AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪರಾಶಕ್ತಿ’ ಕಳಪೆ ಪ್ರದರ್ಶನ, ವಿಜಯ್ ಅಭಿಮಾನಿಗಳ ಮೇಲೆ ನಿರ್ದೇಶಕಿ ಆರೋಪ

Thalapathy Vijay fans: ‘ಜನ ನಾಯಗನ್’ ಎಂಬ ಕಮರ್ಶಿಯಲ್ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡದೆ ಸಿಬಿಎಫ್​​ಸಿ ಸತಾಯಿಸುತ್ತಿದ್ದು, ಪ್ರಕರಣ ಈಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ‘ಜನ ನಾಯಗನ್’ ಜೊತೆಗೆ ಸ್ಪರ್ಧೆಗೆ ಬಿದ್ದಿದ್ದ ‘ಪರಾಶಕ್ತಿ’ ಸಿನಿಮಾ ಈಗಾಗಲೇ ನಿಗದಿತ ದಿನಾಂಕಕ್ಕೆ ಬಿಡುಗಡೆ ಆಗಿದೆ. ಆದರೆ ಸಿನಿಮಾದ ಬಗ್ಗೆ ನೆಗೆಟಿವ್ ಕಮೆಂಟ್​​ಗಳು ಹರಿದಾಡುತ್ತಿವೆ. ಆದರೆ ಇದಕ್ಕೆ ವಿಜಯ್ ಫ್ಯಾನ್ಸ್ ಕಾರಣ ಎಂದು ಸಿನಿಮಾ ತಂಡ ಆರೋಪ ಮಾಡುತ್ತಿದೆ. ಸ್ವತಃ ನಿರ್ದೇಶಕಿ ಸುಧಾ ಕೊಂಗರ ಅವರೇ ಸ್ವತಃ ಪರೋಕ್ಷ ಆರೋಪ ಮಾಡಿದ್ದಾರೆ.

‘ಪರಾಶಕ್ತಿ’ ಕಳಪೆ ಪ್ರದರ್ಶನ, ವಿಜಯ್ ಅಭಿಮಾನಿಗಳ ಮೇಲೆ ನಿರ್ದೇಶಕಿ ಆರೋಪ
Sudha Kongara
ಮಂಜುನಾಥ ಸಿ.
|

Updated on: Jan 14, 2026 | 12:05 PM

Share

ತಮಿಳುನಾಡಿನಲ್ಲಿ ಮತ್ತೆ ಸಿನಿಮಾ (Cinema) ರಾಜಕೀಯ ಭುಗಿಲೆದ್ದಿದೆ. ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿರುವುದು ಸಾಮಾನ್ಯರ ಕಣ್ಣಿಗೆ ಸ್ಪಷ್ಟವಾಗಿ ಕಾಣುತ್ತಿದೆ. ಸಾಮಾನ್ಯ ಕಮರ್ಶಿಯಲ್ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡದೆ ಸಿಬಿಎಫ್​​ಸಿ ಸತಾಯಿಸುತ್ತಿದ್ದು, ಪ್ರಕರಣ ಈಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ‘ಜನ ನಾಯಗನ್’ ಜೊತೆಗೆ ಸ್ಪರ್ಧೆಗೆ ಬಿದ್ದಿದ್ದ ‘ಪರಾಶಕ್ತಿ’ ಸಿನಿಮಾ ಈಗಾಗಲೇ ನಿಗದಿತ ದಿನಾಂಕಕ್ಕೆ ಬಿಡುಗಡೆ ಆಗಿದೆ. ಆದರೆ ಸಿನಿಮಾದ ಬಗ್ಗೆ ನೆಗೆಟಿವ್ ಕಮೆಂಟ್​​ಗಳು ಹರಿದಾಡುತ್ತಿವೆ. ಆದರೆ ಇದಕ್ಕೆ ವಿಜಯ್ ಫ್ಯಾನ್ಸ್ ಕಾರಣ ಎಂದು ಸಿನಿಮಾ ತಂಡ ಆರೋಪ ಮಾಡುತ್ತಿದೆ.

‘ಜನ ನಾಯಗನ್’ ತೆಲುಗು ಸಿನಿಮಾದ ರೀಮೇಕ್ ಸಿನಿಮಾ ಆಗಿದೆ. ಆದರೆ ಅದರ ಬಿಡುಗಡೆಗೆ ಅವಕಾಶ ನೀಡಲಾಗಿಲ್ಲ. ಆದರೆ ‘ಪರಾಶಕ್ತಿ’ ಸಿನಿಮಾ ಪಕ್ಕಾ ರಾಜಕೀಯ ವಿಷಯ ವಸ್ತುವುಳ್ಳ ಸಿನಿಮಾ ಆಗಿದೆ. ‘ಪರಾಶಕ್ತಿ’ ಸಿನಿಮಾ, ತಮಿಳುನಾಡಿನಲ್ಲಿ ನಡೆದ ಹಿಂದಿ ವಿರೋಧಿ ಹೋರಾಟದ ಕತೆಯನ್ನು ಹೊಂದಿದ್ದು, ಸಿನಿಮಾನಲ್ಲಿ ಈಗಿನ ಆಡಳಿತ ಪಕ್ಷ ಡಿಎಂಕೆಗೆ ಪೂರಕವಾಗುವ ಹಲವು ಅಂಶಗಳು ಇವೆಯಂತೆ ಅಲ್ಲದೆ, ಆಗಿನ ಕಾಂಗ್ರೆಸ್ ಮತ್ತು ಈಗಿನ ಕೇಂದ್ರ ಸರ್ಕಾರವನ್ನು ಟೀಕಿಸುವ ಅಂಶಗಳು ಸಹ ಇವೆ ಎನ್ನಲಾಗಿದೆ.

