ಮತ್ತೆ ಗಾಂಧಿನಗರಕ್ಕೆ ರಾಗಿಣಿ ಕಂಬ್ಯಾಕ್.. ಕರ್ವ 3 ಸಿನಿಮಾಗೆ ಬಣ್ಣ ಹಚ್ಚಲಿದ್ದಾರೆ ತುಪ್ಪದ ಬೆಡಗಿ

ಸ್ಯಾಂಡಲ್‌ವುಡ್‌ನ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸಿನಿಮಾ ಕರಿಯರ್‌ ಮುಗಿದೇ ಹೋಯ್ತಾ.. ಬಣ್ಣದ ಲೋಕಕ್ಕೆ ಕಾಲಿಟ್ಟು ಕಮಾಲ್‌ ಮಾಡೋಕೆ ಬ್ರೇಕ್ ಬಿತ್ತಾ.. ಡ್ರಗ್ಸ್‌ ಕೇಸ್‌ನ ನಂತ್ರ ರಾಗಿಣಿಗೆ ಆಫರ್‌ ಸಿಗುತ್ತಾ.. ಇಂತಹ ಹತ್ತಾರು ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ. ಅದೇನು ಅಂದ್ರೆ ಸದ್ಯ ರಾಗಿಣಿ ಗಾಂಧಿನಗರಕ್ಕೆ ಮರಳೋ ಸೂಚನೆ ಕೊಟ್ಟಿದ್ದಾರೆ.

  • TV9 Web Team
  • Published On - 7:43 AM, 26 Feb 2021
ಮತ್ತೆ ಗಾಂಧಿನಗರಕ್ಕೆ ರಾಗಿಣಿ ಕಂಬ್ಯಾಕ್.. ಕರ್ವ 3 ಸಿನಿಮಾಗೆ ಬಣ್ಣ ಹಚ್ಚಲಿದ್ದಾರೆ ತುಪ್ಪದ ಬೆಡಗಿ
ರಾಗಿಣಿ ದ್ವಿವೇದಿ

ತುಪ್ಪ ಬೇಕಾ ತುಪ್ಪ ಅಂತ ತಮ್ಮ ಗ್ಲಾಮರಸ್‌ ಲುಕ್‌ನಿಂದ್ಲೇ ಗಾಂಧಿನಗರದಲ್ಲಿ ಸೊಂಟ ಬಳುಕಿಸಿ ಕಮಾಲ್‌ ಮಾಡಿದ್ದ ರಾಗಿಣಿ ದ್ವಿವೇದಿ ಡ್ರಗ್ಸ್‌ ಕೇಸ್‌ನಲ್ಲಿ ಜೈಲು ಸೇರಿ ವಾಪಸ್ ಆಗಿದ್ದಾರೆ. ಸೆಪ್ಟೆಂಬರ್‌ 4ರಂದು ರಾಗಿಣಿ ಜೈಲು ಪಾಲಾಗಿ ಬೇಲ್‌ ಮೇಲೆ ಹೊರಗಿರೋ ರಾಗಿಣಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದ್ರೀಗ ರಾಗಿಣಿ ಏನ್‌ ಮಾಡ್ತಿದ್ದಾರೆ. ಗಾಂಧಿನಗರಕ್ಕೆ ಕಂಬ್ಯಾಕ್‌ ಮಾಡೋದ್ಯಾವಾಗ ಅನ್ನೋದಕ್ಕೆ ಉತ್ತರ ಸಿಕ್ಕಿದೆ.

144 ದಿನರ ಸೆರವಾಸದಿಂದ ಮುಕ್ತಿ ಪಡೆದು ಹೊರಬಂದ ರಾಗಿಣಿ, ಇತ್ತೀಚೆಗಷ್ಟೇ ತಾವು ಎದುರಿಸಿರೋ ಸಂಕಷ್ಟ ಹೇಳಿಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಅಳಲು ತೋಡಿಕೊಂಡು ಕಣ್ಣೀರಿಟ್ಟಿದ್ರು. ಜೊತೆಗೆ ಸದ್ಯದಲ್ಲಿಯೇ ಬಣ್ಮದ ಲೋಕಕ್ಕೆ ಮರಳೋ ಸೂಚನೆ ಕೂಡ ಕೊಟ್ಟಿದ್ರು. ಸದ್ಯ ಅಂದುಕೊಂಡಂತೆ ಮತ್ತೆ ಮೇಕಪ್‌ ಹಾಕೋದಕ್ಕೆ ರಾಗಿಣಿ ದ್ವಿವೇದಿ ರೆಡಿಯಾಗಿದ್ದಾರೆ.

