾಗಲಿದೆ ಎನ್ನುವ ಆಶಾಭಾವ ವ್ಯಕ್ತಪಡಿಸಿದ್ದರು. ಅಂತೆಯೇ, ರಾಗಿಣಿ ದ್ವಿವೇದಿಗೆ ಮತ್ತೆ ಸಿನಿಮಾ ಆಫರ್​ಗಳು ಬರಲು ಆರಂಭವಾಗಿದೆ. ಇದೇ ಖುಷಿಗೆ ಮಾಧ್ಯಮದ ಜತೆ ಅವರು ಇಂದು ಮಾತನಾಡಿದರು.

2021ರ ಮೊದಲ ಸಿನಿಮಾ ಕರ್ವ 3. ಈ ರೀತಿಯ ಪಾತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದೇನೆ. ಸಾಕಷ್ಟು ವಿಚಾರಗಳ ಬಗ್ಗೆ ಯೋಜನೆಗಳು ನಡೆಯುತ್ತಿವೆ. 2020ಯಲ್ಲಿ ಎಲ್ಲರೂ ನೊಂದಿದ್ದಾರೆ. ಈ ವರ್ಷ ವಿಭಿನ್ನ ಸಿನಿಮಾಗಳನ್ನು ಮಾಡಬೇಕೆಂದುಕೊಂಡಿದ್ದೇನೆ. ಅದೇ ರೀತಿ ಕಥೆಗಳನ್ನ ಕೇಳುತ್ತಿದ್ದೇನೆ ಎಂದು ಸಿನಿಮಾ ಬಗ್ಗೆ ಮಾಹಿತಿ ನೀಡಿದರು ರಾಗಿಣಿ.

ಖಾಸಗಿ ಜೀವನದ ಬಗ್ಗೆ ಮಾತನಾಡಿರುವ ರಾಗಿಣಿ, ಈಗ ಅಪ್ಪ ಅಮ್ಮನನ್ನ ನೋಡಿಕೊಳ್ಳುವುದು ತುಂಬಾನೇ ಮುಖ್ಯ. ಸಕಾರಾತ್ಮಕ ವಿಚಾರಗಳೊಂದಿಗೆ ಈ ವರ್ಷ ಆರಂಭವಾಗಿದೆ. ಸಣ್ಣ, ಸಣ್ಣ ವಿಚಾರಗಳಲ್ಲಿ ನಾವು ಖುಷಿ ಕಾಣಬೇಕು. ಎಷ್ಟೇ ದುಡ್ಡು, ಹೆಸರು ಇದ್ದರೂ ಯಾವುದೂ ಶಾಶ್ವತ ಅಲ್ಲ ಎನ್ನುವುದನ್ನು 2020 ಸಾಬೀತು ಮಾಡಿದೆ ಎಂದು ರಾಗಿಣಿ ಕೊರೊನಾ ದಿನಗಳನ್ನು ನೆನೆದರು.

ರಾಗಿಣಿಗೆ ಚಿತ್ರರಂಗದಿಂದ ತುಂಬಾನೇ ಬೆಂಬಲ ಸಿಗುತ್ತಿದೆಯಂತೆ. ಈ ಬಗ್ಗೆ ಖುಷಿ ಹಂಚಿಕೊಂಡಿರುವ ಅವರು, ಕನ್ನಡ ಚಿತ್ರರಂಗದ ಕಡೆಯಿಂದ ನನಗೆ ಸಿಗುತ್ತಿರುವ ಬೆಂಬಲ ಸಂತಸ ತಂದಿದೆ. ಒಂದಷ್ಟು ಜನ ಮನೆಗೆ ಬಂದು ನನ್ನ ಆರೋಗ್ಯ ವಿಚಾರಿಸಿದ್ದಾರೆ. ಅವರ ಮನಸಲ್ಲಿ ನಾನು ಇದ್ದೇನೆ ಎನ್ನುವ ಖುಷಿ ಇದೆ ಎಂದರು.

ಡ್ರಗ್​ ಕೇಸ್​ ಬಗ್ಗೆ ಮಾತನಾಡಿರುವ ರಾಗಿಣಿ, ಈ ಕೇಸ್ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ರಾಗಿಣಿ ಏನು ಎಂಬುದು ಎಲ್ಲರಿಗೂ ಗೊತ್ತು. ನಾನು ಅದನ್ನ ಸಮರ್ಥಿಸಿಕೊಳ್ಳ ಅವಶ್ಯಕತೆ ಇಲ್ಲ. ಕೇಸ್​ ಬಗ್ಗೆ ಮಾತನಾಡಲು ಇಷ್ಟವೂ ಇಲ್ಲ ಎಂದರು.

ಇದನ್ನೂ ಓದಿ: ಮತ್ತೆ ಗಾಂಧಿನಗರಕ್ಕೆ ರಾಗಿಣಿ ಕಂಬ್ಯಾಕ್.. ಕರ್ವ 3 ಸಿನಿಮಾಗೆ ಬಣ್ಣ ಹಚ್ಚಲಿದ್ದಾರೆ ತುಪ್ಪದ ಬೆಡಗಿ