Sarath Babu: ಶರತ್​​ ಬಾಬು ಅಂತ್ಯಕ್ರಿಯೆಗೆ ಬರಲಿಲ್ಲ ಕಮಲ್​ ಹಾಸನ್​; ಕಾರಣ ತಿಳಿಸಿದ ಸುಹಾಸಿನಿ ಮಣಿರತ್ನಂ

Sarath Babu Death: ಚೆನ್ನೈನಲ್ಲಿ ಮೇ 23ರಂದು ಶರತ್​​ ಬಾಬು ಅವರ ಅಂತ್ಯಕ್ರಿಯೆ ನಡೆಯಿತು. ಹಲವಾರು ಸೆಲೆಬ್ರಿಟಿಗಳು ಬಂದು ಅವರಿಗೆ ಅಂತಿಮ ನಮನ ಸಲ್ಲಿಸಿದರು. ಆದರೆ ಕಮಲ್​ ಹಾಸನ್​ ಬಂದಿರಲಿಲ್ಲ.

Sarath Babu: ಶರತ್​​ ಬಾಬು ಅಂತ್ಯಕ್ರಿಯೆಗೆ ಬರಲಿಲ್ಲ ಕಮಲ್​ ಹಾಸನ್​; ಕಾರಣ ತಿಳಿಸಿದ ಸುಹಾಸಿನಿ ಮಣಿರತ್ನಂ
ಕಮಲ್ ಹಾಸನ್, ಶರತ್ ಬಾಬು, ಸುಹಾಸಿನಿ ಮಣಿರತ್ನಂ
Follow us
ಮದನ್​ ಕುಮಾರ್​
|

Updated on: May 24, 2023 | 3:03 PM

ಬಹುಭಾಷಾ ನಟ ಶರತ್​ ಬಾಬು (Sarath Babu) ಅವರು ಸೋಮವಾರ (ಮೇ 22) ನಿಧನರಾಗಿದ್ದು ನೋವಿನ ಸಂಗತಿ. ಅವರನ್ನು ಕಳೆದುಕೊಂಡು ಚಿತ್ರರಂಗ ಬಡವಾಗಿದೆ. ಅನೇಕ ಸೆಲೆಬ್ರಿಟಿಗಳು ಶರತ್​ ಬಾಬು ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಚೆನ್ನೈನಲ್ಲಿ ಮಂಗಳವಾರ (ಮೇ 23) ಅವರ ಅಂತ್ಯಕ್ರಿಯೆ (Sarath Babu Funeral) ನಡೆಯಿತು. ಹಲವಾರು ಸೆಲೆಬ್ರಿಟಿಗಳು ಬಂದು ಅವರಿಗೆ ಅಂತಿಮ ನಮನ ಸಲ್ಲಿಸಿದರು. ರಜನಿಕಾಂತ್​ ಸೇರಿದಂತೆ ಹಲವು ಹಿರಿಯ ಕಲಾವಿದರು ಅಂತ್ಯಕ್ರಿಯೆಯಲ್ಲಿ ಭಾಗಿ ಆಗಿದ್ದರು. ಆದರೆ ನಟ ಕಮಲ್​ ಹಾಸನ್​ (Kamal Haasan) ಅವರು ಬಂದಿರಲಿಲ್ಲ. ಕೇವಲ ಸೋಶಿಯಲ್​ ಮೀಡಿಯಾ ಮೂಲಕ ಅವರು ಸಂತಾಪ ಸೂಚಿಸಿದ್ದರು. ಅವರು ಅಂತ್ಯಕ್ರಿಯೆಗೆ ಬಾರದೇ ಇರಲು ಕಾರಣ ಏನು ಎಂಬುದನ್ನು ಸುಹಾಸಿನಿ ಮಣಿರತ್ನಂ ವಿವರಿಸಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಈ ವಿಚಾರ ತಿಳಿಸಿ​ದ್ದಾರೆ.

‘ಕಮಲ್​ ಹಾಸನ್​ ಅವರು ‘ಇಂಡಿಯನ್​ 2’ ಸಿನಿಮಾದ ಶೂಟಿಂಗ್​ನಲ್ಲಿ ಭಾಗಿ ಆಗಿದ್ದರು. ಅವರು ಮೇಕಪ್​ ಹಾಕಿಕೊಂಡಿದ್ದರು. ಆ ಮೇಕಪ್​ನಲ್ಲಿ ಅವರು ಹೊರಗೆ ಬರಲು ಸಾಧ್ಯವಿರಲಿಲ್ಲ. ಶರತ್​ ಬಾಬು ಕುಟುಂಬದವರ ಜೊತೆ ಅವರು ಮಾತನಾಡಿದ್ದಾರೆ. ತಪ್ಪು ತಿಳಿದುಕೊಳ್ಳಬೇಡಿ ಎಂದಿದ್ದಾರೆ’ ಅಂತ ಸುಹಾಸಿನಿ ಮಣಿರತ್ನಂ ಹೇಳಿದ್ದಾರೆ.

