ಬೋಲ್ಡ್ ಕಂಟೆಂಟ್ ಬಗ್ಗೆ ಸುಹಾಸಿನಿಗೆ ಇದೆ ಅಸಮಾಧಾನ; ತಿದ್ದಲು ಹೊರಟವರ ಬಾಯಿ ಮುಚ್ಚಿಸಿದ್ದ ಗೆಳತಿ

|

Updated on: Oct 14, 2023 | 7:15 AM

ದಕ್ಷಿಣ ಭಾರತಕ್ಕೆ ಹೋಲಿಕೆ ಮಾಡಿದರೆ ಬಾಲಿವುಡ್​ನಲ್ಲಿ ಬೋಲ್ಡ್ ಕಂಟೆಂಟ್​ಗಳು ಹೆಚ್ಚಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈ ಬಗ್ಗೆ ಮಾತನಾಡಿದವರು ಕಡಿಮೆ. ಸುಹಾಸಿನಿ ಈ ಬಗ್ಗೆ ಅನೇಕ ಬಾರಿ ಮಾತನಾಡಬೇಕು ಎಂದುಕೊಂಡಿದ್ದರಂತೆ.

ಬೋಲ್ಡ್ ಕಂಟೆಂಟ್ ಬಗ್ಗೆ ಸುಹಾಸಿನಿಗೆ ಇದೆ ಅಸಮಾಧಾನ; ತಿದ್ದಲು ಹೊರಟವರ ಬಾಯಿ ಮುಚ್ಚಿಸಿದ್ದ ಗೆಳತಿ
ಸುಹಾಸಿನಿ-ಪೂನಂ
Follow us on

ನಟಿ ಸುಹಾಸಿನಿ (Suhasini) ಅವರು ಕನ್ನಡ ಮೊದಲಾದ ಭಾಷೆಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರಿಗೆ ಚಿತ್ರರಂಗದಲ್ಲಿ ಇರೋ ಬೇಡಿಕೆ ತುಂಬಾನೇ ದೊಡ್ಡದು. ಆದರೆ, ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಸುಹಾಸಿನಿಗೆ ಸಿನಿಮಾಗಳಲ್ಲಿ ಬೋಲ್ಡ್ ಕಂಟೆಂಟ್ ತೋರಿಸುವ ವಿಚಾರದಲ್ಲಿ ವಿರೋಧ ಇದೆ. ಈ ಬಗ್ಗೆ ಗೆಳತಿ ಒಬ್ಬರ ಜೊತೆ ಹೇಳಿಕೊಂಡಿದ್ದರು. ಅವರಿಂದ ಬಂದ ಉತ್ತರನೋಡಿ ಅವರಿಗೆ ಬೇಸರ ಆಗಿತ್ತು.

ದಕ್ಷಿಣ ಭಾರತಕ್ಕೆ ಹೋಲಿಕೆ ಮಾಡಿದರೆ ಬಾಲಿವುಡ್​ನಲ್ಲಿ ಬೋಲ್ಡ್ ಕಂಟೆಂಟ್​ಗಳು ಹೆಚ್ಚಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈ ಬಗ್ಗೆ ಮಾತನಾಡಿದವರು ಕಡಿಮೆ. ಸುಹಾಸಿನಿ ಈ ಬಗ್ಗೆ ಅನೇಕ ಬಾರಿ ಮಾತನಾಡಬೇಕು ಎಂದುಕೊಂಡಿದ್ದರಂತೆ. ಈ ವಿಚಾರವಾಗಿ ಗೆಳತಿ ಪೂನಂ ದಿಲೋನ್ ಬಳಿ ಅವರು ಹೇಳಿಕೊಂಡಿದ್ದರು. ಅವರಿಂದ ಸುಮ್ಮನಿರು ಎಂಬ ಉತ್ತರ ಬಂದಿತ್ತು.

‘ಒಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ ಪ್ರಸಾರ ಆಗುತ್ತಿರುವ ಹಲವು ಕಂಟೆಂಟ್​ಗಳು ಸಮಾಜ ಒಪ್ಪದ ರೀತಿಯಲ್ಲಿ ಇರುತ್ತವೆ. ಇದನ್ನು ಟಾಪ್​ ಕಲಾವಿದರೇ ಮಾಡುತ್ತಿದ್ದಾರೆ. ನಾನು ಪೂನಂ ಅವರನ್ನು ಕರೆದು ಈ ಬಗ್ಗೆ ಮಾತನಾಡಿದ್ದೆ’ ಎಂದಿದ್ದಾರೆ ಸುಹಾಸಿನಿ. ‘ನಾನು ಮುಂಬೈಗೆ ಬಂದು ಎಲ್ಲಾ ಪ್ರಮುಖ ಹೀರೋ ಹಾಗೂ ಹೀರೋಯಿನ್​ಗಳ ಬಳಿ ಬಂದು ಮಾತನಾಡಲೇ? ನೀವು ಈ ರೀತಿಯ ದೃಶ್ಯಗಳಲ್ಲಿ ಕಾಣಿಸಿಕೊಂಡರೆ ಬೇರೆಯದ್ದನೇ ಬೆಂಬಲಿಸಿದಂತೆ ಆಗುತ್ತದೆ ಎಂಬುದನ್ನು ನಾನು ಹೇಳಲೇ ಎಂದು ಪೂನಂ ಬಳಿ ಕೇಳಿದ್ದೆ. ಸುಮ್ಮನೆ ಮದ್ರಾಸ್​ನಲ್ಲೇ ಇರಿ, ಮುಂಬೈಗೆ ಬರಬೇಡಿ ಎಂದು ಅವರು ಹೇಳಿದ್ದರು’ ಎಂಬುದಾಗಿ ಸುಹಾಸಿನಿ ಹಳೆಯ ಘಟನೆ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮಣಿರತ್ನಂ ಜನ್ಮದಿನ: ನಿರ್ದೇಶಕನ ಪ್ರೇಮ ನಿವೇದನೆಯನ್ನು ರಿಜೆಕ್ಟ್ ಮಾಡಿದ್ದ ಸುಹಾಸಿನಿ

‘ಒಟಿಟಿಯಲ್ಲಿ ಅಶ್ಲೀಲತೆ ಸಾಕಷ್ಟಿದೆ. ಇದು ಸುಲಭದಲ್ಲಿ ಸಿಗುತ್ತಿದೆ. ಜನರು ಇದನ್ನು ರಿಪೋರ್ಟ್ ಮಾಡದ ಕಾರಣ ಅದನ್ನು ನಿಲ್ಲಿಸುವುದು ತುಂಬಾ ಕಷ್ಟ. ಜನರು ಅದನ್ನೇ ನೋಡುತ್ತಿದ್ದಾರೆ’ ಎಂದು ಅವರು ಬೇಸರ ಹೊರಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