ಸಣ್ಣ ವಯಸ್ಸಲ್ಲೇ ಕೊನೆ ಆಯ್ತು ಈ ಸೆಲೆಬ್ರಿಟಿಗಳ ಬದುಕು..

| Updated By: ರಾಜೇಶ್ ದುಗ್ಗುಮನೆ

Updated on: Feb 19, 2024 | 8:14 AM

ಆಮಿರ್ ಖಾನ್ ನಟನೆಯ ‘ದಂಗಲ್’ ಸಿನಿಮಾದಲ್ಲಿ ಬಬಿತಾ ಫೋಗಟ್ ಅವರ ಯಂಗರ್ ವರ್ಷನ್​ನಲ್ಲಿ ಕಾಣಿಸಿಕೊಂಡಿದ್ದರು. ಅವರು ಫೆಬ್ರವರಿ 17ರಂದು ಮೃತಪಟ್ಟರು. ಅವರಿಗೆ ಇನ್ನೂ 19 ವರ್ಷ ಆಗಿತ್ತು. ಕಳೆದ ಕೆಲ ದಿನಗಳ ಹಿಂದೆ ಅವರು ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಈ ವೇಳೆ ಅವರ ಕಾಲಿಗೆ ತೀವ್ರ ಹಾನಿ ಉಂಟಾಗಿತ್ತು.ಈ ರೀತಿ ಸಣ್ಣ ವಯಸ್ಸಿನಲ್ಲಿ ಮೃತಪಟ್ಟ ಅನೇಕರಿದ್ದಾರೆ.

ಸಣ್ಣ ವಯಸ್ಸಲ್ಲೇ ಕೊನೆ ಆಯ್ತು ಈ ಸೆಲೆಬ್ರಿಟಿಗಳ ಬದುಕು..
ಸಣ್ಣ ವಯಸ್ಸಲ್ಲೇ ಕೊನೆ ಆಯ್ತು ಈ ಸೆಲೆಬ್ರಿಟಿಗಳ ಬದುಕು..
Follow us on

ಚಿತ್ರರಂಗಕ್ಕೆ ಬಂದು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ಅನೇಕ ಸೆಲೆಬ್ರಿಟಿಗಳು ಇದ್ದಾರೆ. ಅದೇ ರೀತಿ ಸಣ್ಣ ವಯಸ್ಸಿನಲ್ಲೇ ಚಿತ್ರರಂಗದಲ್ಲಿ ಮಿಂಚಿ ಇಹಲೋಕ ತ್ಯಜಿಸಿದವರೂ ಅನೇಕರಿದ್ದಾರೆ. ಈ ಸಾಲಿನಲ್ಲಿ ತುನಿಷಾ ಶರ್ಮಾ, ಸುಹಾನಿ ಭಾಟ್ನಗರ್ (Suhani Bhatnagar) ಸೇರಿ ಅನೇಕರಿದ್ದಾರೆ. ಈ ಪೈಕಿ ಕೆಲವರು ಆತ್ಮಹತ್ಯೆ ಮಾಡಿಕೊಂಡರೆ ಇನ್ನೂ ಕೆಲವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಸುಹಾನಿ ಭಾಟ್ನಗರ್

ಆಮಿರ್ ಖಾನ್ ನಟನೆಯ ‘ದಂಗಲ್’ ಸಿನಿಮಾದಲ್ಲಿ ಬಬಿತಾ ಫೋಗಟ್ ಅವರ ಯಂಗರ್ ವರ್ಷನ್​ನಲ್ಲಿ ಕಾಣಿಸಿಕೊಂಡಿದ್ದರು. ಅವರು ಫೆಬ್ರವರಿ 17ರಂದು ಮೃತಪಟ್ಟರು. ಅವರಿಗೆ ಇನ್ನೂ 19 ವರ್ಷ ಆಗಿತ್ತು. ಕಳೆದ ಕೆಲ ದಿನಗಳ ಹಿಂದೆ ಅವರು ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಈ ವೇಳೆ ಅವರ ಕಾಲಿಗೆ ತೀವ್ರ ಹಾನಿ ಉಂಟಾಗಿತ್ತು. ಅವರು ಟ್ರೀಟ್​ಮೆಂಟ್ ಮಾಡಿಸಿಕೊಂಡಿದ್ದರು. ಆದರೆ, ಸಾಕಷ್ಟು ಕಾಂಪ್ಲಿಕೇಷನ್ ಆಗಿದ್ದರಿಂದ ಅವರು ರಿಕವರಿ ಹೊಂದಲೇ ಇಲ್ಲ. ಅವರ ಸಾವು ಅನೇಕರಿಗೆ ಶಾಕಿಂಗ್ ಎನಿಸಿದೆ.