ಅಂದ್ಹಾಗೆ ಸದ್ಯ ರಾಗಿಣಿ, ಏಪ್ರಿಲ್‌ನಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ಕಂಬ್ಯಾಕ್‌ ಮಾಡೋದು ಪಕ್ಕಾ ಆಗಿದೆ. ಕರ್ವ 3 ಸಿನಿಮಾ ಮೂಲಕ ಮೇಕಪ್ ಹಾಕಿ ಗಾಂಧಿನಗರಕ್ಕೆ ಮರಳಿ ಸೊಂಟ ಬಳುಕಿಸೋದು ಪಕ್ಕಾ ಆಗಿದೆ. ಅಂದ್ಹಾಗೆ ವಿಶಾಲ್ ಶೇಖರ್‌ ಆ್ಯಕ್ಷನ್‌ ಕಟ್‌ ಹೇಳ್ತಿರೋ ಸಿನಿಮಾವನ್ನ ದಿಯಾ ನಿರ್ಮಾಪಕ ಕೃಷ್ಣ ಚೈತನ್ಯ ನಿರ್ಮಾಣ ಮಾಡ್ತಿರೋ ಚಿತ್ರದಲ್ಲಿ ರಾಗಿಣಿ ಆ್ಯಕ್ಟ್ ಮಾಡಲಿದ್ದಾರೆ.

ಈಗಾಗಲೇ ಮಾತುಕತೆ ಮಾಡಿರೋ ಚಿತ್ರತಂಡ ಡ್ರಗ್ಸ್‌ ಪ್ರಕರಣ ನಂತ್ರ ರಾಗಿಣಿಯನ್ನ ಗಾಂಧಿನಗರಕ್ಕೆ ಕರೆ ತರೋದಕ್ಕೆ ಮಾಸ್ಟರ್‌ ಪ್ಲ್ಯಾನ್‌ ರೆಡಿ ಮಾಡಿದೆ. ವಿಶೇಷ ಅಂದ್ರೆ ಕರ್ವ 3 ನಲ್ಲಿ ರಾಗಿಣಿ ಪಾತ್ರ ತುಂಬಾನೇ ಸ್ಪೆಷಲ್ ಆಗಿರುತ್ತಂತೆ. ಈ ಹಿಂದಿನಂತೆ ಗ್ಲಾಮರಸ್‌ ಆಗಿರಲ್ಲ ರಾಗಿಣಿ ಪಾತ್ರ. ಆದ್ರೆ ರವಿ ವರ್ಮಾನ ಕುಂಚದಲ್ಲರಳಿದ ಬೊಂಬೆಯಂಥಾ ಪಾತ್ರದಲ್ಲಿ ನಟಿಸಲಿದ್ದಾರಂತೆ. ಗ್ಲಾಮರಸ್ ಪಾತ್ರ ಒಪ್ಪಿ ಪಡ್ಡೆಗಳ ನಿದ್ದೆ ಕೆಡಿಸೋ ಪಾತ್ರ ಅಲ್ಲ.. ಬದಲಿಗೆ ಒಂದು ವಿಶೇಷ ಪಾತ್ರದ ಮೂಲಕ ಗಾಂಧಿನಗರಕ್ಕೆ ಕಾಲಿಡೋದು ಪಕ್ಕಾ ಆಗಿದೆ.

ಜೈಲಿನಿಂದ ಬಿಡುಗಡೆಯಾದ ಆರಂಭದಲ್ಲಿ ನಟಿ ರಾಗಿಣಿ ದ್ವಿವೇದಿ ಅಕ್ಕಿಪೇಟೆ ದರ್ಗಾಗೆ ಭೇಟಿಕೊಟ್ಟ ಅನ್ನದಾನ ಮಾಡಿಸಿದರು. ಈ ವೇಳೆ, ಟಿವಿ9 ಜೊತೆ ಮಾತನಾಡಿದ ನಟಿ, ನನ್ನ ಅಮ್ಮ, ಅಪ್ಪನ ಬೆಂಬಲದಿಂದ ಸ್ವಲ್ಪ ಆರಾಮಾಗಿ ಇದ್ದೇನೆ. ನನಗೆ ನನ್ನ ಕುಟುಂಬದ ಸಹಕಾರ ತುಂಬಾ ಇದೆ ಎಂದು ಹೇಳಿದರು. ಜೊತೆಗೆ, ಈಗ ಸಿನಿಮಾ ಆಫರ್ ಬರುತ್ತಿವೆ, ಕಥೆಗಳನ್ನ ಕೇಳುತ್ತಿದ್ದೇನೆ. ಈ ತಿಂಗಳಲ್ಲೇ ಶೂಟಿಂಗ್ ಶುರುವಾಗುತ್ತಿದೆ ಎಂದು ಸಹ ಹೇಳಿದ್ದರು.

ಇದನ್ನೂ ಓದಿ: Ragini Dwivedi: ಅಭಿಮಾನಿಗಳ ಮೆಸೇಜ್​ಗಳನ್ನು ನೋಡಿ Live ​ನಲ್ಲೇ ಕಣ್ಣೀರಿಟ್ಟ ರಾಗಿಣಿ ದ್ವಿವೇದಿ