ಡಾಲಿ ಧನಂಜಯ್ ಜೊತೆ ತೋತಾಪುರಿ ಚಿತ್ರದಲ್ಲಿ ಸುಮನ್ ರಂಗನಾಥ್ 3 ವಿಭಿನ್ನ ಲುಕ್!

ಇತ್ತೀಚೆಗೆ ಮೈಸೂರಿನಲ್ಲಿ ಶೂಟಿಂಗ್ ನಡೆಸಿದ್ದ ತೋತಾಪುರಿ ಚಿತ್ರತಂಡ ಸದ್ಯ ಈಗ ಕೇರಳದಲ್ಲಿ ಶೂಟಿಂಗ್ ಮುಂದುವರೆಸಿದೆ. ಅದರ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇನ್ನು ಮುಖ್ಯಪಾತ್ರದಲ್ಲಿ ನವರಸ ನಾಯಕ ಜಗ್ಗೇಶ್ ಕಾಣಿಸಿಕೊಂಡ್ರೆ, ನಾಯಕಿಯಾಗಿ ಅಧಿತಿ ಪ್ರಭುದೇವ ಸ್ಕ್ರೀನ್​ನಲ್ಲಿ ಮಿಂಚಲಿದ್ದಾರೆ.

  • TV9 Web Team
  • Published On - 13:26 PM, 26 Feb 2021
ಡಾಲಿ ಧನಂಜಯ್ ಜೊತೆ ತೋತಾಪುರಿ ಚಿತ್ರದಲ್ಲಿ ಸುಮನ್ ರಂಗನಾಥ್ 3 ವಿಭಿನ್ನ ಲುಕ್!
ಸುಮನ್ ರಂಗನಾಥ್​

ಸ್ಯಾಂಡಲ್​ವುಡ್​ನಲ್ಲಿ ಸದ್ದು ಮಾಡಿದ್ದ ನೀರ್ ದೋಸೆ ಚಿತ್ರದ ನಿರ್ದೇಶಕ ವಿಜಯ್ ಪ್ರಸಾದ್ ಮತ್ತು ನಾಯಕ ನಟ ಜಗ್ಗೇಶ್ ಈಗ ಮತ್ತೆ ತೋತಾಪುರಿ ತಿನ್ನಿಸಲು ರೆಡಿಯಾಗಿದ್ದಾರೆ. ಈ ಹಿಂದೆ ನೀರ್​ದೋಸೆಯಲ್ಲಿ ಅಭಿನಯಿಸಿದ್ದ ಕಲಾವಿದರೇ ಈ ಚಿತ್ರದಲ್ಲೂ ಕಾಣಿಸಿಕೊಂಡಿದ್ದು ಸುಮನ್ ರಂಗನಾಥ್​, ಡಾಲಿ ಧನಂಜಯ್ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಮೈಸೂರಿನಲ್ಲಿ ಶೂಟಿಂಗ್ ನಡೆಸಿದ್ದ ತೋತಾಪುರಿ ಚಿತ್ರತಂಡ ಸದ್ಯ ಈಗ ಕೇರಳದಲ್ಲಿ ಶೂಟಿಂಗ್ ಮುಂದುವರೆಸಿದೆ. ತೋತಾಪುರಿ ಚಿತ್ರದಲ್ಲಿ ಸುಮನ್ ರಂಗನಾಥ್ ಮುಖ್ಯ ಪಾತ್ರದಲ್ಲಿ 3 ವಿಭಿನ್ನವಾದ ಲುಕ್​ನಲ್ಲಿ ಡಾಲಿ ಧನಂಜಯ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಅದರ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇನ್ನು ಮುಖ್ಯ ಪಾತ್ರದಲ್ಲಿ ನವರಸ ನಾಯಕ ಜಗ್ಗೇಶ್ ಕಾಣಿಸಿಕೊಂಡ್ರೆ, ನಾಯಕಿಯಾಗಿ ಅದಿತಿ ಪ್ರಭುದೇವ ಸ್ಕ್ರೀನ್​ನಲ್ಲಿ ಮಿಂಚಲಿದ್ದಾರೆ.