‘ಶರತ್​ ಬಾಬು ಅವರಿಗೆ ಅನಾರೋಗ್ಯ ಉಂಟಾದ ಮೊದಲ ದಿನದಿಂದಲೂ ಅವರನ್ನು ಉಳಿಸಲು ಕಮಲ್​ ಹಾಸನ್​ ಪ್ರಯತ್ನಿಸಿದ್ದರು. ಶರತ್​ ಬಾಬು ಅವರ ಚಿಕಿತ್ಸೆಗೆ ಎಲ್ಲ ನೆರವು ನೀಡುವುದಾಗಿ ಕಮಲ್​ ಹಾಸನ್​ ಮತ್ತು ರಜನಿಕಾಂತ್​ ಹೇಳಿದ್ದರು. ಅಂತ್ಯಕ್ರಿಯೆಯಲ್ಲಿ ರಜನಿಕಾಂತ್​ ಭಾಗಿ ಆಗಿದ್ದರು. ಆದರೆ ಬರಲು ಸಾಧ್ಯವಾಗದೇ ಇದ್ದಿದ್ದಕ್ಕೆ ಕಮಲ್​ ಹಾಸನ್​ ಕ್ಷಮೆ ಕೇಳಿದ್ದಾರೆ’ ಎಂದು ಸುಹಾಸಿನಿ ತಿಳಿಸಿದ್ದಾರೆ.

ಇದನ್ನೂ ಓದಿ: IIFA: ಐಫಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಮಲ್​ ಹಾಸನ್​ಗೆ ಸಿಗಲಿದೆ ವಿಶೇಷ ಗೌರವ

ಶರತ್​ ಬಾಬು ಮತ್ತು ಸುಹಾಸಿನಿ ನಡುವೆ ಸಾಕಷ್ಟು ವರ್ಷಗಳಿಂದ ಸ್ನೇಹವಿತ್ತು. 30ಕ್ಕೂ ಅಧಿಕ ಸಿನಿಮಾಗಳನ್ನು ಅವರು ಜೊತೆಯಾಗಿ ಕೆಲಸ ಮಾಡಿದ್ದರು. ಶರತ್​ ಬಾಬು ಅವರಿಗೆ ಯಾವುದೇ ಕೆಟ್ಟ ಚಟಗಳು ಇರಲಿಲ್ಲ ಎಂದು ಸುಹಾಸಿನಿ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: Indian 2: ‘ಇಂಡಿಯನ್​ 2’ ಶೂಟಿಂಗ್​ನಲ್ಲಿ ತಿಂಗಳುಗಟ್ಟಲೆ ಬ್ಯುಸಿ ಆಗಲಿದ್ದಾರೆ ನಟ ಕಮಲ್​ ಹಾಸನ್​​

ಶರತ್​ ಬಾಬು ನಿಧನರಾದ ಬಳಿಕ ಕಮಲ್ ಹಾಸನ್​ ಅವರು ಟ್ವೀಟ್​ ಮಾಡಿದ್ದರು. ‘ಶ್ರೇಷ್ಠ ನಟ, ಒಳ್ಳೆಯ ಸ್ನೇಹಿತನಾಗಿದ್ದ ಶರತ್​ ಬಾಬು ನಿಧನರಾದರು. ಒಳ್ಳೆಯ ನಟನನ್ನು ಚಿತ್ರರಂಗ ಕಳೆದುಕೊಂಡಿದೆ. ಅವರಿಗೆ ನನ್ನ ನಮನಗಳು’ ಎಂದು ಕಮಲ್​ ಹಾಸನ್​ ಪೋಸ್ಟ್​ ಮಾಡಿದ್ದರು.

‘ಇಂಡಿಯನ್ 2’ ಸಿನಿಮಾದಲ್ಲಿ ಕಮಲ್​ ಹಾಸನ್​ ಅವರು ವಿವಿಧ ಗೆಟಪ್​ ಧರಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರ ಮೇಕಪ್​ ವಿಶೇಷವಾಗಿ ಇರಲಿದೆ. ಆ ಕಾರಣದಿಂದಲೇ ಮೇಕಪ್​ ಹಾಕಿಕೊಂಡಿದ್ದಾಗ ಅವರಿಗೆ ಹೊರಗೆ ಬರಲು ಸಾಧ್ಯವಾಗಿಲ್ಲ. ಹಾಗಾಗಿ ಶರತ್​ ಬಾಬು ಅಂತ್ಯಕ್ರಿಯೆಗೆ ಅವರು ಗೈರಾದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್