AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾರ್ಶ್ವವಾಯು ಸಮಸ್ಯೆಗೆ ತುತ್ತಾದ ‘ಶಾಸ್ತ್ರಿ‘ ನಾಯಕಿ ಮಾನ್ಯಾ; ಚಿಕಿತ್ಸೆಯ ನಂತರ ಹೀಗಿದ್ದಾರೆ

Actress Manya: ಇದೀಗ ನಾನು ನನ್ನಲ್ಲಿನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುತ್ತಿದ್ದೇನೆ. ಪಾರ್ಶ್ವವಾಯುವಿನ ಲಕ್ಷಣ ಕಾಣಿಸಿಕೊಂಡಾಗ ಮೊದಲಿನಂತೆ ಡ್ಯಾನ್ಸ್​ ಮಾಡಲು ಇನ್ನೆಂದೂ ಸಾಧ್ಯವಾಗುವುದಿಲ್ಲ ಎಂದು ಬೇಸರಗೊಂಡಿದ್ದೆ. ಆದರೆ, ವೈದ್ಯರು ನಿಧಾನವಾಗಿ ಸರಿಹೋಗುವ ಭರವಸೆ ನೀಡಿದ್ದಾರೆ.

ಪಾರ್ಶ್ವವಾಯು ಸಮಸ್ಯೆಗೆ ತುತ್ತಾದ ‘ಶಾಸ್ತ್ರಿ‘ ನಾಯಕಿ ಮಾನ್ಯಾ; ಚಿಕಿತ್ಸೆಯ ನಂತರ ಹೀಗಿದ್ದಾರೆ
ನಟಿ ಮಾನ್ಯಾ
Skanda
| Edited By: |

Updated on:Feb 27, 2021 | 12:08 PM

Share

ಚಂದನವನದ (Sandalwood) ದಿಗ್ಗಜ ಡಾ.ವಿಷ್ಣುವರ್ಧನ್​ ಸೇರಿದಂತೆ ಡಿ ಬಾಸ್ ದರ್ಶನ್​, ರೋರಿಂಗ್ ಸ್ಟಾರ್ ಶ್ರೀ ಮುರುಳಿ ಅವರಿಗೆ ಜೋಡಿಯಾಗಿ ನಟಿಸಿ ಅಭಿಮಾನಿಗಳ ಮನಗೆದ್ದಿದ್ದ ನಟಿ ಮಾನ್ಯಾ (Manya Naidu) ಪಾರ್ಶ್ವವಾಯು ಸಮಸ್ಯೆಗೆ ತುತ್ತಾಗಿದ್ದಾರೆ. ತಮಗೆ ಎದುರಾಗಿರುವ ಕಷ್ಟದ ಬಗ್ಗೆ ತಮ್ಮ ಅಧಿಕೃತ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಮಾನ್ಯಾ, ತಮ್ಮ ಫೋಟೋವನ್ನೂ ಹಂಚಿಕೊಂಡಿದ್ದಾರೆ. ಇದ್ದಕ್ಕಿದ್ದಂತೆ ಕಾಲು ನೋವು ಕಾಣಿಸಿಕೊಂಡು ತಾವು ಅನುಭವಿಸಿದ ಕಷ್ಟ, ಕೊವಿಡ್​ ಭಯದ ಮಧ್ಯೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರೀತಿ, ವೈದ್ಯರು ನೀಡಿದ ಭರವಸೆ, ಸದ್ಯ ಚೇತರಿಸಿಕೊಳ್ಳುತ್ತಿರುವ ಬಗ್ಗೆ ಹೇಳಿಕೊಂಡಿರುವ ಮಾನ್ಯಾರ ಪೋಸ್ಟ್​ಗೆ ಅನೇಕರು ಪ್ರತಿಕ್ರಿಯಿಸಿ ಬೇಗ ಚೇತರಿಸಿಕೊಳ್ಳಿ ಎಂದು ಹಾರೈಸಿದ್ದಾರೆ.

