Indian 2: ‘ಇಂಡಿಯನ್​ 2’ ಶೂಟಿಂಗ್​ನಲ್ಲಿ ತಿಂಗಳುಗಟ್ಟಲೆ ಬ್ಯುಸಿ ಆಗಲಿದ್ದಾರೆ ನಟ ಕಮಲ್​ ಹಾಸನ್​​

Kamal Haasan | Indian 2 Movie: ಸೌತ್​ ಆಫ್ರಿಕದಲ್ಲಿ 25 ದಿನಗಳ ಕಾಲ ‘ಇಂಡಿಯನ್​ 2’ ಸಿನಿಮಾದ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲು ಪ್ಲ್ಯಾನ್​ ಮಾಡಲಾಗಿದೆ. ಅದರಲ್ಲಿ ಕಮಲ್​ ಹಾಸನ್​ ಅವರು ಭಾಗವಹಿಸಲಿದ್ದಾರೆ.

Indian 2: ‘ಇಂಡಿಯನ್​ 2’ ಶೂಟಿಂಗ್​ನಲ್ಲಿ ತಿಂಗಳುಗಟ್ಟಲೆ ಬ್ಯುಸಿ ಆಗಲಿದ್ದಾರೆ ನಟ ಕಮಲ್​ ಹಾಸನ್​​
ಕಮಲ್ ಹಾಸನ್
Follow us
ಮದನ್​ ಕುಮಾರ್​
|

Updated on: Mar 31, 2023 | 12:26 PM

ನಟ ಕಮಲ್​ ಹಾಸನ್​ (Kamal Haasan) ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. 2022ರಲ್ಲಿ ಅವರಿಗೆ ‘ವಿಕ್ರಮ್​’ ಸಿನಿಮಾದಿಂದ ಭರ್ಜರಿ ಗೆಲುವು ಸಿಕ್ಕಿತು. ಅದರ ಪರಿಣಾಮವಾಗಿ ಅವರ ಮುಂಬರುವ ಸಿನಿಮಾಗಳ ಮೇಲೆ ಅಭಿಮಾನಿಗಳು ಸಖತ್​ ನಿರೀಕ್ಷೆ ಇಟ್ಟುಕೊಳ್ಳುವಂತಾಗಿದೆ. ‘ಇಂಡಿಯನ್​ 2’ (Indian 2) ಚಿತ್ರದಲ್ಲಿ ಕಮಲ್​ ಹಾಸನ್​ ನಟಿಸುತ್ತಿದ್ದಾರೆ. ಕಾರಣಾಂತರಗಳಿಂದ ಈ ಸಿನಿಮಾದ ಕೆಲಸಗಳು ತಡವಾಗಿವೆ. ನಿರ್ದೇಶಕ ಶಂಕರ್​ (Director Shankar) ಮತ್ತು ಕಮಲ್​ ಹಾಸನ್​ ಕಾಂಬಿನೇಷನ್​ ಎಂಬ ಕಾರಣಕ್ಕೆ ಹೈಪ್​ ಜಾಸ್ತಿ ಇದೆ. ಈಗ ಈ ಸಿನಿಮಾದ ಚಿತ್ರೀಕರಣಕ್ಕೆ ಚುರುಕು ಮುಟ್ಟಿಸಲಾಗುತ್ತಿದೆ. ಕಮಲ್​ ಹಾಸನ್​ ಅವರು ‘ಇಂಡಿಯನ್​ 2’ ಶೂಟಿಂಗ್​ ಸಲುವಾಗಿ ಏಪ್ರಿಲ್​ ತಿಂಗಳು ಪೂರ್ತಿ ಸಮಯ ಮೀಸಲಿಡಲಿದ್ದಾರೆ ಎಂದು ವರದಿ ಆಗಿದೆ.

ಮಾರ್ಚ್​ 29ರಂದು ‘ಪೊನ್ನಿಯಿನ್​ ಸೆಲ್ವನ್​ 2’ ಸಿನಿಮಾದ ಟ್ರೇಲರ್​ ಬಿಡುಗಡೆ ಆಯಿತು. ಚೆನ್ನೈನಲ್ಲಿ ಅದ್ದೂರಿಯಾಗಿ ನಡೆದ ಟ್ರೇಲರ್​ ರಿಲೀಸ್​ ಸಮಾರಂಭಕ್ಕೆ ಕಮಲ್​ ಹಾಸನ್​ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ಕಾರ್ಯಕ್ರಮ ಮುಗಿಸಿಕೊಂಡು ಅವರು ತೈವಾನ್​ಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಹೇಳಲಾಗುತ್ತಿದೆ. ತೈವಾನ್​ನಲ್ಲಿ ನಾಲ್ಕು ದಿನಗಳ ಕಾಲ ‘ಇಂಡಿಯನ್​ 2’ ಶೂಟಿಂಗ್​ ನಡೆಯಲಿದೆ. ಆ ಬಳಿಕ ಇಡೀ ತಂಡ ದಕ್ಷಿಣ ಆಫ್ರಿಕಕ್ಕೆ ಶಿಫ್ಟ್​ ಆಗಲಿದೆ.

ಇದನ್ನೂ ಓದಿ: Kamal Haasan: 100 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿನಿಮಾ ನಿರ್ಮಾಣ ಮಾಡ್ತಾರೆ ಕಮಲ್​ ಹಾಸನ್​; ಹೀರೋ ಯಾರು?

