Yuvarathnaa Song: ಯುವರತ್ನ ಕಮಾಲ್.. ‘ಊರಿಗೊಬ್ಬ ರಾಜಾ.. ಆ ರಾಜಂಗೊಬ್ಬಳು ರಾಣಿ’ ಹಾಡು ಬಿಡುಗಡೆ; ಪವರ್ಸ್ಟಾರ್ ಪವರ್ಫುಲ್ ಸ್ಟೆಪ್
Oorigobba Raaja ಹಾಡಿನಲ್ಲಿ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಭರ್ಜರಿ ಸ್ಟೆಪ್ ಹಾಕಿದ್ದರೆ, ನಾಯಕಿ ಸಯೇಷಾ ಸೆಹಗಲ್ ಕೂಡ ಅಷ್ಟೇ ಮಿಂಚಿದ್ದಾರೆ.
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ (Puneeth Rajkumar) ಅಭಿನಯದ, ಬಹುನಿರೀಕ್ಷಿತ ಸಿನಿಮಾ ಯುವರತ್ನ (Yuvarathnaa)ದ ‘ಊರಿಗೊಬ್ಬ ರಾಜಾ, ಆ ರಾಜಂಗೊಬ್ಬಳು ರಾಣಿ’ ಹಾಡು ಇಂದು ಬಿಡುಗಡೆಯಾಗಿದೆ. ಹೊಂಬಾಳೆ ಫಿಲ್ಮ್ಸ್ನ ಯೂಟ್ಯೂಬ್ ಚಾನೆಲ್ನಲ್ಲಿ, 3.40 ಸೆಕೆಂಡ್ಗಳ ಹಾಡು ಬಿಡುಗಡೆಯಾಗಿದ್ದು, ಪವರ್ ಸ್ಟಾರ್ ಪುನೀತ್ ಅವರು ಅಷ್ಟೇ ಪವರ್ಫುಲ್ ಆಗಿ ಸ್ಟೆಪ್ ಹಾಕಿದ್ದಾರೆ. ಊರಿಗೊಬ್ಬ ರಾಜ ಹಾಡಿನ ಸಾಹಿತ್ಯವನ್ನು ಚಿತ್ರ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರೇ ರಚಿಸಿದ್ದು, ತಮನ್.ಎಸ್ ಸಂಗೀತ ನೀಡಿದ್ದಾರೆ. ರಮ್ಯಾ ಬೆಹರಾ ಜೊತೆಗೆ ಪುನೀತ್ ರಾಜ್ಕುಮಾರ್ ಅವರೇ ಧ್ವನಿಯಾಗಿದ್ದು ವಿಶೇಷ.
ಇನ್ನು ಈ ಊರಿಗೊಬ್ಬ ರಾಜ ಹಾಡಿನಲ್ಲಿ ಪುನೀತ್ ರಾಜಕುಮಾರ್ ಜತೆಗೆ ನಾಯಕಿ ಸಯೇಷಾ ಸೆಹಗಲ್ ಕೂಡ ಅಷ್ಟೇ ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ಯುವರತ್ನ (Yuvarathnaa) ಏಪ್ರಿಲ್ 1ರಂದು ಬಿಡುಗಡೆಯಾಗಲಿದ್ದು, ಇಂದು ಕನ್ನಡ ಮತ್ತು ತೆಲುಗಿನಲ್ಲಿ ಊರಿಗೊಬ್ಬ ರಾಜ, ಆ ರಾಜಂಗೊಬ್ಬಳು ರಾಣಿ, ಇಬ್ರೂ ಮದುವೆ ಆದ್ರೆ ಹಾಲು-ಜೇನು ಹಾಡು ರಿಲೀಸ್ ಆಗಿದೆ. ಜಾನಿಯವರ ಕೊರಿಯಾಗ್ರಫಿ ಕರಾಮತ್ತು ಇದರಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಕನ್ನಡದಲ್ಲಿ ಹಾಡು ಬಿಡುಗಡೆಯಾಗಿ ಅರ್ಧಗಂಟೆಯಲ್ಲೇ ಲಕ್ಷಕ್ಕೂ ಅಧಿಕ ವೀವ್ಸ್ ಕಂಡಿದೆ (37 ನಿಮಿಷದಲ್ಲಿ 141,491 ವೀವ್ಸ್). ತೆಲುಗು ಭಾಷೆಯಲ್ಲೂ ಊರಿಕೊಕ್ಕ ರಾಜಾ ಬಿಡುಗಡೆಯಾಗಿದೆ. ಕನ್ನಡ ಹಾಡು ರಿಲೀಸ್ ಆದ ಬಳಿಕ ಬಿಡುಗಡೆಯಾಗಿದ್ದು, ಇದೂ ಕೂಡ 50 ನಿಮಿಷದಲ್ಲಿ 60 ಸಾವಿರಕ್ಕೂ ಹೆಚ್ಚು ವೀವ್ಸ್ ಪಡೆದಿದೆ.
ಇದನ್ನೂ ಓದಿ: ಯುವ ಪೀಳಿಗೆಯನ್ನು ಸೆಳೆಯುವ ಯುವರತ್ನ ಚಿತ್ರದ ‘ಪವರ್ ಆಫ್ ಯೂತ್’ ಹಾಡಿನ ಪ್ರೊಮೊ ರಿಲೀಸ್
Published On - 4:03 pm, Thu, 25 February 21