ತುನಿಷಾ ಶರ್ಮಾ

ತುನಿಷಾ ಶರ್ಮಾ ಅವರು 2022ರ ಡಿಸೆಂಬರ್ 24ರಂದು ನಿಧನ ಹೊಂದಿದರು. ಅವರು ಆತ್ಮಹತ್ಯೆಯಿಂದ ಪ್ರಾಣ ಕಳೆದುಕೊಂಡರು. ಅವರಿಗೆ ಕೇವಲ 20 ವರ್ಷ ವಯಸ್ಸಾಗಿತ್ತು. ಶಾಕಿಂಗ್ ವಿಚಾರ ಎಂದರೆ ಅವರು ಸೆಟ್​​ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರು. ತುನಿಷಾ ಲವರ್ ಎನ್ನಲಾದ ಶೀಜನ್ ಖಾನ್ ವಿರುದ್ಧ ಎಫ್​​ಐಆರ್ ದಾಖಲಾಯಿತು. ಶೀಜನ್ ಹಾಗೂ ತುನಿಷಾ ಹಲವು ವರ್ಷಗಳ ಕಾಲ ಡೇಟಿಂಗ್ ನಡೆಸಿದ್ದರು. ಇಬ್ಬರ ಮಧ್ಯೆ ಕಿರಿಕ್ ಆಗಿಯೇ ಈ ಸಾವು ಸಂಭವಿಸಿತ್ತು ಎನ್ನಲಾಗಿದೆ.

ರಾಹುಲ್ ಕೋಲಿ

ರಾಹುಲ್ ಕೋಲಿ ಅವರು ಕೇವಲ 10ನೇ ವರ್ಷಕ್ಕೆ ಸಾವನಪ್ಪಿದರು. ಅವರು ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದರು. 2022ರ ಅಕ್ಟೋಬರ್ 2ರಂದು ಅವರು ನಿಧನ ಹೊಂದಿದರು. ಅವರು ಗುಜರಾತಿ ಸಿನಿಮಾ ‘ಚೆಲ್ಲೋ ಶೋ’ನಲ್ಲಿ ನಟಿಸಿದ್ದರು. ಈ ಸಿನಿಮಾ 95ನೇ ಸಾಲಿನ ಆಸ್ಕರ್​ ಅವಾರ್ಡ್​ಗೆ ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗಿತ್ತು. ಸಿನಿಮಾ ಯಶಸ್ಸು ಕಂಡರೆ ಜೀವನ ಬದಲಾಗಬಹುದು ಎಂದು ಅವರು ಕನಸು ಕಂಡಿದ್ದರು.  ಆದರೆ, ಹಾಗಾಗಲೇ ಇಲ್ಲ. ಸಣ್ಣ ವಯಸ್ಸಿನಲ್ಲೇ ಅವರು ನಿಧನ ಹೊಂದಿದ್ದು ಸಾಕಷ್ಟು ಜನರಿಗೆ ಶಾಕಿಂಗ್ ಎನಿಸಿತು.

ತರುಣಿ ಸಚ್​ದೇವ್

ತರುಣಿ ಸಚ್​ದೇವ್ ಅವರು ಬಾಲ ನಟಿ ಆಗಿ ಗಮನ ಸೆಳೆದರು. ದೊಡ್ಡ ದೊಡ್ಡ ಪ್ರಾಜೆಕ್ಟ್​ಗಳಲ್ಲಿ ಅವರು ನಟಿಸಿದ್ದರು. ಅವರು ಅಮಿತಾಭ್ ಬಚ್ಚನ್ ನಟನೆಯ ‘ಪಾ’ ಸಿನಿಮಾದಲ್ಲಿ ನಟಿಸಿ ಗಮನ ಸೆಳೆದಿದ್ದರು. ಅವರು ರಸ್ನಾ ಗರ್ಲ್ ಆಗಿಯೂ ಗಮನ ಸೆಳೆದಿದ್ದರು. ರಸ್ನಾ ಜಾಹೀರಾತಿನಲ್ಲಿ ಇವರು ನಟಿಸಿದ್ದರು. ತರುಣಿ 2012ರಲ್ಲಿ ಮೃತಪಟ್ಟರು. ಆಗ ಅವರಿಗೆ 14 ವರ್ಷ ವಯಸ್ಸು. ನೇಪಾಳ ವಿಮಾನ ಅಪಘಾತದಲ್ಲಿ ಅವರು ಮೃತಪಟ್ಟರು.

ಇದನ್ನೂ ಓದಿ: ಆಶಾ ಭೋಸ್ಲೆಯ ‘ಆಂಖೋ ಕೀ ಮಸ್ತಿ’ ಹಾಡಿದ ಗಿಲ್ಗಿಟ್ ಬಲ್ಟಿಸ್ತಾನ್​ನ ತರುಣಿ

ಶಿವ್​ಲೇಖ್ ಸಿಂಗ್

‘ಸಸುರಾಲ್ ಸಿಮರ್ ಕಾ’ ಧಾರಾವಾಹಿಯ ಬಾಲ ಕಲಾವಿದೆ ಶಿವ್​ಲೇಖ್ ಸಿಂಗ್ ಅವರು ಕಾರು ಅಪಘಾತದಲ್ಲಿ ಮೃತಪಟ್ಟರು. ಆಗ ಅವರಿಗೆ ಕೇವಲ 14 ವರ್ಷ ವಯಸ್ಸು. ಈ ಅಪಘಾತ ನಡೆದಿದ್ದು 2019ರಲ್ಲಿ. ಚತ್ತೀಸ್​ಗಢದಲ್ಲಿ ನಡೆದ ಕಾರು ಆ್ಯಕ್ಸಿಡೆಂಟ್​ನಲ್ಲಿ ಅವರು ಸ್ಥಳದಲ್ಲೇ ಮೃತಪಟ್ಟರು. ಕಾರು ಟ್ರಕ್​ಗೆ ಗುದ್ದಿದ್ದರಿಂದ ಅಪಘಾತ ಸಂಭವಿಸಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:10 am, Mon, 19 February 24