ಇದನ್ನೂ ಓದಿ
Image
Kamal Haasan: ವಿಶ್ವಾದ್ಯಂತ 200 ಕೋಟಿ ರೂ. ಬಾಚಿಕೊಂಡ ‘ವಿಕ್ರಮ್​’ ಸಿನಿಮಾ; ಗೆಲುವಿನ ಖುಷಿಯಲ್ಲಿ ಕಮಲ್​ ಹಾಸನ್​
Image
‘ವಿಕ್ರಮ್​’ ವಿಲನ್ ಸೂರ್ಯಗೆ ರೋಲೆಕ್ಸ್ ವಾಚ್ ಗಿಫ್ಟ್ ಕೊಟ್ಟ ಕಮಲ್ ಹಾಸನ್​; ಇದರ ಬೆಲೆ ಎಷ್ಟು ಲಕ್ಷ? ಗೆಸ್ ಮಾಡಿ
Image
‘ರಜಿನಿಕಾಂತ್​- ನಾನು ಒಳ್ಳೆಯ ಫ್ರೆಂಡ್ಸ್​, ಆದರೆ ಒಂದು ವಿಚಾರದ ಹೊರತಾಗಿ’ ಎಂದ ಕಮಲ್​ ಹಾಸನ್​; ಏನದು?
Image
ಕಮಲ್​ ಹಾಸನ್​ ಮಾಜಿ ಪತ್ನಿ ಸಾರಿಕಾಗೆ ಆರ್ಥಿಕ ಸಂಕಷ್ಟ; 3 ಸಾವಿರ ರೂಪಾಯಿಗಾಗಿ ಕಷ್ಟಪಟ್ಟ ಖ್ಯಾತ ನಟಿ

ಸೌತ್​ ಆಫ್ರಿಕದಲ್ಲಿ 25 ದಿನಗಳ ಕಾಲ ‘ಇಂಡಿಯನ್​ 2’ ಸಿನಿಮಾದ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲು ಪ್ಲ್ಯಾನ್​ ಮಾಡಲಾಗಿದೆ. ಅದರಲ್ಲಿ ಕಮಲ್​ ಹಾಸನ್​ ಅವರು ಭಾಗವಹಿಸಲಿದ್ದಾರೆ. ಇನ್ನು, ಅವರು ಭಾರತಕ್ಕೆ ವಾಪಸ್​ ಬರುವುದು ಏಪ್ರಿಲ್​ ಕೊನೆಯಲ್ಲಿ ಎಂದು ವರದಿ ಆಗಿದೆ.

ಇದನ್ನೂ ಓದಿ: 36 ವರ್ಷದ ಬಳಿಕ ಮರುಕಳಿಸಿತು ಇತಿಹಾಸ; ಕಮಲ್​ ಹಾಸನ್​-ಚಿರಂಜೀವಿ ಸ್ನೇಹದ ರೆಟ್ರೋ ಫೋಟೋ ವೈರಲ್

ದೊಡ್ಡ ಬಜೆಟ್​ನಲ್ಲಿ ‘ಇಂಡಿಯನ್​ 2’ ಸಿನಿಮಾ ತಯಾರಾಗುತ್ತಿದೆ. ಪ್ರತಿಷ್ಠಿತ ‘ಲೈಕಾ ಪ್ರೊಡಕ್ಷನ್ಸ್​’ ಮತ್ತು ‘ರೆಡ್​ ಜೈಂಟ್​ ಮೂವೀಸ್​’ ಸಂಸ್ಥೆಗಳು ಬಂಡವಾಳ ಹೂಡುತ್ತಿವೆ. ಈ ಚಿತ್ರಕ್ಕೆ ಅನಿರುದ್ಧ್​ ರವಿಚಂದರ್​ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಕಮಲ್​ ಹಾಸನ್​ ಜೊತೆಗೆ ಕಾಜಲ್​ ಅಗರ್​ವಾಲ್​, ರಾಕುಲ್​ ಪ್ರೀತ್​ ಸಿಂಗ್​, ಬಾಬಿ ಸಿಂಹ, ಭವಾನಿ ಶಂಕರ್​ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ನಿರ್ದೇಶಕ ಶಂಕರ್​ ಅವರು ರಾಮ್ ಚರಣ್​ ಜೊತೆ ‘ಗೇಮ್​ ಚೇಂಜರ್​’ ಸಿನಿಮಾ ಮಾಡುತ್ತಿದ್ದಾರೆ. ಹಾಗಾಗಿ ಅವರು ಏಕಕಾಲಕ್ಕೆ ಎರಡು ಸಿನಿಮಾಗಳ ಮೇಲೆ ಗಮನ ಹರಿಸುವಂತಾಗಿದೆ. ಆದಷ್ಟು ಬೇಗ ‘ಇಂಡಿಯನ್ 2’ ಚಿತ್ರದ ಶೂಟಿಂಗ್​ ಮುಗಿಸಿಕೊಂಡು, ಬಳಿಕ ‘ಗೇಮ್​ ಚೇಂಜರ್​’ ಸಿನಿಮಾದ ಕೆಲಸಗಳಲ್ಲಿ ಅವರು ತೊಡಗಿಕೊಳ್ಳಲಿದ್ದಾರೆ. ಆ ಚಿತ್ರದ ಫಸ್ಟ್​ ಲುಕ್ ಪೋಸ್ಟರ್​ ಇತ್ತೀಚೆಷ್ಟೇ ಬಿಡುಗಡೆ ಆಯಿತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್