ಆಸ್ಕರ್​ ರೇಸ್​ನಲ್ಲಿ ಕನ್ನಡಿಗ ಗೋಪಿನಾಥ್​ ಜೀವನದ ಕಥೆ!

ಸುಧಾ ಕೊಂಗರ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ, ಸೂರ್ಯ, ಪರೇಶ್​ ರಾವಲ್​, ಅಪರ್ಣಾ, ಊರ್ವರ್ಶಿ ಮೊದಲಾದವರು ಬಣ್ಣ ಹಚ್ಚಿದ್ದಾರೆ.

  • TV9 Web Team
  • Published On - 21:41 PM, 26 Jan 2021
ಆಸ್ಕರ್​ ರೇಸ್​ನಲ್ಲಿ ಕನ್ನಡಿಗ ಗೋಪಿನಾಥ್​ ಜೀವನದ ಕಥೆ!
ಸೂರರೈ ಪೊಟ್ರು ಪೋಸ್ಟರ್

ಕನ್ನಡಿಗ ಗೋಪಿನಾಥ್​ ಜೀವನದ ಕಥೆ ಸೂರರೈ ಪೊಟ್ರು ಸಿನಿಮಾ ಚಿತ್ರ ಈಗ ಆಸ್ಕರ ರೇಸ್​ಗೆ ಎಂಟ್ರಿ ಕೊಟ್ಟಿದೆ. ಸಾಮಾನ್ಯ ವಿಭಾಗದಲ್ಲಿ ಸೂರರೈ ಪೊಟ್ರು ಆಸ್ಕರ್​ ಪ್ರವೇಶಿಸಿದೆ. ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಹಿನ್ನೆಲೆ ಸಂಗೀತ ಹಾಗೂ ಇತರ ವಿಭಾಗಗಳಲ್ಲಿ ಈ ಸಿನಿಮಾ ಆಸ್ಕರ್​ ವಿಭಾಗ ಪ್ರವೇಶಿಸಿದೆ .

ಕೊರೊನಾ ವೈರಸ್​ ಹಿನ್ನೆಲೆಯಲ್ಲಿ ಸೂರರೈ ಪೊಟ್ರು ಅಮೆಜಾನ್​ ಪ್ರೈಮ್​ನಲ್ಲಿ ರಿಲೀಸ್​ ಆಗಿತ್ತು. ಒಟಿಟಿಯಲ್ಲಿ ರಿಲೀಸ್​ ಆಗಿದ್ದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತ್ತು. ಈ ಸಿನಿಮಾ ವಿಕ್ಷಣೆ ಮಾಡಿದ ಅಕಾಡೆಮಿ ಸ್ಕ್ರೀನಿಂಗ್​ ಸದಸ್ಯರು ಆಸ್ಕರ್​ಗೆ ನಾಮಿನೇಷನ್​ ಮಾಡಿದ್ದಾರೆ.

ಸುಧಾ ಕೊಂಗರ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ, ಸೂರ್ಯ, ಪರೇಶ್​ ರಾವಲ್​, ಅಪರ್ಣಾ, ಊರ್ವರ್ಶಿ ಮೊದಲಾದವರು ಬಣ್ಣ ಹಚ್ಚಿದ್ದಾರೆ.

ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿ ಟ್ರೋಲ್ ಆದ ಜೊತೆ ಜೊತೆಯಲಿ ನಟಿ ಮೇಘಾ ಶೆಟ್ಟಿ