ಸುಧಾ ಕೊಂಗರ ನಿರ್ದೇಶನ ಮಾಡಿರುವ ಈ ಸಿನಿಮಾನಲ್ಲಿ ಚಿತ್ರಕತೆ ಬಿಗಿಯಾಗಿ ಇಲ್ಲದ ಕಾರಣ ಸಿನಿಮಾ ನಿರೀಕ್ಷಿತ ಪರಿಣಾಮವನ್ನು ಪ್ರೇಕ್ಷಕರ ಮೇಲೆ ಬೀರುತ್ತಿಲ್ಲ. ಆದರೆ ತಮ್ಮ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಕಳಪೆ ಪ್ರದರ್ಶನ ಕಾಣಲು ವಿಜಯ್ ಅಭಿಮಾನಿಗಳು ಕಾರಣ ಎಂದು ಪರೋಕ್ಷವಾಗಿ ಸಿನಿಮಾದ ನಿರ್ದೇಶಕಿಯೇ ಆಗಿರುವ ಸುಧಾ ಕೊಂಗರ ಆರೋಪಿಸಿದ್ದಾರೆ. ಇತ್ತೀಚೆಗಷ್ಟೆ ಇದೇ ಸಿನಿಮಾದ ಕ್ರಿಯೇಟಿವ್ ಡೈರೆಕ್ಟರ್ ಸಹ ವಿಜಯ್ ಅಭಿಮಾನಿಗಳನ್ನು ದೂಷಣೆ ಮಾಡಿದ್ದರು. ಈಗ ಸ್ವತಃ ಸುಧಾ ಕೊಂಗರ ದೂಷಣೆಗೆ ಇಳಿದಿದ್ದಾರೆ.

ಇದನ್ನೂ ಓದಿ:‘ಪರಾಶಕ್ತಿ’ ಸಿನಿಮಾ ಬ್ಯಾನ್ ಮಾಡಿ: ಕಾಂಗ್ರೆಸ್ ಆಗ್ರಹ, ಕಾರಣವೇನು?

