Kamal Haasan: ಕಮಲ್ ಹಾಸನ್, ಚಾರುಹಾಸನ್, ಮಣಿರತ್ನಂ, ಸುಹಾಸಿನಿ ಎಲ್ಲರೂ ಒಂದೇ ಚಿತ್ರದಲ್ಲಿ; ಏನು ವಿಶೇಷ?

| Updated By: shivaprasad.hs

Updated on: Aug 18, 2021 | 10:47 AM

Suhasini Manirtnam: ಬಹುಭಾಷಾ ನಟಿ ಸುಹಾಸಿನಿ ತಮ್ಮ ಹಾಸನ್ ಕುಟುಂಬದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಕಮಲ್ ಹಾಸನ್, ಚಾರು ಹಾಸನ್, ಮಣಣಿರತ್ನಂ ಸೇರಿದಂತೆ ದಿಗ್ಗಜರೆಲ್ಲರೂ ಇರುವ ಈ ಚಿತ್ರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

Kamal Haasan: ಕಮಲ್ ಹಾಸನ್, ಚಾರುಹಾಸನ್, ಮಣಿರತ್ನಂ, ಸುಹಾಸಿನಿ ಎಲ್ಲರೂ ಒಂದೇ ಚಿತ್ರದಲ್ಲಿ; ಏನು ವಿಶೇಷ?
ಹಾಸನ್ ಕುಟುಂಬ (ಚಿತ್ರ ಕೃಪೆ: ಸುಹಾಸಿನಿ ಮಣಿರತ್ನಂ/ ಇನ್ಸ್ಟಾಗ್ರಾಂ)
Follow us on

ಕನ್ನಡ ಸೇರಿದಂತೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಚಿರಪರಿಚಿತರಾದ ಸುಹಾಸಿನಿ ತಮ್ಮ ಕುಟುಂಬ ವರ್ಗದವರೊಂದಿಗೆ ಕಳೆದ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಇಡೀ ಕುಟುಂಬ ಚಿತ್ರರಂಗದಲ್ಲಿ ಸತತವಾಗಿ ತೊಡಗಿಸಿಕೊಂಡಿರುವುದರಿಂದ ಈ ಚಿತ್ರಗಳು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ಸ್ಟಾಗ್ರಾಂನಲ್ಲಿ ಚಿತ್ರಗಳನ್ನು ಹಂಚಿಕೊಂಡಿರುವ ಸುಹಾಸಿನಿ, ಅದರಲ್ಲಿ ಕಮಲ್ ಹಾಸನ್ ಅವರೊಂದಿಗೆ ಆಕೆ ಬೆಳೆದ ಅವರ ಕುಟುಂಬದ ಮನೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಹಾಗೆಯೇ ಕುಟುಂಬದ ಚಿತ್ರವನ್ನು ಹಂಚಿಕೊಂಡು ಕುಟುಂಬ ವರ್ಗದ ಪರಿಚಯ ಮಾಡಿಕೊಟ್ಟಿದ್ಧಾರೆ.

ವರದಿಗಳ ಪ್ರಕಾರ, ಕೆಲವು ತಿಂಗಳುಗಳ ನಂತರ ಹಾಸನ್ ಕುಟುಂಬವು ತಮ್ಮ ಕುಟುಂಬದ ಮನೆಗೆ ಭೇಟಿ ನೀಡಿದೆ. ಸುಮಾರು 60 ವರ್ಷಕ್ಕೂ ಹಳೆಯ ಈ ಮನೆಯನ್ನು ಮರು ವಿನ್ಯಾಸಗೊಳಿಸಲಾಗಿದೆ. ಚಿತ್ರವನ್ನು ಹಂಚಿಕೊಂಡಿರುವ ಸುಹಾಸಿನಿ, ‘ಮರಳಿ ಎಲ್ಡಮ್ ರಸ್ತೆಯಲ್ಲಿರುವ  ಕುಟುಂಬದ ಮನೆಗೆ.’ ಎಂದು ಬರೆದುಕೊಂಡು ಕುಟುಂಬದವರನ್ನು ಪರಿಚಯಿಸಿದ್ದಾರೆ. ಖ್ಯಾತ ನಿರ್ದೇಶಕ ಮಣಿರತ್ನಂ ಪತ್ನಿಯಾಗಿರುವ ಸುಹಾಸಿನಿ, ಹಾಸನ್ ಕುಟುಂಬದಿಂದ ಬಂದವರು. ಸುಹಾಸಿನಿ ತಂದೆ ಚಾರುಹಾಸನ್ ಕೂಡಾ ಖ್ಯಾತ ನಟರಾಗಿದ್ದು, ಕನ್ನಡದಲ್ಲೂ ಅಭಿನಯಿಸಿದ್ದಾರೆ. ಕಮಲ್ ಹಾಸನ್ ಚಾರುಹಾಸನ್​ರ ಸಹೋದರ. ಈಗ ಕಮಲ್ ಹಾಸನ್​ರ ಮಕ್ಕಳೂ ಕೂಡಾ ಚಿತ್ರರಂಗದಲ್ಲಿ ಸತತವಾಗಿ ತೊಡಗಿಸಿಕೊಂಡಿದ್ದಾರೆ. ಸುಹಾಸಿನಿ ಹಂಚಿಕೊಂಡಿರುವ ಚಿತ್ರಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು, ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್ ಕೂಡಾ ಈ ಸಂದರ್ಭದಲ್ಲಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕಾಮೆಂಟ್ ಮಾಡಿದ್ದಾರೆ.