ಕೇರಳದಲ್ಲಿ ಶೂಟಿಂಗ್ ಮುಗಿಸಿದ ತೋತಾಪುರಿ
ಇತ್ತೀಚೆಗೆ ವಿವಾದದ ಬಿರುಗಾಳಿಯಲ್ಲಿ ಸಿಲುಕಿ ನಲುಗಿ ಹೋಗಿದ್ದ ನವರಸ ನಾಯಕ ಜಗ್ಗೇಶ್​ ಕಾಂಟ್ರವರ್ಸಿಯ ಆರ್ಭಟದ ನಡುವೆಯೂ ಶೂಟಿಂಗ್​ನಲ್ಲಿ ಭಾಗಿಯಾಗಿ ವೃತ್ತಿಪರತೆ ಮೆರೆದಿದ್ದರು. ಈ ಹಿಂದೆ ಮೈಸೂರಿನಲ್ಲಿ ನಡೆದ ತೋತಾಪುರಿ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಜಗ್ಗೇಶ್ ಮದಮಗನಾಗಿ ಕಾಣಿಸಿಕೊಂಡಿದ್ದರು.

ಚಿತ್ರದಲ್ಲಿ ನಾಯಕಿ ಅದಿತಿ ಪ್ರಭುದೇವ ಮುಸ್ಲಿಂ ಯುವತಿಯ ಪಾತ್ರ ಮಾಡುತ್ತಿದ್ದಾರೆ. ಹಾಗೂ ನಟ ಜಗ್ಗೇಶ್ ಹಿಂದೂ ಪಾತ್ರಧಾರಿಯಾಗಿದ್ದಾರೆ. ಇವರಿಬ್ಬರೂ ಮದುವೆಯಾಗುವ ವಿವಾಹ ಸಮಾರಂಭದ ಚಿತ್ರೀಕರಣದ ಚಿತ್ರಗಳು ಕೆಲ ದಿನಗಳ ಹಿಂದೆ ವೈರಲ್ ಆಗಿದ್ದವು. ಸದ್ಯ ಈಗ ಚಿತ್ರತಂಡ ಕೇರಳದಲ್ಲಿ ಶೋಟಿಂಗ್ ಮುಗಿಸಿದೆ.

ನಟ ದರ್ಶನ್​ ಬಗ್ಗೆ ಜಗ್ಗೇಶ್​ ನೀಡಿದ್ದ ಹೇಳಿಕೆಗಳಿಂದ ಕೆರಳಿದ್ದ ‘ಯಜಮಾನ’ನ ಅಭಿಮಾನಿಗಳು ನವರಸ ನಾಯಕನಿಗೆ ಮುತ್ತಿಗೆ ಹಾಕಿ ಅವರು ಕ್ಷಮೆಯಾಚಿಸಿವುವವರೆಗೂ ದೊಡ್ಡ ಮಟ್ಟದ ವಿವಾದವೇ ಆಗಿಬಿಟ್ಟಿತ್ತು. ಇದೀಗ, ವಿವಾದದ ತೀವ್ರತೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಿದ್ದು ಈ ನಡುವೆ ಜಗ್ಗೇಶ್ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ.

totapuri film Shooting

ಸುಮನ್ ರಂಗನಾಥ್​, ಡಾಲಿ ಧನಂಜಯ್

totapuri film Shooting

ಸುಮನ್ ರಂಗನಾಥ್​

ಇದನ್ನೂ ಓದಿ: Darshan Interview | ಜಗ್ಗೇಶ್​ ವಿವಾದಕ್ಕೆ ತೆರೆ: ಅಭಿಮಾನಿಗಳ ಪರವಾಗಿ ಕ್ಷಮೆ ಕೇಳಿದ ನಟ ದರ್ಶನ್​