ಪಾರ್ಶ್ವವಾಯು ಕಾರಣದಿಂದ ಕಳೆದ ಮೂರು ವಾರಗಳಿಂದ ನನಗೆ ಸರಿಯಾಗಿ ಕುಳಿತುಕೊಳ್ಳಲು ಆಗುತ್ತಿಲ್ಲ. ನಡೆದಾಡಲು, ನಿಲ್ಲಲು, ಮಲಗಲು ಸಾಧ್ಯವೇ ಇಲ್ಲ ಎಂಬಷ್ಟು ನೋವು ಶುರುವಾಯಿತು. ಇನ್ನು ತಡೆದುಕೊಳ್ಳಲು ಸಾಧ್ಯವೇ ಇಲ್ಲ ಎಂಬಂತಾಗಿ ತುರ್ತು ಚಿಕಿತ್ಸೆ ಪಡೆಯಲು ಮುಂದಾದೆ. ಇದೀಗ  ಸ್ಟಿರಾಯ್ಡ್​​ ಇಂಜೆಕ್ಷನ್​ ಪಡೆದ ಕಾರಣ ಕೊಂಚ ಸುಧಾರಣೆ ಕಾಣಿಸುತ್ತಿದೆ. ಕೊವಿಡ್​ ಭಯ ಬೇರೆ ಇದ್ದಿದ್ದರಿಂದ ನಾನು ಒಂಟಿಯಾಗಿ ಆಸ್ಪತ್ರೆಯಲ್ಲಿ ಇರಬೇಕಾಯಿತು. ಯಾರಿಗೂ ಒಳಗೆ ಪ್ರವೇಶ ಇರಲಿಲ್ಲವಾದ್ದರಿಂದ ತುಂಬಾ ಕಷ್ಟದಲ್ಲಿ ದಿನ ಕಳೆದಿದ್ದೇನೆ. ಈಗ ಆ ಕಷ್ಟಗಳ ನಂತರ ತುಸು ಚೇತರಿಕೆ ಕಾಣುತ್ತಿದ್ದು, ಮೊದಲಿನಂತಾಗುವ ವಿಶ್ವಾಸ ಮರಳಿದೆ ಎಂದು ಹೇಳಿದ್ದಾರೆ.

ಇದೀಗ ನಾನು ನನ್ನಲ್ಲಿನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುತ್ತಿದ್ದೇನೆ. ಪಾರ್ಶ್ವವಾಯುವಿನ ಲಕ್ಷಣ ಕಾಣಿಸಿಕೊಂಡಾಗ ಮೊದಲಿನಂತೆ ಡ್ಯಾನ್ಸ್​ ಮಾಡಲು ಇನ್ನೆಂದೂ ಸಾಧ್ಯವಾಗುವುದಿಲ್ಲ ಎಂದು ಬೇಸರಗೊಂಡಿದ್ದೆ. ಆದರೆ, ವೈದ್ಯರು ನಿಧಾನವಾಗಿ ಸರಿಹೋಗುವ ಭರವಸೆ ನೀಡಿದ್ದಾರೆ. ಕಳೆದ ಮೂರು ವಾರಗಳಿಂದ ನನ್ನ ಬದುಕೇ ಬೇರೆ ರೀತಿ ಆಗಿಬಿಟ್ಟಿದೆ. ನನಗೆ ಶಕ್ತಿ ತುಂಬಿದ ಆ ದೇವರಿಗೆ ಆಭಾರಿ. ನನ್ನ ಕುಟುಂಬದವರಿಗೆ, ಆಪ್ತರಿಗೆ, ಸ್ನೇಹಿತರಿಗೆ ಹಾಗೂ ನನಗಾಗಿ ಬೇಡಿಕೊಂಡ ನನ್ನ ಎಲ್ಲಾ ಅಭಿಮಾನಿಗಳಿಗೆ ಚಿರಋಣಿ ಎಂದು ಹೇಳಿಕೊಂಡಿದ್ದಾರೆ.

ಬದುಕು ಯಾವಾಗಲೂ ಸುಲಭವಾಗಿಯೇ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಕಷ್ಟಗಳು ಎದುರಾದಾಗ ಧೃತಿಗೆಡದೆ ಹೋರಾಡಬೇಕು ಎಂದು ಇನ್​ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. ನಟಿ ಮಾನ್ಯಾ, ವಿಷ್ಣುವರ್ಧನ್ ಅಭಿನಯದ ವರ್ಷ, ದರ್ಶನ್ ಅಭಿನಯದ ಶಾಸ್ತ್ರಿ ಹಾಗೂ ಶ್ರೀಮುರಳಿ ಅಭಿನಯದ ಶಂಭು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

View this post on Instagram

A post shared by Manya (@manya_naidu)

View this post on Instagram

A post shared by Manya (@manya_naidu)

View this post on Instagram

A post shared by Manya (@manya_naidu)

ಇದನ್ನೂ ಓದಿ:

ಸಲ್ಮಾನ್​ ಖಾನ್​ಗೆ ಧನ್ಯವಾದ ಹೇಳಿದ ರಾಖಿ ಸಾವಂತ್; ಕಾರಣವೇನು ಗೊತ್ತಾ?

ಮದುವೆಯಲ್ಲಿ ಪಾಲ್ಗೊಳ್ಳಲು ಬಂದ ಐಶ್ವರ್ಯಾ ರೈ ಕುಟುಂಬ; ಭರ್ಜರಿ ಡಾನ್ಸ್​ ವಿಡಿಯೋ ವೈರಲ್

Published On - 11:39 am, Sat, 27 February 21

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?