AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KGF Chapter 2: ಕೆಜಿಎಫ್ 2 ಬಗ್ಗೆ ಹೊರಬಂತು ರೋಚಕ ಸುದ್ದಿ; ಅಂಡರ್​ ವಾಟರ್​ ಶೂಟಿಂಗ್, ಫೈಟಿಂಗ್​ ಸೀನ್​ ಇತ್ಯಾದಿ, ಇತ್ಯಾದಿ

KGF 2 Under water Shooting: ಅದ್ದೂರಿಯಾಗಿ ಮೂಡಿಬಂದಿರೋ ಕೆಜಿಎಫ್​ 2 ದೃಶ್ಯಗಳನ್ನು ವಿಶೇಷ ಕ್ಯಾಮೆರಾಗಳನ್ನ ಬಳಸಿ ಅತ್ಯದ್ಭುತವಾಗಿ ಶೂಟ್​ ಮಾಡಲಾಗಿದೆಯಂತೆ. ಸಿನಿಪ್ರಿಯರು ಬಯಸುವುದಕ್ಕಿಂತ ಒಂದು ಪಟ್ಟು ಹೆಚ್ಚು ಅದ್ಭುತವಾಗಿಯೇ ಕೆಜಿಎಫ್2 ನಲ್ಲಿ ರೋಚಕ ದೃಶ್ಯಗಳು ಇರಲಿವೆಯಂತೆ.

KGF Chapter 2: ಕೆಜಿಎಫ್ 2 ಬಗ್ಗೆ ಹೊರಬಂತು ರೋಚಕ ಸುದ್ದಿ; ಅಂಡರ್​ ವಾಟರ್​ ಶೂಟಿಂಗ್, ಫೈಟಿಂಗ್​ ಸೀನ್​ ಇತ್ಯಾದಿ, ಇತ್ಯಾದಿ
ಕೆಜಿಎಫ್​-2 ಪೋಸ್ಟರ್
Skanda
| Edited By: |

Updated on: Feb 27, 2021 | 5:46 PM

Share

ಈಗಾಗಲೇ ಟ್ರೇಲರ್​ ಮೂಲಕ ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಸದ್ದು ಮಾಡಿರುವ ಕೆಜಿಎಫ್​ 2 (KGF Chapter 2) ಸಿನಿಮಾ ಬಿಡುಗಡೆಗೆ ದೇಶ, ಭಾಷೆಯ ಗಡಿ ಮೀರಿ ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದಾರೆ. ಕೆಜಿಎಫ್​ 1 ಹುಟ್ಟುಹಾಕಿದ ಸಂಚಲನದ ಅಲೆಯಲ್ಲಿಯೇ ಇನ್ನೂ ತೇಲುತ್ತಿರುವ ಅಭಿಮಾನಿಗಳಿಗೆ ಎರಡನೇ ಭಾಗ ಅಕ್ಷರಶಃ ಹಬ್ಬದ ಸಂಭ್ರಮವನ್ನು ಹುಟ್ಟುಹಾಕಲಿದೆ.

ಕೆಜಿಎಫ್​ನಲ್ಲಿ ಗರುಡನನ್ನು ಸಂಹಾರ ಮಾಡಿದ ರಾಕಿ, ಮುಂದೆ ನರಾಚಿಯನ್ನ ವಶಪಡಿಸಿಕೊಂಡು ರಾಕಿಭಾಯ್ ಆಗ್ತಾರಾ? ಈ ನಿಟ್ಟಿನಲ್ಲಿ ಕೆಜಿಎಫ್ ಸುಲ್ತಾನ್ ಯಾರನ್ನೆಲ್ಲಾ ಎದುರಿಸಬೇಕು? ಎಂತೆಂತಹ ಸವಾಲುಗಳು ರಾಕಿ ಮುಂದೆ ಬರಲಿದೆ ಎನ್ನುವುದೇ ಕೆಜಿಎಫ್ 2 ಸಿನಿಮಾದ ತಿರುಳು ಎನ್ನಲಾಗುತ್ತಿದೆ. ಇದೆಲ್ಲವನ್ನೂ ನಿರ್ದೇಶಕ ಪ್ರಶಾಂತ್ ನೀಲ್ ಎಷ್ಟು ರಸವತ್ತಾಗಿ ಕಟ್ಟಿಕೊಡಲಿದ್ದಾರೆ ಎಂಬುವುದನ್ನು ನೋಡಲಿಕ್ಕಾಗಿ ಈಗ ಸಂಪೂರ್ಣ ಭಾರತೀಯ ಚಿತ್ರರಂಗ ಹಾಗೂ ಚಿತ್ರಾಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ಈಗಾಗ್ಲೆ ಕೆಜಿಎಫ್ 2 ಹವಾ ಶುರುವಾಗಿದ್ದು, ತೆಲುಗಿನಲ್ಲಿ ಚಿತ್ರದ ರೈಟ್ಸ್ ಬರೋಬ್ಬರಿ ₹65ಕೋಟಿಗೆ ಸೇಲ್ ಆಗಿದೆ. ಜುಲೈ 16ಕ್ಕೆ ತೆರೆಗೆ ಬರೋದಕ್ಕೆ ರೆಡಿ ಆಗಿರೋ ಕೆಜಿಎಫ್ 2 ಸಿನಿಮಾದ ಬಗ್ಗೆ ಇದೀಗ ಇನ್ನೊಂದು ಅಚ್ಚರಿಯ ವಿಷಯ ಹೊರಬಿದ್ದಿದೆ. ಕೆಜಿಎಫ್ 2 ಸಿನಿಮಾವನ್ನು ಮೊದಲ ಭಾಗಕ್ಕಿಂತ ಯಾವುದೇ ರೀತಿಯಲ್ಲಿ ಕಡಿಮೆಯಿಲ್ಲದ ರೀತಿಯಲ್ಲಿ ಚಿತ್ರೀಕರಿಸಲಾಗಿದೆಯಂತೆ. ಅದ್ದೂರಿಯಾಗಿ ಮೂಡಿಬಂದಿರೋ ಕೆಜಿಎಫ್​ 2 ದೃಶ್ಯಗಳನ್ನು ವಿಶೇಷ ಕ್ಯಾಮರಾಗಳನ್ನ ಬಳಸಿ ಅತ್ಯದ್ಭುತವಾಗಿ ಶೂಟ್​ ಮಾಡಲಾಗಿದೆಯಂತೆ. ಸಿನಿಪ್ರಿಯರು ಬಯಸುವುದಕ್ಕಿಂತ ಒಂದು ಪಟ್ಟು ಹೆಚ್ಚು ಅದ್ಭುತವಾಗಿಯೇ ಕೆಜಿಎಫ್2 ನಲ್ಲಿ ರೋಚಕ ದೃಶ್ಯಗಳು ಇರಲಿವೆಯಂತೆ.