‘ಅಪರಿಚಿತ ಐಡಿಯ ಹಿಂದೆ ಅಡಗಿಕೊಂಡು ಕೆಟ್ಟ ರೀತಿಯ ಅಪಪ್ರಚಾರ ಮಾಡಲಾಗುತ್ತಿದೆ. ನಾವು ಅದನ್ನು ಎದುರಿಸಬೇಕಾಗಿದೆ. ಅದು ಎಲ್ಲಿಂದ ಬರುತ್ತಿದೆ ಎಂದು ಮೊದಲು ಆಶ್ಚರ್ಯ ಪಟ್ಟೆವು ಮತ್ತು ಅದು ಎಲ್ಲಿಂದ ಬರುತ್ತಿದೆ ಎಂದು ನಿಮಗೆ ತಿಳಿದಿದೆ. ವಿಜಯ್ ಅಭಿಮಾನಿಗಳು ಹಾಕಿರವ ಒಂದು ಪೋಸ್ಟ್ ಹೇಗಿದೆ ಎಂದರೆ, ‘ಸಿಬಿಎಫ್​​ಸಿ ಸರ್ಟಿಫಿಕೇಟ್ ಪಡೆಯುವುದು ದೊಡ್ಡ ಕಷ್ಟ ಏನಲ್ಲ, ನೀವು ವಿಜಯ್ ಸಿನಿಮಾದ ಜೊತೆಗೆ ಕಾಂಪಿಟೇಶನ್​​ಗೆ ಬರಲು ಯತ್ನಿಸಿದಿರಿ, ಮೊದಲು ಅದಕ್ಕೆ ವಿಜಯ್ ಅಭಿಮಾನಿಗಳ ಬಳಿ ಕ್ಷಮೆ ಕೇಳಿ ಆ ನಂತರ ನಿಮ್ಮ ‘ಪರಾಶಕ್ತಿ’ ಓಡುತ್ತದೆ’ ಎಂದಿದ್ದಾರೆ ಎಂದು ಸುಧಾ ಕೊಂಗರ ಹೇಳಿದ್ದಾರೆ. ಅಲ್ಲದೆ ಇಂಥಹಾ ಬೆದರಿಕೆಗಳನ್ನು ಖಂಡಿಸಬೇಕು ಎಂದು ಸಹ ಅವರು ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಲಕ್ಕುಂಡಿಯ ಸಿಕ್ಕ ಚಿನ್ನ ಮನೆಯಲ್ಲಿ ಇಟ್ಕೊಂಡ್ರೆ ಏನಾಗತ್ತೆ ಗೊತ್ತಾ?
ಲಕ್ಕುಂಡಿಯ ಸಿಕ್ಕ ಚಿನ್ನ ಮನೆಯಲ್ಲಿ ಇಟ್ಕೊಂಡ್ರೆ ಏನಾಗತ್ತೆ ಗೊತ್ತಾ?
ಲಕ್ಕುಂಡಿಯ ಈ ಸ್ಥಳದಲ್ಲಿ ಇಂದಿಗೂ ಸಿಗುತ್ತದೆ ಚಿನ್ನ, ರತ್ನ, ಹವಳ
ಲಕ್ಕುಂಡಿಯ ಈ ಸ್ಥಳದಲ್ಲಿ ಇಂದಿಗೂ ಸಿಗುತ್ತದೆ ಚಿನ್ನ, ರತ್ನ, ಹವಳ
ಲಕ್ಕುಂಡಿಯಲ್ಲಿ ಪತ್ತೆಯಾದ ನಿಧಿ ಯಾವ ಕಾಲದ್ದು ಗೊತ್ತೇ? ಬಯಲಾಯ್ತು ರಹಸ್ಯ
ಲಕ್ಕುಂಡಿಯಲ್ಲಿ ಪತ್ತೆಯಾದ ನಿಧಿ ಯಾವ ಕಾಲದ್ದು ಗೊತ್ತೇ? ಬಯಲಾಯ್ತು ರಹಸ್ಯ
ಥೈಲ್ಯಾಂಡ್​ನಲ್ಲಿ ಹಳಿ ತಪ್ಪಿದ ರೈಲು, 22 ಮಂದಿ ಸಾವು
ಥೈಲ್ಯಾಂಡ್​ನಲ್ಲಿ ಹಳಿ ತಪ್ಪಿದ ರೈಲು, 22 ಮಂದಿ ಸಾವು
ವೇಗವಾಗಿ ಬಂದು ಸಂಚಾರ ಗೃಹರಕ್ಷಕ ಸಿಬ್ಬಂದಿಗೆ ಡಿಕ್ಕಿ ಹೊಡೆದ ಬೈಕ್ ಸವಾರ
ವೇಗವಾಗಿ ಬಂದು ಸಂಚಾರ ಗೃಹರಕ್ಷಕ ಸಿಬ್ಬಂದಿಗೆ ಡಿಕ್ಕಿ ಹೊಡೆದ ಬೈಕ್ ಸವಾರ
ಮಿಡಲ್ ಫಿಂಗರ್ ತೋರಿಸಿ ವ್ಯಕ್ತಿಯೊಬ್ಬರಿಗೆ ಕೆಟ್ಟ ಶಬ್ದಗಳಲ್ಲಿ ಬೈದ ಟ್ರಂಪ್
ಮಿಡಲ್ ಫಿಂಗರ್ ತೋರಿಸಿ ವ್ಯಕ್ತಿಯೊಬ್ಬರಿಗೆ ಕೆಟ್ಟ ಶಬ್ದಗಳಲ್ಲಿ ಬೈದ ಟ್ರಂಪ್
ಗಿಲ್ಲಿ ಗೆಲ್ಲೋ ಸೂಚನೆ ಕೊಟ್ರಾ ಬಿಗ್ ಬಾಸ್? ಅಭಿಮಾನಿಗಳ ಮುಂದೆಯೇ ಘೋಷಣೆ
ಗಿಲ್ಲಿ ಗೆಲ್ಲೋ ಸೂಚನೆ ಕೊಟ್ರಾ ಬಿಗ್ ಬಾಸ್? ಅಭಿಮಾನಿಗಳ ಮುಂದೆಯೇ ಘೋಷಣೆ
WPLನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಹರ್ಮನ್​ಪ್ರೀತ್ ಕೌರ್
WPLನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಹರ್ಮನ್​ಪ್ರೀತ್ ಕೌರ್
ಮಹಿಳೆಯ ಮನೆಯ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ, ಗುಂಡಿನ ದಾಳಿ
ಮಹಿಳೆಯ ಮನೆಯ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ, ಗುಂಡಿನ ದಾಳಿ
ಸಂಕ್ರಾಂತಿ: ಕೆಆರ್​ ಮಾರ್ಕೆಟ್ ಸುತ್ತಮುತ್ತ ಮುಂಜಾನೆಯೇ ಭಾರಿ ಟ್ರಾಫಿಕ್ ಜಾಂ
ಸಂಕ್ರಾಂತಿ: ಕೆಆರ್​ ಮಾರ್ಕೆಟ್ ಸುತ್ತಮುತ್ತ ಮುಂಜಾನೆಯೇ ಭಾರಿ ಟ್ರಾಫಿಕ್ ಜಾಂ