ಮಣಿರತ್ನಂ ಜನ್ಮದಿನ: ನಿರ್ದೇಶಕನ ಪ್ರೇಮ ನಿವೇದನೆಯನ್ನು ರಿಜೆಕ್ಟ್ ಮಾಡಿದ್ದ ಸುಹಾಸಿನಿ

Mani Ratnam Birthday: ಮಣಿರತ್ನಂ ಅವರು ಒಮ್ಮೆ ಸುಹಾಸಿನಿ ಎದುರು ಪ್ರೀತಿಯ ಕೋರಿಕೆ ಇಟ್ಟಿದ್ದರು. ಆದರೆ, ಇದನ್ನು ಸುಹಾಸಿನಿ ತಿರಸ್ಕರಿಸಿದ್ದರು.

ಮಣಿರತ್ನಂ ಜನ್ಮದಿನ: ನಿರ್ದೇಶಕನ ಪ್ರೇಮ ನಿವೇದನೆಯನ್ನು ರಿಜೆಕ್ಟ್ ಮಾಡಿದ್ದ ಸುಹಾಸಿನಿ
ಸುಹಾಸಿನಿ-ಮಣಿರತ್ನಂ
Follow us
ರಾಜೇಶ್ ದುಗ್ಗುಮನೆ
|

Updated on: Jun 02, 2023 | 9:10 AM

ತಮಿಳಿನಲ್ಲಿ ಮಣಿರತ್ನಂ ಅವರಿಗೆ ದೊಡ್ಡ ಹೆಸರು. ಕನ್ನಡದ ‘ಪಲ್ಲವಿ ಅನು ಪಲ್ಲವಿ’ ಸಿನಿಮಾ (Pallavi Anu Pallavi) ಮೂಲಕ ಅವರು ನಿರ್ದೇಶನ ಆರಂಭಿಸಿದರು. 40 ವರ್ಷಗಳ ಬಳಿಕವೂ ಅವರು ಬೇಡಿಕೆ ಉಳಿಸಿಕೊಂಡಿದ್ದಾರೆ. ‘ಪೊನ್ನಿಯಿನ್ ಸೆಲ್ವನ್​, ‘ಪೊನ್ನಿಯಿನ್ ಸೆಲ್ವನ್ 2’ ಅಂತಹ ಹಿಟ್ ಚಿತ್ರಗಳು ನೀಡುತ್ತಿದ್ದಾರೆ. ಅವರಿಗೆ ಇಂದು (ಜೂನ್ 2) ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಮಣಿರತ್ನಂ ಹಾಗೂ ಸುಹಾಸಿನಿ 1988ರಲ್ಲಿ ಮದುವೆ ಆದರು. ಇವರ ಮದುವೆ ನಡೆದಿದ್ದು ಹೇಗೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಮಣಿರತ್ನಂ ಹಾಗೂ ಸುಹಾನಿಸಿ ಅವರದ್ದು ಲವ್​ ಮ್ಯಾರೇಜ್ ಅನ್ನೋದು ಅನೇಕರ ಭಾವನೆ. ಆದರೆ, ಅದು ನಿಜವಲ್ಲ. ಸುಹಾಸಿನಿ ಅವರನ್ನು ಮೊದಲ ಭೇಟಿ ಮಾಡಿದಾಗ ಮಣಿ ರತ್ನಂ ಅವರ ವಯಸ್ಸು 33 ವರ್ಷ. ಚಿತ್ರರಂಗದಲ್ಲಿ ಅವರು ಆಗ ಹೆಸರು ಮಾಡುತ್ತಿದ್ದರು. ವಿಶೇಷ ಎಂದರೆ ಸುಹಾಸಿನಿ ಆಗಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು.

ಮಣಿರತ್ನಂ ಅವರು ಒಮ್ಮೆ ಸುಹಾಸಿನಿ ಎದುರು ಪ್ರೀತಿಯ ಕೋರಿಕೆ ಇಟ್ಟಿದ್ದರು. ಆದರೆ, ಇದನ್ನು ಸುಹಾಸಿನಿ ತಿರಸ್ಕರಿಸಿದ್ದರಂತೆ. ‘ನನಗೆ ರಿಲೇಶನ್​ಶಿಪ್​ ಬಗ್ಗೆ ನಂಬಿಕೆ ಇಲ್ಲ. ನನಗೇನಿದ್ದರೂ ಮದುವೆ ಬಗ್ಗೆ ಮಾತ್ರ ಆಸಕ್ತಿ’ ಎಂದಿದ್ದರು. ಇಬ್ಬರ ಮಧ್ಯೆ ಒಳ್ಳೆಯ ಗೆಳೆತನ ಇತ್ತು. ಇಬ್ಬರೂ 1988ರಲ್ಲಿ ಮದುವೆ ಆದರು.

ಮಣಿರತ್ನಂ ಅವರನ್ನು ಸುಹಾಸಿನಿ ಆರಾಧಿಸುತ್ತಿದ್ದರು. ಇಬ್ಬರೂ ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಇವರ ಮದುವೆ ತುಂಬಾನೇ ಖಾಸಗಿ ಆಗಿ ನಡೆದಿತ್ತು. ಕೆಲವೇ ಕೆಲವು ಮಂದಿ ಮಾತ್ರ ಈ ಮದುವೆಯಲ್ಲಿ ಭಾಗಿ ಆಗಿದ್ದರು. 1992ರಲ್ಲಿ ಮಣಿರತ್ನಂ ಹಾಗೂ ಸುಹಾಸಿನಿಹೆ ಗಂಡು ಮಗು ಜನಿಸಿತು. ಮಗುವಿಗೆ ನಂದನ್ ಎಂದು ಹೆಸರು ಇಡಲಾಗಿದೆ.

ಇದನ್ನೂ ಓದಿ: ಶರತ್​​ ಬಾಬು ಅಂತ್ಯಕ್ರಿಯೆಗೆ ಬರಲಿಲ್ಲ ಕಮಲ್​ ಹಾಸನ್​; ಕಾರಣ ತಿಳಿಸಿದ ಸುಹಾಸಿನಿ ಮಣಿರತ್ನಂ

ಮಣಿರತ್ನಂ ಅವರಿಗೆ ಈ ವರ್ಷ ಬರ್ತ್​ಡೇ ತುಂಬಾನೇ ಸ್ಪೆಷಲ್ ಎನಿಸಿಕೊಂಡಿದೆ. ಏಪ್ರಿಲ್​ನಲ್ಲಿ ರಿಲೀಸ್ ಆದ ಅವರ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ಅವರ ಖ್ಯಾತಿ ಸಾಕಷ್ಟು ಹೆಚ್ಚಿದೆ. ಈ ಚಿತ್ರದಲ್ಲಿ ಐಶ್ವರ್ಯಾ ರೈ, ಕಾರ್ತಿ, ವಿಕ್ರಮ್ ಸೇರಿ ಅನೇಕ ಸ್ಟಾರ್ ಹೀರೋಗಳು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್