ಕೆಜಿಎಫ್ 2 ಸಿನಿಮಾದಲ್ಲಿರಲಿದೆ ಅಂಡರ್‌ವಾಟರ್ ಸೀನ್ ಕೆಜಿಎಫ್‌ 2ನಲ್ಲಿ ಅಂಡರ್ ವಾಟರ್ ಸೀನ್ ಕೂಡ ಇರಲಿದೆ ಅನ್ನೋದು ಇದೀಗ ಸಿನಿಮಾ ಅಡ್ಡಾದಿಂದ ಬಂದಿರೋ ಹೊಚ್ಚಹೊಸ ಮಾಹಿತಿ. ಈ ಚಿತ್ರದಲ್ಲಿ ಅಂಡರ್ ವಾಟರ್ ಸೀನ್ ಚಿತ್ರೀಕರಿಸಲಾಗಿದ್ದು, ಫೈಟ್ ಸೀಕ್ವೆನ್ಸ್ ಸಹ ಇರಲಿದೆಯಂತೆ. ಈ ಬಗ್ಗೆ ಸ್ವತಃ ಅಂಡರ್‌ವಾಟರ್ ಫಿಲ್ಮ್ ಸರ್ವಿಸ್ ಟ್ವೀಟ್​ ಮಾಡಿದೆ. ಆದ್ರೆ, ಈ ದೃಶ್ಯ ಯಾರ ಯಾರ ನಡುವೆ ಬರುತ್ತೆ ಅನ್ನೋದು ಮಾತ್ರ ಬಹಿರಂಗವಾಗಿಲ್ಲ. ಆದ್ರೆ, ಈ ಸುದ್ದಿ ಹೊರಬಿದ್ದ ನಂತರ ಕೆಜಿಎಫ್​ 2 ಮೇಲಿರುವ ಕುತೂಹಲ ಇನ್ನಷ್ಟು ಹೆಚ್ಚಾಗಿದ್ದು, ಅಭಿಮಾನಿಗಳಂತೂ ಉತ್ಸಾಹದ ಕಡಲಲ್ಲಿ ತೇಲುತ್ತಿರುವುದಂತೂ ಸತ್ಯ.

ಇದನ್ನೂ ಓದಿ:

KGF Chapter 2: ಭಾರಿ ಹಲ್ ಚಲ್ ಸೃಷ್ಟಿಸಿದ KGF 2-ಟ್ರೇಲರ್​ನಿಂದಲೇ ಹವಾ ಕ್ರಿಯೇಟ್ ಮಾಡಿದ ರಾಕಿಭಾಯ್, ಟಾಲಿವುಡ್​ಗೆ ಅತಿಹೆಚ್ಚು ಮೊತ್ತಕ್ಕೆ ರೈಟ್ಸ್ ಸೇಲ್

ಜುಲೈ 16 ಅನ್ನು ನ್ಯಾಷನಲ್ ಹಾಲಿಡೇ ಆಗಿ ಘೋಷಿಸಿ -ಪ್ರಧಾನಿ ಮೋದಿಗೆ ಯಶ್ ಅಭಿಮಾನಿಗಳ​ ಮನವಿ

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?