Suhana Khan: ಗರ್ಲ್ಸ್​ ಗ್ಯಾಂಗ್​ನಲ್ಲಿ ಹಾಟ್​ ಆಗಿ ಕಾಣಿಸಿಕೊಂಡ ಶಾರುಖ್​ ಮಗಳು ಸುಹಾನಾ ಖಾನ್​

ಈ ವಿಡಿಯೋದಲ್ಲಿ ಸುಹಾನಾ ಕಪ್ಪು ಬಣ್ಣದ ಉಡುಗೆ ತೊಟ್ಟು ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ. ಇಂಗ್ಲಿಷ್​ ಹಾಡಿಗೆ ಫ್ರೆಂಡ್ಸ್​ ಜತೆ ಸೇರಿ ಡಾನ್ಸ್​ ಮಾಡಿದ್ದಾರೆ.

Suhana Khan: ಗರ್ಲ್ಸ್​ ಗ್ಯಾಂಗ್​ನಲ್ಲಿ ಹಾಟ್​ ಆಗಿ ಕಾಣಿಸಿಕೊಂಡ ಶಾರುಖ್​ ಮಗಳು ಸುಹಾನಾ ಖಾನ್​
ಸುಹಾನಾ ಖಾನ್
Edited By:

Updated on: May 24, 2021 | 4:47 PM

ಶಾರುಖ್​ ಖಾನ್​ ಮಗಳು ಇನ್ನೂ ಚಿತ್ರರಂಗಕ್ಕೆ ಕಾಲಿಟ್ಟಿಲ್ಲ. ಸದ್ಯ, ಅಮೆರಿಕದಲ್ಲಿ ಶಿಕ್ಷಣ ಪಡೆಯುತ್ತಿರುವ ಅವರು, ಮುಂದಿನ ದಿನಗಳಲ್ಲಿ ಬಾಲಿವುಡ್​​ಗೆ ಕಾಲಿಡುವ ಎಲ್ಲಾ ಸೂಚನೆ ಇದೆ. ಸಿನಿಮಾ ರಂಗಕ್ಕೆ ಎಂಟ್ರಿ ಕೊಡದಿದ್ದರೂ ಶಾರುಖ್​ ಮಗಳು ಆಗಾಗ ಸುದ್ದಿಯಾಗುತ್ತಿರುತ್ತಾರೆ. ಈಗ ಅವರು ಗರ್ಲ್ಸ್​ ಗ್ಯಾಂಗ್​ನಲ್ಲಿ ಸಖತ್​ ಹಾಟ್​ ಆಗಿ ಕಾಣಿಸಿಕೊಂಡಿದ್ದು, ವಿಡಿಯೋ ಒಂದು ವೈರಲ್​ ಆಗಿದೆ.

ಸುಹಾನಾ ಮೇ 22ರಂದು 21ನೇ ವರ್ಷದ ಜನ್ಮದಿನ ಆಚರಣೆ ಮಾಡಿಕೊಂಡಿದ್ದರು. ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಳೆಯೇ ಸುರಿದಿದೆ. ಈ ವಿಶೇಷ ದಿನದಂದು ಅವರು ತಮ್ಮ ಗರ್ಲ್ಸ್​ ಗ್ಯಾಂಗ್​ ಜತೆ ಸೇರಿಕೊಂಡು ಪಾರ್ಟಿ ಮಾಡಿದ್ದಾರೆ. ಅಷ್ಟೇ ಅಲ್ಲ, ಈ ವಿಡಿಯೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಸುಹಾನಾ ಕಪ್ಪು ಬಣ್ಣದ ಉಡುಗೆ ತೊಟ್ಟು ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ. ಇಂಗ್ಲಿಷ್​ ಹಾಡಿಗೆ ಫ್ರೆಂಡ್ಸ್​ ಜತೆ ಸೇರಿ ಡಾನ್ಸ್​ ಮಾಡಿದ್ದಾರೆ. ಅವರ ಗ್ಲಾಮರಸ್​ ಲುಕ್​ ನೋಡಿ ಅಭಿಮಾನಿಗಳು ಸಖತ್​ ಖುಷಿಯಾಗಿದ್ದಾರೆ.

ಸುಹಾನಾ ಖಾನ್​ ಕಳೆದ ವರ್ಷ ತಮ್ಮ ಇನ್​ಸ್ಟಾಗ್ರಾಂ ಖಾತೆಯನ್ನು ಪಬ್ಲಿಕ್​ ಮಾಡಿದ್ದರು. ಶಾರುಖ್​ ಪುತ್ರಿ ಎನ್ನುವ ಕಾರಣಕ್ಕೆ ಅವರ ಫ್ಯಾನ್ಸ್​ ಬಳಗ ತುಂಬಾನೇ ದೊಡ್ಡದಿದೆ. ಹೀಗಾಗಿ, ಅವರಿಗೆ ಸಾಕಷ್ಟು ಫಾಲೋವರ್​​ಗಳಿದ್ದು, ಫ್ಯಾನ್​ ಪೇಜ್​ ಕೂಡ ಸಾಕಷ್ಟಿದೆ. ಅವರು ಬರ್ತ್​ಡೇ ಆಚರಿಸಿಕೊಂಡಿರುವ ವಿಡಿಯೋಗಳು ಸಾಕಷ್ಟು ವೈರಲ್​ ಆಗುತ್ತಿವೆ.

ನ್ಯೂಯಾರ್ಕ್​ ವಿಶ್ವವಿದ್ಯಾಲಯದಲ್ಲಿ ಅವರು ಶಿಕ್ಷಣ ಪಡೆಯುತ್ತಿದ್ದಾರೆ. ಕಳೆದ ಕೆಲ ವರ್ಷಗಳ ಹಿಂದೆ ಶಾರುಖ್​ ಖಾನ್​ ತಮ್ಮ ಮಗಳನ್ನು ಪ್ರೀತಿಸುವ ಹುಡುಗ ಹೇಗಿರಬೇಕು ಎನ್ನುವ ಬಗ್ಗೆ ಹೇಳಿಕೊಂಡಿದ್ದರು. ಈ ವಿಡಿಯೋ ಅವರ ಜನ್ಮದಿನದ ವೇಳೆಗೆ ವೈರಲ್​ ಆಗಿತ್ತು.

ಸುಹಾನಾ ಶಿಕ್ಷಣ ಪಡೆದ ನಂತರ ಭಾರತಕ್ಕೆ ವಾಪಾಸಾಗಲಿದ್ದಾರೆ. ನಂತರ ಅವರು ಚಿತ್ರರಂಗದಲ್ಲಿ ತೊಡಗಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಸಾಕಷ್ಟು ಸ್ಟಾರ್​ ಕಿಡ್​ಗಳು ಬಾಲಿವುಡ್​ನಲ್ಲಿ ತಮ್ಮ ಸ್ಥಾನ ಭದ್ರ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಶಾರುಖ್​ ಖಾನ್​ ಜತೆ ಬೀಡಿ ಸೇದಿದ ದಿನಗಳನ್ನು ನೆನಪಿಸಿಕೊಂಡ ಮನೋಜ್​ ಬಾಜಪೇಯಿ

‘ನಾನು ಜೈಲಿಗೆ ಹೋಗಲು ಹಿಂಜರಿಯುವುದಿಲ್ಲ’; ಪುತ್ರಿ ಸುಹಾನಾ ಬಾಯ್​ಫ್ರೆಂಡ್​ ಬಗ್ಗೆ ಶಾರುಖ್​ ಖಡಕ್​ ವಾರ್ನಿಂಗ್​

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us