ಉತ್ತರ ಪ್ರದೇಶ ಪೊಲೀಸ್ ಕಾನ್​ಸ್ಟೆಬಲ್ ನೌಕರಿಗೆ ಅರ್ಜಿ ಹಾಕಿದ ಸನ್ನಿ ಲಿಯೋನಿ

Sunny Leone: ಸನ್ನಿ ಲಿಯೋನಿ ಉತ್ತರ ಪ್ರದೇಶ ಪೊಲೀಸ್ ಇಲಾಖೆ ನಡೆಸಿದ ಪೊಲೀಸ್ ಕಾನ್​ಸ್ಟೆಬಲ್ ಹುದ್ದೆಯ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಾರೆ.

ಮಂಜುನಾಥ ಸಿ.
|

Updated on: Feb 18, 2024 | 8:15 PM

ಬಾಲಿವುಡ್ ನಟಿ ಸನ್ನಿ ಲಿಯೋನಿಗೆ ಅವಕಾಶಗಳ ಕೊರತೆಯೇನಿಲ್ಲ. ಬಾಲಿವುಡ್ ಮಾತ್ರವಲ್ಲದೆ ಹಲವು ಭಾಷೆಗಳ ಚಿತ್ರರಂಗದಿಂದ ಅವರಿಗೆ ಅವಕಾಶಗಳು ಬರುತ್ತಲೇ ಇವೆ.

1 / 7
ನಟನೆ ಮಾತ್ರವೇ ಅಲ್ಲದೆ ಐಟಂ ಹಾಡುಗಳು, ಅತಿಥಿ ಪಾತ್ರಗಳಲ್ಲಿಯೂ ಸನ್ನಿ ಲಿಯೋನಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವು ಜಾಹೀರಾತುಗಳಲ್ಲಿಯೂ ಸಹ ಸನ್ನಿ ನಟಿಸುತ್ತಾರೆ.

2 / 7
ಇದೆಲ್ಲದರ ಜೊತೆಗೆ ಹೋಟೆಲ್ ಉದ್ಯಮ, ರಿಯಲ್ ಎಸ್ಟೇಟ್ ಸೇರಿದಂತೆ ಕೆಲವು ಉದ್ಯಮಗಳಲ್ಲಿಯೂ ಸನ್ನಿ ಲಿಯೋನಿ ಬಂಡವಾಳ ತೊಡಗಿಸಿದ್ದು ಉದ್ಯಮಿಯೂ ಆಗಿದ್ದಾರೆ.

3 / 7
ಆದರೆ ಸನ್ನಿ ಲಿಯೋನಿ, ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಕಾನ್​ಸ್ಟೆಬಲ್ ಉದ್ಯೋಗಕ್ಕಾಗಿ ಅರ್ಜಿ ಹಾಕಿದ್ದಾರೆ. ನಿಜ, ಸನ್ನಿ ಲಿಯೋನಿಯ ಅರ್ಜಿ ಸಖತ್ ವೈರಲ್ ಆಗಿದೆ.

4 / 7
ಫೆಬ್ರವರಿ 17ಕ್ಕೆ ಪೊಲೀಸ್ ಕಾನ್​ಸ್ಟೆಬಲ್ ಪರೀಕ್ಷೆ ನಡೆದಿದ್ದು ಬಾಲಿಕಾ ಮಹಾವಿದ್ಯಾನಿಲಯದ ಪರೀಕ್ಷಾ ಕೇಂದ್ರದಲ್ಲಿ ಸನ್ನಿ ಲಿಯೋನಿಯ ಅರ್ಜಿ ಪತ್ತೆಯಾಗಿದೆ.

5 / 7
ಉತ್ತರ ಪ್ರದೇಶ ಮೂಲದ ಮೊಬೈಲ್ ಸಂಖ್ಯೆ ಹಾಗೂ ಮುಂಬೈನ ವಿಳಾಸವನ್ನು ನೀಡಿ ಸನ್ನಿ ಲಿಯೋನಿಯ ಹೆಸರು ಚಿತ್ರಗಳು ಬಳಸಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲಾಗಿದೆ.

6 / 7
ಸನ್ನಿ ಲಿಯೋನಿ ಹೆಸರಲ್ಲಿ ಅರ್ಜಿ ಸಲ್ಲಿಸಲಾಗಿದೆ ಅಷ್ಟೆ ಯಾರೂ ಸಹ ಆ ಪ್ರವೇಶ ಪತ್ರ ಬಳಸಿ ಪರೀಕ್ಷೆ ಬರೆದಿಲ್ಲ. ನಕಲಿ ಮಾಹಿತಿ ಬಳಸಿ ಅರ್ಜಿ ಸಲ್ಲಿಸಿರುವ ಬಗ್ಗೆ ತನಿಖೆ ನಡೆಸಲಿದ್ದೇವೆ ಎಂದು ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.

7 / 7
Follow us