ಸುಹಾಸಿನಿ ಹಂಚಿಕೊಂಡಿರುವ ಚಿತ್ರ:

ಸುಹಾಸಿನಿ ಕೊನೆಯದಾಗಿ ಕಾಣಿಸಿಕೊಂಡಿದ್ದು, ‘ಪುಥಮ್ ಪುದು ಕಾಲೈ’ ಚಿತ್ರದಲ್ಲಿ. ಈ ಆಂಥಾಲಜಿ ಚಿತ್ರದಲ್ಲಿ ಒಂದು ಭಾಗವನ್ನು ಸುಹಾಸಿನಿ ನಿರ್ದೇಶಿಸಿದ್ದರು. ಪತಿ ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಚಿತ್ರದಲ್ಲಿ ಸುಹಾಸಿನಿ ಕಾಣಿಸಿಕೊಳ್ಳಲಿದ್ದಾರೆ. ಮಣಿರತ್ನಂ ನಿರ್ಮಾಣ ಮಾಡಿದ  ‘ನವರಸ’ ಚಿತ್ರ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು.

ಕಮಲ್ ಹಾಸನ್ ಸಹೋದರ, ಸುಹಾಸಿನಿ ತಂದೆ ಚಾರುಹಾಸನ್ ಕನ್ನಡ ಚಿತ್ರಗಳಲ್ಲಿ ನಟಿಸಿ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಪೂರ್ಣಚಂದ್ರ ತೇಜಸ್ವಿಯವರ ಕತೆ ಆಧಾರಿತ ‘ತಬರನ ನತೆ’ ಚಿತ್ರದಲ್ಲಿ ನಟಿಸಿದ್ದ ಚಾರುಹಾಸನ್ ಅದಕ್ಕಾಗಿ ರಾಷ್ಟ್ರಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದರು. ಕಮಲ್ ಹಾಸನ್ ಈಗ ಲೋಕೇಶ್ ಕನಗರಾಜ್ ನಿರ್ದೇಶನದ ‘ವಿಕ್ರಮ್’ ಚಿತ್ರದಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಖ್ಯಾತ ನಟರಾದ ಫಹಾದ್ ಫಾಸಿಲ್ ಹಾಗೂ ವಿಜಯ್ ಸೇತುಪತಿ ಕೂಡಾ ಬಣ್ಣ ಹಚ್ಚಲಿದ್ದಾರೆ.

ಇದನ್ನೂ ಓದಿ:

Alia Bhatt: ಚಿತ್ರೀಕರಣದ ಸೆಟ್​ಗೆ ರಿಕ್ಷಾದಲ್ಲಿ ಬಂದ ಆಲಿಯಾ; ಅದೇನು ದೊಡ್ಡ ವಿಷಯ ಅಲ್ಲ ಎಂದು ಕುಟುಕಿದ ನೆಟ್ಟಿಗರು

BV Nagarathna: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಸ್ಥಾನಕ್ಕೆ ಕರ್ನಾಟಕದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹೆಸರು ಶಿಫಾರಸು

(Suhasini Maniratnam shares family pic of Hasan Family and their ancestral house)